1:15 AM Thursday18 - September 2025
ಬ್ರೇಕಿಂಗ್ ನ್ಯೂಸ್
ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ

ಇತ್ತೀಚಿನ ಸುದ್ದಿ

ಯಲಬುರ್ಗ- ಕುಕನೂರು ರಾಷ್ಟ್ರೀಯ ಹೆದ್ದಾರಿ 367ರ ಗಂಜೇದಗಡ ಬೈಪಾಸ್‌ಗೆ ಶಂಕುಸ್ಥಾಪನೆ: ಸಂಸದ ಬಸವರಾಜ ಬೊಮ್ಮಾಯಿ ಚಾಲನೆ

23/06/2025, 10:35

ಗದಗ(reporterkarnataka.com): ರೈಲ್ವೆ ಮತ್ತು ರಸ್ತೆ ನಿರ್ಮಾಣದಲ್ಲಿ ಅಥವಾ ಯಾವುದೇ ಜನಪರ ಯೋಜನೆಗಳಲ್ಲಿ ರಾಜ್ಯ ಮತ್ತು ಕೇಂದ್ರ ಒಂದಾಗಿ ಕೆಲಸ ಮಾಡಿದರೆ ಜನ ಹಿತವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಯಲಬುರ್ಗ ಕುಕನೂರು ರಾಷ್ಟ್ರೀಯ ಹೆದ್ದಾರಿ 367ರ ಗಂಜೇದ್ರಗಡ ಬೈಪಾಸ್ ನಿರ್ಮಾಣ (ಉಣಚಗೇರಿ-ರಾಜೂರ) ಕಾಮಗಾರಿಗೆ (ಎನ್‌ಎಚ್‌ ಒರ ಇಪಿಸಿ ಮೋಡ್ ಅಡಿಯಲ್ಲಿ ರಾಜ್ಯದ ರಾಷ್ಟ್ರೀಯ ಹೆದ್ದಾರಿ 367 ಭಾನಾಪುರ ಗದ್ದನಕೇರಿ ಸೆಕ್ಷನ್) ಗಜೇಂದ್ರಗಡ ಬೈಪಾಸ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಈ ಕಾಮಗಾರಿಯನ್ನು ನಾವೆಲ್ಲ ಸೇರಿ ಸಂತೋಷದಿಂದ ಚಾಲನೆ ನೀಡಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಈ ದೇಶದ ಜೀವನಾಡಿ, ಒಂದು ದೇಶ ಅಭಿವೃದ್ಧಿಯಾಗಬೇಕೆಂದರೆ, ಅತ್ಯಂತ ಸಕ್ಷಮವಾಗಿರುವ ರಸ್ತೆಗಳನ್ನು ಆ ದೇಶದಲ್ಲಿ ನಿರ್ಮಾಣ ಮಾಡಬೇಕು. ಅಮೇರಿಕಾದ ಅಧ್ಯಕ್ಷರನ್ನು ಕೇಳಿದಾಗ ಅವರು ರಸ್ತೆಗಳು ನಮ್ಮ ದೇಶವನ್ನು ನಿರ್ಮಾಣ ಮಾಡಿವೆ ಎಂದು ಹೇಳಿದ್ದರು. ಭಾರತ ದೊಡ್ಡ ದೇಶ ಸ್ವತಂತ್ರ ಬಂದು 78 ವರ್ಷ ಆಗಿದೆ. ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಆಗಿರಲಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಗೆ ನೇರವಾಗಿ ರಸ್ತೆಗಳು ನಿರ್ಮಾಣವಾಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ನಿತಿನ್ ಗಡ್ಕರಿಯವರು ಹೆದ್ದಾರಿ ಸಚಿವರಾದ ಮೇಲೆ ಈಗ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ರಾಷ್ಟ್ರೀಯ ಹೆದ್ದಾರಿಯಾಗಿದೆ ಎಂದು ಹೇಳಿದರು.
ಕಾಶ್ಮೀರದಲ್ಲಿ ಅತಿ ಎತ್ತರದ ಬಿಡ್ಜ್ ಆದ ಮೇಲೆ ರಸ್ತೆ ಪೂರ್ಣ ಆಗಿದೆ. ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ರಸ್ತೆಗಳು ಜೋಡಣೆಯಾಗಬೇಕು. ಆ ಹಿನ್ನೆಲೆಯಲ್ಲಿ 367 ರಸ್ತೆ ನಿರ್ಮಾಣ ತೆಗೆದುಕೊಂಡಿದ್ದೇವೆ. ಈ ಮೂಲಕ ಕುಕನೂರು ಯಲಬುರ್ಗ ಮತ್ತು ರೋಣ ಸಂಪರ್ಕ ಕಲಿಸಲಾಗುತ್ತದೆ. ಕುಕನೂರಿನಲ್ಲಿ ಭೂಸ್ವಾಧೀನ ಮುಕ್ತಾಯವಾಗಿತ್ತು. ಯಲಬುರ್ಗದವರೊಂದಿಗೆ ವ್ಯವಹಾರ ಮಾಡುವುದು ಬಹಳ ಕಷ್ಟವಿದೆ. ವಾಡಿ ರೈಲ್ವೆ ಹಳಿ ಮಾಡಲು ನರೇಗಲ್ ಗಜೇಂದಗಡ ಮಾರ್ಗದ ಮೂಲಕ ಇಳಕಲ್ ವರೆಗೂ ಜನ ಸಂಪರ್ಕ ಕಲಿಸಲು ಅನುಕೂಲವಾಗಿತ್ತು. ಆದರೆ, ಅಲ್ಲಿ ಯಲಬುರ್ಗ ಬರುತ್ತಿರಲಿಲ್ಲ ಎಂದು ಅದನ್ನು ಬದಲಾಯಿಸಿ ನಮಗೆ ತಪ್ಪಿಸಿದರು. ಈಗ ನಾವು ಮತ್ತೆ ಹೋರಾಟ ಮಾಡಬೇಕಿದೆ. ಅದಕ್ಕಾಗಿ ನಾವು ಹೋರಾಟ ಮಾಡಿ ಅದನ್ನು ಪಡೆಯುತ್ತೇವೆ. ಯಾವುದೇ ಕಾರಣಕ್ಕೂ ಗಜೇಂದ್ರಗಡ ಬೈಪಾಸ್ ಕ್ಲೀಯರ್ ಆಗುವ ಮುಂಚೆ ಕುಕನೂರು ಯಲಬುರ್ಗ ಬೈಪಾಸ್ ಆಗಬಾರದು ಎಂದು ಇಂಜನಿಯರ್‌ಗೆ ಹೇಳಿದ್ದೇನೆ. ಇಲ್ಲಿ ರೈತರ ಸಮಸ್ಯೆ ಇತ್ತು. ಫಲವತ್ತಾದ ಭೂಮಿಗೆ ಹೆಚ್ಚಿನ ಪರಿಹಾರ ನೀಡಬೇಕೆಂಬ ಒತ್ತಾಯ ಇದೆ ಅದನ್ನು ಶಾಸಕರಾದ ಜಿ.ಎಸ್‌.ಪಾಟೀಲರು ನಾನು ಕೊಡಿಸುವ ಪ್ರಯತ್ನ ಮಾಡುತ್ತೇವೆ. ರೈಲ್ವೆಯಲ್ಲಿ ಆಗಿರುವ ಅನ್ಯಾಯ ರಸ್ತೆಯಲ್ಲಿ ಆಗಬಾರದು ಎಂದು ಹೇಳಿದರು.

