12:56 PM Monday7 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಇತ್ತೀಚಿನ ಸುದ್ದಿ

ಫೆಬ್ರವರಿ ತಿಂಗಳಿನಲ್ಲೇ ರಾಜ್ಯ ಬಜೆಟ್ ಮಂಡನೆ: ಮುಖ್ಯಮಂತ್ರಿ ಬೊಮ್ಮಾಯಿ

24/12/2022, 18:42

ಹಾವೇರಿ(reporterkarnataka.com): ಫೆಬ್ರುವರಿ ತಿಂಗಳಿನಲ್ಲಿಯೇ ಬಜೆಟ್ ಮಂಡನೆಯಾಗಲಿದ್ದು, ಈ ಸಂಬಂಧ ಹಣಕಾಸು ಇಲಾಖೆಯ ಜತೆಗೆ ಎರಡು ಸುತ್ತಿನ ಚರ್ಚೆ ನಡೆಸಲಾಗಿದೆ. ಅಧಿವೇಶನ ಮುಗಿದ ನಂತರ ಎಲ್ಲ ಇಲಾಖೆಗಳು, ಸಂಘ– ಸಂಸ್ಥೆಗಳೊಂದಿಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶನಿವಾರ ಶಿಗ್ಗಾಂವಿಯಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಜನವರಿ ತಿಂಗಳಿನಿಂದ ಬಜೆಟ್ ಪೂರ್ವಭಾವಿ ಸಿದ್ಧತೆಗಳನ್ನು ಮಾಡಲಾಗುವುದು ಎಂದರು.

ಕೋವಿಡ್ ಗೆ ಕ್ರಮ: ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಕುರಿತು ಮಾಹಿತಿ ನೀಡಿದ ಅವರು,ಬೂಸ್ಟರ್ ಡೋಸ್ ಗಳನ್ನು ಹೆಚ್ಚಿಸಲಾಗುವುದು. ಆಸ್ಪತ್ರೆಗಳಲ್ಲಿ ಆಕ್ಸಿಜನ್,ಬೆಡ್ ಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸಜ್ಜುಗೊಳಿಸುವುದು ಹಾಗೂ ಐಸಿಯು ಘಟಕಗಳನ್ನು ಸಿದ್ದಪಡಿಸಿಕೊಳ್ಳುವುದು. ಮಾಸ್ಕ್ ಗಳನ್ನು ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು. ಏರ್ ಪೋರ್ಟ್, ಮತ್ತು ಬಸ್ ನಿಲ್ದಾಣಗಳಲ್ಲಿ ಮೊದಲು ಪಾಲಿಸುತ್ತಿದ್ದ ನಿಯಂತ್ರಣಾ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೋವಿಡ್ ನಿಂದ ತೊಡಕು ಉಂಟಾಗುವುದೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಸಮ್ಮೇಳನ ಬಯಲು ಪ್ರದೇಶದಲ್ಲಿ ಆಗುವುದರಿಂದ, ತೊಂದರೆ ಸಾಧ್ಯತೆ ಇಲ್ಲ. ಆದರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಮಾರ್ಗಸೂಚಿಗಳನ್ನು ಸೂಚಿಸಲಾಗುವುದು ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು