ಇತ್ತೀಚಿನ ಸುದ್ದಿ
ಫಿರೋಜ್ ಪುರ: ಪ್ರಧಾನಿ ಕಾರನ್ನು ತಡೆದ ಪ್ರತಿಭಟನಾಕಾರರು; 20 ನಿಮಿಷ ಫ್ಲೈಓವರ್ ನಲ್ಲೇ ಕಾದ ಮೋದಿ; ರ‌್ಯಾಲಿ ರದ್ದು
05/01/2022, 19:33
ಚಂಡೀಗಢ(reporterkarnataka.com): ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಪ್ರತಿಭಟನಾಕಾರರು ತಡೆದ ಘಟನೆ ಪಂಜಾಬ್ ನ ಫಿರೋಜ್ ಪುರ ಬಳಿ ಸೋಮವಾರ ನಡೆದಿದ್ದು, ಪ್ರಧಾನಿಯವರು ಸುಮಾರು 15ರಿಂದ 20 ರಸ್ತೆಯಲ್ಲಿ ಕಾಯುವಂತಾಯಿತು.
ಪಂಜಾಬ್ನ ಫಿರೋಜ್ಪುರದಲ್ಲಿ ಆಯೋಜಿಸಲಾದ ರ‌್ಯಾಲಿಗೆ ಪ್ರಧಾನಿ ಮೋದಿ ತೆರಳುತ್ತಿದ್ದರು. ಭಟಿಂಡಾ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಪ್ರಧಾನಿ ಮೋದಿ ಫಿರೋಜ್ಪುರಕ್ಕೆ ಹೊರಟಿದ್ದರು. ಆದರೆ ಆ ರಸ್ತೆಯನ್ನು ಕೆಲವು ಪ್ರತಿಭಟನಾಕಾರರು ಕಾರನ್ನು ತಡೆದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರಿದ್ದ ವಾಹನ ಮತ್ತು ಬೆಂಗಾವಲು ವಾಹನಗಳೆಲ್ಲ ಫ್ಲೈಓವರ್ ಮೇಲೆ 15-20 ನಿಮಿಷ ನಿಲ್ಲುವಂತಾಗಿತ್ತು. ಬಳಿಕ ಫಿರೋಜ್ಪುರ ರ‌್ಯಾಲಿಯನ್ನು ರದ್ದುಗೊಳಿಸಲಾಯಿತು. ಪ್ರಧಾನಿ ಮತ್ತೆ ಭಟಿಂಡಾ ವಿಮಾನ ನಿಲ್ದಾಣಕ್ಕೆ ವಾಪಸಾದರು.
ಪ್ರಧಾನಿ ನರೇಂದ್ರ ಮೋದಿಯವರ ರ‌್ಯಾಲಿ ಕೊನೇ ಕ್ಷಣದಲ್ಲಿ ರದ್ದಾಗಿದ್ದು, ಭದ್ರತಾ ಲೋಪದಿಂದ ರದ್ದುಪಡಿಸಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ದೆಹಲಿಗೆ ವಾಪಸ್ ಆಗಲು ಭಟಿಂಡಾ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದ ಪ್ರಧಾನಿ ಮೋದಿ ಅವರು ಅಲ್ಲಿ ಭದ್ರತೆ ಒದಗಿಸುವ ಸಲುವಾಗಿ ಇದ್ದ ಪಂಜಾಬ್ ರಾಜ್ಯ ರಕ್ಷಣಾ ಅಧಿಕಾರಿಗಳಿಗೆ, ‘ನಿಮ್ಮ(ಪಂಜಾಬ್) ಮುಖ್ಯಮಂತ್ರಿಗೆ ನನ್ನ ಧನ್ಯವಾದ ತಿಳಿಸಿ, ಕೊನೆಪಕ್ಷ ನಾನು ಭಟಿಂಡಾ ವಿಮಾನ ನಿಲ್ದಾಣದವರೆಗೆ ಜೀವಂತವಾಗಿಯಾದರೂ ಬರುವಂತೆ ಮಾಡಿದುದಕ್ಕೆ ಎಂದು ಹೇಳಿರುವುದಾಗಿ ಎಎನ್ಐ ಟ್ವೀಟ್ ಮಾಡಿದೆ.