*ಉತ್ತರ ಕರ್ನಾಟಕ ಅಭಿವೃದ್ಧಿ:*
ಹಾವೇರಿ ಗದಗ ಜಿಲ್ಲೆ ಮೂಲಕ ಕಲ್ಯಾಣ ಕರ್ನಾಟಕ ಸಂಪರ್ಕ ಕಲ್ಪಿಸಲು ಇದು ಅನುಕೂಲವಾಗಲಿದೆ. ಕಲ್ಯಾಣ ಕರ್ನಾಟಕ ಕಿತ್ತೂರು ಕರ್ನಾಟಕ ಒಂದಾದಾಗ ಇದರಿಂದ ಸಂಪೂರ್ಣ ಉತ್ತರ ಕರ್ನಾಟಕ ಅಭಿವೃದ್ಧಿಗೆ ಪೂರಕವಾಗಲಿದೆ. ಕಾರವಾರ ಇಳಕಲ್ ರಾಷ್ಟ್ರೀಯ ಹೆದ್ದಾರಿ ಆಗುವುದರಿಂದ ಈ ಭಾಗದಲ್ಲಿ ಸಾಕಷ್ಟು ಅನುಕೂಲವಾಗಲಿದೆ. ಈಗಾಗಲೇ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತನಾಡಿದ್ದೇನೆ. ಡಿಪಿಆ‌ರ್ ಸಿದ್ಧವಾಗಿದೆ. ಪ್ರಧಾನಿ ನೇತೃತ್ವದ ಸಂಪುಟ ಉಪ ಸಮಿತಿ ಮುಂದೆ ಇದೆ. ಅದು ಅನುಮೋದನೆ ದೊರೆಯಲಿದೆ. ಅದರ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಹಾಗೂ ನಾವು ಕ್ರಮ ತೆಗೆದುಕೊಳ್ಳಬೇಕಿದೆ. ಭೂಸ್ವಾಧೀನ ಪ್ರಮುಖ ಸಮಸ್ಯೆಯಾಗಿದೆ. ಅದನ್ನು ರಾಜ್ಯ ಸರ್ಕಾರ ಬೇಗ ಮಾಡಿಕೊಟ್ಟರೆ ಕೇಂದ್ರ ಸರ್ಕಾರ ಯೋಜನೆ ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ. ಉದಾಹರಣೆಗೆ ರಾಜ್ಯದಲ್ಲಿ ಒಟ್ಟು 30 ಸಾವಿರ ಕೋಟಿಯ 6 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಮಾಡಲು ಕೇಂದ್ರದಿಂದ ಅನುಮೋದನೆ ದೊರೆತಿದೆ. ಇದನ್ನು ಐದು ವರ್ಷದಲ್ಲಿ ಮುಗಿಸಬೇಕಿದೆ. ಆದರೆ, ಭೂಸ್ವಾಧೀನ ಆಗದಿರುವುದರಿಂದ ಕೇವಲ 3 ಸಾವಿರ ಕಿ.ಮೀ ಮಾಡಲು ಸಾಧ್ಯವಾಗಿದೆ. ನಾನು ಮುಖ್ಯಮಂತ್ರಿಯಾಗಿ ಈ ಸಮಸ್ಯೆ ಪರಿಹಾರ ಮಾಡಲು ಪ್ರಯತ್ನ ಮಾಡಿದ್ದೇನೆ ಎಂದರು.
ನಾವು ಯಲವಿಗಿ ಗದಗ ರೈಲ್ವೆ ಯೋಜನೆಯನ್ನು ಅನುಮೋದನೆ ಮಾಡಿದ್ದೇವೆ. ಯಲವಿಗಿ ಗದಗ ರೈಲು ಮಾರ್ಗವಾದರೆ ಗದಗ ಭಾಗದ ಜನರಿಗೆ ಅನುಕೂಲವಾಗಲಿದೆ. ಸುಮಾರು 690 ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಲಾಗಿದೆ. ಶೀಘ್ರದಲ್ಲಿ ಅದನ್ನು ಪ್ರಾರಂಭಿಸಿದ್ದೇವೆ. ರೈಲ್ವೆ ಮತ್ತು ರಸ್ತೆ ನಿರ್ಮಾಣದಲ್ಲಿ ಅಥವಾ ಯಾವುದೇ ಜನಪರ ಯೋಜನೆಗಳಲ್ಲಿ ರಾಜ್ಯ ಮತ್ತು ಕೇಂದ್ರ ಒಂದಾಗಿ ಕೆಲಸ ಮಾಡಿದರೆ ಜನ ಹಿತವಾಗಲಿದೆ. ಯಾವುದೇ ರೀತಿಯ ತೊಂದರೆಯಾಗದಂತೆ ನಮ್ಮ ಭಾಗದ ಹಕ್ಕನ್ನು ನಾವು ಪಡೆದುಕೊಂಡು ತೀರುತ್ತೇವೆ. ಈ ಕಾಮಗಾರಿಯನ್ನು ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಬೇಕು. ಇದರಲ್ಲಿ ರಾಜೀ ಮಾಡುವ ಪ್ರಶ್ನೆಯಿಲ್ಲ. ಒಳ್ಳೆಯ ಬೈಪಾಸ್ ಆದರೆ ಎಲ್ಲರೂ ನೆನೆಸುತ್ತಾರೆ. ಈ ಭಾಗಕ್ಕೆ ಒಳ್ಳೆಯ ಭವಿಷ್ಯವಿದೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕರೆ ಅನುಕೂಲವಾಗಲಿದೆ. ಅದಕ್ಕೆ ಸಂಪರ್ಕ ಮುಖ್ಯ ಅದನ್ನು ಒದಗಿಸಲು ನಾವೆಲ್ಲ ಪಯತ್ನ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೋಣ ಶಾಸಕ ಜಿ.ಎಸ್. ಪಾಟೀಲ, ಮುಖಂಡರಾದ ಅಶೋಕ ನಲವಗುಂದ, ಎನ್.ಎಸ್. ಕೆಂಗಾರ, ಸಿದ್ದಣ್ಣ ಬಂಡಿ. ಉಮೇಶ ಮಲ್ಲಾಪುರ, ಮುತ್ತು ಕಡಗದ, ಶಿವಾನಂದ ಮಠದ, ಸುಭಾಸ ಮ್ಯಾಗೇರಿ, ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು.

*ಯೋಜನೆ ವಿವರ:*
ಬೈಪಾಸ್ ಉದ್ದ- ಗಜೇಂದ್ರಗಡ ಬೈಪಾಸ್ 5.613 ಕಿ. ಮೀ.
ಗುತ್ತಿಗೆ ಮೊತ್ತ:48 ಕೋಟಿ ರೂ.

ಇತ್ತೀಚಿನ ಸುದ್ದಿ

ಜಾಹೀರಾತು