ಇತ್ತೀಚಿನ ಸುದ್ದಿ
ಫುಟ್ ಪಾತಿಗೆ ಕಾರು ನುಗ್ಗಿಸಿ ಯುವತಿಯ ಸಾವಿಗೆ ಕಾರಣನಾದ ಕಮಲೇಶ್ ಬಲದೇವ್ ಪೊಲೀಸರಿಗೆ ಶರಣು: ತಂದೆಯ ಜತೆ ಠಾಣೆಗೆ ಬಂದ ಆರೋಪಿ
18/10/2023, 23:08
ಮಂಗಳೂರು(reporterkarnataka.com): ನಗರದ ಲೇಡಿಹಿಲ್ ಬಳಿ ಫುಟ್ ಪಾತಿಗೆ ಕಾರು ನುಗ್ಗಿಸಿ ಯುವತಿಯ ಸಾವಿಗೆ ಕಾರಣನಾಗಿ ಕಾರಿನೊಂದಿಗೆ ಪರಾರಿಯಾದ ಚಾಲಕನನ್ನು ಬಂಧಿಸಲಾಗಿದ್ದು, ಈತನನ್ನು ಕಮಲೇಶ್ ಬಲದೇವ್ ಎಂದು ಗುರುತಿಸಲಾಗಿದೆ.
ಅಜಾಗರೂಕತೆ ಹಾಗೂ ನಿರ್ಲಕ್ಷ್ಯ ದಿಂದ ಕಾರು ಚಾಲನೆ ಮಾಡಿದ ಕಮಲೇಶ್ ಬಲದೇವ್ ಕುದ್ರೋಳಿ ದೇಗುಲಕ್ಕೆ ತೆರಳಿ ಮನೆಗೆ ವಾಪಸಾಗುತ್ತಿದ್ದ ಯುವತಿ ಹಾಗೂ ಮಕ್ಕಳಿದ್ದ ಗುಂಪಿಗೆ ಕಾರು ನುಗ್ಗಿಸಿದ್ದ. ಇದರ ಪರಿಣಾಮ ಸುರತ್ಕಲ್ ಸಮೀಪದ ಕಾನ ಬಾಳದ ನಿವಾಸಿ ಗಂಗಾಧರ ಅವರ ಪುತ್ರಿ 23ರ ಹರೆಯದ ರೂಪಶ್ರೀ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಅಪ್ರಾಪ್ತ ಬಾಲಕಿಯರು ಸೇರಿದಂತೆ ಇನ್ನೊರ್ವ ಯುವತಿ ಗಂಭೀರ ಗಾಯಗೊಂಡಿದ್ದಾರೆ. ಅಪಘಾತ ಸ್ಥಳದಿಂದ ಕಾರಿನೊಂದಿಗೆ ಪರಾರಿಯಾಗಿದ್ದ ಕಮಲೇಶ್ ಬಲದೇವ್ ಹೊಂಡಾ ಶೋ ರೂಮ್ ಬಳಿ ಕಾರನ್ನು ನಿಲ್ಲಿಸಿ ಮನೆಗೆ ತೆರಳಿದ್ದ. ಮನೆಯಲ್ಲಿ ವಿಷಯವೆಲ್ಲ ಹೇಳಿದ ಬಳಿಕ ತಂದೆ ಎಚ್.ಎಂ. ಬಲದೇವ್ ಜತೆ ಬಂದು ಪಶ್ಚಿಮ ಠಾಣೆ ಪೊಲೀಸರ ಮುಂದೆ ಶರಣಾಗಿದ್ದಾನೆ.