ಇತ್ತೀಚಿನ ಸುದ್ದಿ
ಫೆ. 24: ವಲ್ಡ್ ಬುಕ್ ಆಫ್ ರೆಕಾರ್ಡ್ಸ್ ಶ್ರೇಷ್ಠತಾ ಪ್ರಮಾಣ ಪತ್ರ ಪುರಸ್ಕೃತ ಡಾ. ರೊನಾಲ್ಡ್ ಕೊಲಾಸೊಗೆ ನಾಗರಿಕ ಸನ್ಮಾನ
22/02/2023, 10:42
ಮಂಗಳೂರು(reporterkarnataka.com): ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಲಂಡನ್ ನಿಂದ ಶ್ರೇಷ್ಠತಾ ಪ್ರಮಾಣ ಪತ್ರ ಪಡೆದಿರುವ ಅನಿವಾಸಿ ಭಾರತೀಯ ಉದ್ಯಮಿ, ದಾನಿ ಡಾ.ರೊನಾಲ್ಡ್ ಕೊಲಾಸೊ ಅವರಿಗೆ ಫೆ. 24 ರಂದು ನಗರದ ಫಾದರ್ ಮುಲ್ಲರ್ ಸಭಾಂಗಣದಲ್ಲಿ ಸನ್ಮಾನ ಸಮಾರಂಭ ನಡೆಯಲಿದೆ.
ಮಾಜಿ ಶಾಸಕ ಜೆ.ಆರ್. ಲೋಬೊ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಡಾ. ಕೊಲಾಸೊ ಅವರ ಸಾಮಾಜಿಕ ಮತ್ತು ಚ್ಯಾರಿಟಿ ಕಾರ್ಯಗಳನ್ನು ಗುರುತಿಸಿ, ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಅವರಿಗೆ ಶ್ರೇಷ್ಠತೆ ಪ್ರಮಾಣ ಪತ್ರವ ನೀಡಿತ್ತು. ಅವರ ಈ ಸಾಧನೆಗಾಗಿ ಮಂಗಳೂರಿನ ನಾಗರಿಕರ ಪರವಾಗಿ ಅವರಿಗೆ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಲೋಬೊ ನುಡಿದರು.
ಬೆಂಗಳೂರು ಧರ್ಮಪ್ರಾಂತ್ಯದ ಆರ್ಚ್ ಬಿಷಪ್ ಡಾ. ಪೀಟರ್ ಮಚಾದೋ ಹಾಗೂ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ಅವರು ತಿಳಿಸಿದರು.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪೌಲ್ ಸಲ್ದಾನ, ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್. ಯೆನಪೋಯ ವಿವಿ ಚಾನ್ಸಲರ್ ಡಾ. ಅಬ್ದುಲ್ಲ ಕುಂಞಿ, ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂ. ಡಾ ಜೆರಾಲ್ಡ್ ಐಸಾಕ್ ಲೋಬೋ, ಸಿಎಸ್‌ಐ ಕರ್ನಾಟಕ ಧರ್ಮಪ್ರಾಂತ್ಯದ ಬಿಷಪ್ ರೈಟ್. ರೆ. ಹೇಮಚಂದ್ರ ಕುಮಾರ್, ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಡಾ ಲಾರೆನ್ಸ್ ಮುಕ್ಕುಝಿ, ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ ಫ್ರಾನ್ಸಿಸ್ ಸೆರ್ರಾವೋ, ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ ಹೆನ್ರಿ ಡಿʼಸೋಜ, ಶಾಸಕ ಯು.ಟಿ.ಖಾದರ್, ನಿಟ್ಟೆ ಡೀಮ್ಡ್ ಟು ಬಿ ವಿವಿ ಚಾನ್ಸಲರ್ ಡಾ ಎನ್ ವಿನಯ್ ಹೆಗ್ಡೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ತೇಜಸ್ವಿನಿ ಆಸ್ಪತ್ರೆ ಅಧ್ಯಕ್ಷ ಡಾ.ಶಾಂತಾರಾಮ ಶೆಟ್ಟಿ, ಮಂಗಳೂರಿನ ಬ್ರಹ್ಮಕುಮಾರಿ ಕೇಂದ್ರದ ರಾಜಯೋಗಿನಿ ಬಿ.ಕೆ.ವಿಶ್ವೇಶ್ವರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ರಾಷ್ಟ್ರೀಯ ಬಿಲ್ಲವರ ಮಹಾಮಂಡಳದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಸಮಾರಂಭದ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.