ಇತ್ತೀಚಿನ ಸುದ್ದಿ
ಪುತ್ತೂರು ಶಾಸಕರ ಆರೋಪದ ಬೆನ್ನಲ್ಲೇ ಮಹಾಲಿಂಗೇಶ್ವರ ದೇಗುಲದ ಬಾಕಿ ಮೊತ್ತ 25 ಸಾವಿರ ಪಾವತಿಸಿದ ಮಾಜಿ ಶಾಸಕ ಮಠಂದೂರು!
25/10/2025, 16:23
ಪುತ್ತೂರು(reporterkarnataka.com): ಇಲ್ಲಿನ ಶ್ರೀ ಮಹಾಲಿಂಗೇಶ್ವರ ರಥೋತ್ಸವ ಸಂದರ್ಭದಲ್ಲಿ ಬ್ರಹ್ಮರಥ ಪೂಜೆಗೆ ರಶೀದಿ ಮಾಡಿಸಿ, ಪೂಜೆ ಪ್ರಸಾದ ಸ್ವೀಕರಿಸಿ 25 ಸಾವಿರ ರೂ. ಪಾವತಿಸದೆ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಹಾಲಿಂಗೇಶ್ವರನಿಗೆ ವಂಚಿಸಿದ್ದಾರೆ ಎಂದು ಹಾಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಆರೋಪಿಸಿದ ಬೆನ್ನಲ್ಲೇ ಮಠಂದೂರು ಅವರು ದೇಗುಲಕ್ಕೆ ಹಣ ಪಾವತಿಸಿದ್ದಾರೆ.
ಶಾಸಕ ಅಶೋಕ್ ಕುಮಾರ್ ರೈ ಅವರು ಇತ್ತೀಚೆಗೆ ನಡೆಸಿದ ಅಶೋಕ ಜನ-ಮನ ಕಾರ್ಯಕ್ರಮದಲ್ಲಿ 13 ಮಂದಿ ಅಸ್ವಸ್ಥರಾದ ಕುರಿತು ಮಠಂದೂರು ಅವರು ಪ್ರತಿಕ್ರಿಯಿಸಿ, ಇದಕ್ಕೆ ಶಾಸಕ ಅಶೋಕ್ ಕುಮಾರ್ ರೈ ಅವರ ಬೇಜವಾಬ್ದಾರಿ ಕಾರಣ ಎಂದು ಟೀಕಿಸಿದ್ದರು. ಇದರಿಂದ ಆಕ್ರೋಶಗೊಂಡ ಅಶೋಕ್ ಕುಮಾರ್ ರೈ ಅವರು ಮಾಜಿ ಶಾಸಕರು ಪ್ರಸಾದ ಸ್ವೀಕರಿಸಿ 25 ಸಾವಿರ ರೂ. ಪಾವತಿಸದೆ ವಂಚಿಸಿದ್ದಾರೆ ಎಂದು ಖಾರವಾಗಿ ಆರೋಪಿಸಿದ್ದರು.














