5:23 AM Tuesday23 - December 2025
ಬ್ರೇಕಿಂಗ್ ನ್ಯೂಸ್
ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ : ತಂಬಾಕು ಮಾರಾಟಕ್ಕೆ ಅನುಮತಿ ರಾಮೇಶ್ವರಂ ಕೆಫೆ ವಿರುದ್ಧದ ಪ್ರಕರಣದಲ್ಲಿ ಹೆಚ್ಚಿನ ತನಿಖೆಗೆ ಕರ್ನಾಟಕ ಹೈಕೋರ್ಟ್ ವತಿಯಿಂದ ತಡೆಯಾಜ್ಞೆ;… ಅಟಲ್ ಜೀ ವೃಕ್ಷ ಯೋಜನೆಯಡಿ 2240 ಸಸಿ ಸಂರಕ್ಷಣೆ: ವರ್ಷಪೂರ್ತಿ ಅಟಲ್ ಜನ್ಮ… ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ಇತ್ತೀಚಿನ ಸುದ್ದಿ

ಫೀಡರ್ ಗಳಲ್ಲಿ ತುರ್ತು ದುರಸ್ತಿ ಕಾರ್ಯ: ನಾಳೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ; ಎಲ್ಲೆಲ್ಲಿ? ಮುಂದಕ್ಕೆ ಓದಿ ನೋಡಿ

11/08/2021, 08:30

ಮಂಗಳೂರು(reporterkarnataka.com):- ಇದೇ ಆ. 12ರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಕೆಪಿಟಿಸಿಎಲ್ 220/110/11ಕೆವಿ ಬಜಪೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕಟೀಲು, ಪೆರಾರ, ಈಶ್ವರಕಟ್ಟೆ, ಕಳವಾರು, ಪೆರ್ಮುದೆ, ಬಜಪೆ ಟೌನ್, ಸುಂಕದಕಟ್ಟೆ, ವಾಟರ್ ಸಪ್ಲೈ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಪೆರ್ಮುದೆ, ಭಟ್ರಕೆರೆ, ಕಣಿಕಟ್ಟ, ಹುಣ್ಸೆಕಟ್ಟೆ, ತೆಂಕ ಎಕ್ಕಾರು, ಎಕ್ಕಾರು,  ಬಜಪೆ, ಕಿನ್ನಿಪದವು, ಈಶ್ವರ ಕಟ್ಟೆ, ಮುರ, ಶಾಸ್ತಾವು, ಕಿನ್ನಿಕಂಬ್ಳ, ಮೂಡುಪೆರಾರ, ಕೊಳಪಿಲ, ಅರಿಕೆಪದವು, ಶಾಲೆಪದವು, ಕೊಂಪದವು, ಕರಿಕುಮೇರು, ಕಾಪಿಕಾಡು, ನೆಲ್ಲಿಗುಡ್ಡೆ, ಕತ್ತಲ್ ಸಾರ್, ಸೌಹಾರ್ದನಗರ, ಸಿದ್ದಾರ್ಥ ನಗರ, ಜರಿನಗರ, ಅಂಬಿಕಾನಗರ, ಸುಂಕದಕಟ್ಟೆ, ಕಳವಾರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ವಿದ್ಯುತ್ ನಿಲುಗಡೆಯಾಗಲಿದೆ.  
ನಂದಿಗುಡ್ಡ: ಆಗಸ್ಟ್ 12ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 33/11ಕೆವಿ ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ 11ಕೆವಿ ಮಂಗಳಾದೇವಿ ಫೀಡರ್ ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್.  ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
  ಆ ಪ್ರಯುಕ್ತ ಮಂಗಳಾನಗರ, ಸುಭಾಶ್ನಗರ, ಶಿವನಗರ, ಪಾಂಡೇಶ್ವರ, ಎಮ್ಮೆಕೆರೆ, ಹೊಯ್ಗೆಬಜಾರ್, ಗೂಡ್ಸ್ಶೆಡ್, ಮಂಕೀಸ್ಟ್ಯಾಂಡ್, ಮಂಗಳಾದೇವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. 
ನೆಹರೂ ಮೈದಾನ: 33/11 ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11 ಕೆವಿ ಪಾಂಡೇಶ್ವರ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್. ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. 
ಆ ಪ್ರಯುಕ್ತ ಆಗಸ್ಟ್ 12ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಎ.ಬಿ.ಶೆಟ್ಟಿ ಸರ್ಕಲ್, ಭಾರತೀಯ ವಿಶ್ವವಿದ್ಯಾಭವನ, ಎಸ್.ಪಿ.ಆಫೀಸ್, ಪಾಂಡೇಶ್ವರ ರಸ್ತೆ, ಪಾಂಡೇಶ್ವರ ನ್ಯೂ ರಸ್ತೆ, ಅಮೃತ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.   

ಇತ್ತೀಚಿನ ಸುದ್ದಿ

ಜಾಹೀರಾತು