ಇತ್ತೀಚಿನ ಸುದ್ದಿ
ಮುಳ್ಳಯ್ಯನಗಿರಿ, ದತ್ತಪೀಠ ಮಾರ್ಗದಲ್ಲಿ ರಸ್ತೆ ಕುಸಿತದ ಭೀತಿ: ಸೆ. 14ವರೆಗೆ ಪ್ರವಾಸ ಮುಂದೂಡುವಂತೆ ಜಿಲ್ಲಾಡಳಿತ ಮನವಿ
03/09/2025, 20:17
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ದತ್ತಪೀಠ ಮಾರ್ಗದಲ್ಲಿ ರಸ್ತೆ ಕುಸಿತದ ಭೀತಿ ಉಂಟಾಗಿದ್ದು,ಸೆಪ್ಟೆಂಬರ್ 14ವರೆಗೂ ಪ್ರವಾಸ ಮುಂದೂಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಈಗಾಗಲೇ ಮುಳ್ಳಯ್ಯನಗಿರಿ, ದತ್ತಪೀಠ ಭಾಗದ ಹೊಂಸ್ಟೇ ಬುಕ್ ಮಾಡಿದವರಿಗೆ ವಿನಾಯಿತಿ ನೀಡಲಾಗಿದೆ.
ಹೊಂಸ್ಟೇ ಹಾಗೂ ರೆಸಾರ್ಟ್ ಬುಕ್ಕಿಂಗ್ ಮಾಡೋರು ಅಧಿಕೃತ ದಾಖಲೆ ನೀಡಬೇಕು.



ಸದ್ಯಕ್ಕೆ ಸ್ಥಳೀಯ ವಾಹನ ಹಾಗೂ ಸರ್ಕಾರಿ ವಾಹನಗಳಿಗೆ ಅವಕಾಶ ನೀಡಲಾಗಿದೆ.
ಮುಳ್ಳಯ್ಯನಗಿರಿ ಕ್ರಾಸ್ ಸೇರಿ ಹಲವೆಡೆ ಕುಸಿತದ ಭೀತಿ ಉಂಟಾಗಿದೆ.
ಕುಸಿತದ ಭೀತಿಯ ಬಗ್ಗೆ ಡಿಸಿಗೆ ಉಪ ವಿಭಾಗಾಧಿಕಾರಿ ಪತ್ರ ಬರೆದಿದ್ದಾರೆ. ಎರಡು ದಿನಗಳ ಹಿಂದೆ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಧರೆ ಕುಸಿತವಾಗಿತ್ತು.
ಪ್ರವಾಸ ಮುಂದೂಡುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.














