ಇತ್ತೀಚಿನ ಸುದ್ದಿ
ಫರಂಗಿಪೇಟೆ :ಶ್ರೀ ಆಂಜನೇಯ ದೇವಸ್ಥಾನ ಬ್ರಹ್ಮ ಕಲಶೋತ್ಸವ ಸಂಭ್ರಮ, ಧಾರ್ಮಿಕ ಸಭೆ
24/01/2024, 20:46
ಬಂಟ್ವಾಳ(reporterkarnataka.com): ಧಾರ್ಮಿಕ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ನಮ್ಮ ದೇಶದ ವೈಶಿಷ್ಟ್ಯ,ವಿದೇಶಗಳಲ್ಲಿ ಧಾರ್ಮಿಕ ಚಿಂತನೆಗಳು ಕಡಿಮೆಯಾಗಿ ಭಾರತದ ಕಡೆ ನೋಡುತಿದ್ದಾರೆ, ನಮ್ಮ ಪೂರ್ವಜರು ಹಾಕಿ ಕೊಟ್ಟ ಧರ್ಮದ ಆಚಾರ ವಿಚಾರಗಳ ಪರಂಪರೆಯನ್ನು ನಾವು ಹೊಸ ರೂಪ ಹಾಗೂ ಆಯಾಮದೊಂದಿಗೆ ಅಳವಡಿಸಿ ಜೀವನ ನಡೆಸುತ್ತಿದ್ದೇವೆ, ಪುರಾತನ ಶ್ರದ್ಧಾ ಕೇಂದ್ರಗಳನ್ನು ಪುನಃರುಜ್ಜಿವನಗೊಳಿಸಿ ಧರ್ಮ ಜಾಗೃತಿಯ ಮೂಲಕ ಸಮಾಜ ಕಟ್ಟುವ ಕಾರ್ಯವು ನಡೆಯುತ್ತಿದೆ. ನಮ್ಮ ಧರ್ಮ, ಸಂಸ್ಕೃತಿಯ ಅರಿವನ್ನು ಮುಂದಿನ ಪೀಳಿಗೆಗೆ ತಿಳುಸುವ ಕಾರ್ಯ ಯುವಶಕ್ತಿಯ ಮೂಲಕ ಆಗಬೇಕಿದೆ. ಅ ನಿಟ್ಟಿನಲ್ಲಿ ಇಲ್ಲಿ ಹಿರಿಯರ ಮಾರ್ಗದರ್ಶನದ ಮೂಲಕ ಯುವ ಶಕ್ತಿಯಿಂದ ಭವ್ಯ ದೇವಸ್ಥಾನ ನಿರ್ಮಾಣವಾಗಿದೆ, ಮುಂದಿನ ದಿನಗಳಲ್ಲಿ ಧಾರ್ಮಿಕ,ಸಾಂಸ್ಕೃತಿಕವಾಗಿ ಈ ಶ್ರದ್ಧಾಕೇಂದ್ರವು ಅಭಿವೃದ್ಧಿಯಾಗಲಿ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಎಂ ಮೋಹನ ಆಳ್ವ ಹೇಳಿದರು.
ಅವರು ಫರಂಗಿಪೇಟೆಯ ವಿಜಯನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಿಲಾಮಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಜ.21ರಿಂದ 26ರ ವರೆಗೆ ನಡೆಯುವ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ 3ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನುಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ, ಮನುಷ್ಯ ಹುಟ್ಟು ದೇವರ ವರ ಅದನ್ನು ಸದುಪಯೋಗ ಮಾಡುವ, ದ್ವೇಷ ಅಸೂಯೆಯನ್ನು ಬಿಟ್ಟು ನಿಷ್ಕಲ್ಮಶ ಮನಸ್ಸಿನಿಂದ ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗುವ, ದೇವಸ್ಥಾನದ ನಿರ್ಮಾಣ ಕಾರ್ಯ ದೊಡ್ಡ ಸಾಧನೆ, ದೇವಸ್ಥಾನದ ಬ್ರಹ್ಮಕಲಶದೊಂದಿಗೆ ಆತ್ಮವನ್ನು ಶುದ್ದಿಕರಣ ಮಾಡಿ ದೇವಸ್ಥಾನವನ್ನು ನಿರಂತರ ಅಭಿವೃದ್ಧಿಪಡಿಸಿ, ಪರಿಣಾಮಕಾರಿಯಾಗಿ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನ ನಿರ್ಮಾಣ ಸಮಿತಿಯ ಗೌರವಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಕೆ. ವೆಂಕಟ್ರಾಯ, ಶ್ರೀಕೃಷ್ಣ ನಿವಾಸ ಹಾಲೂರು, ದುಗ್ಗೇ ಗೌಡ, ಪ್ರಾದೇಶಿಕ ನಿರ್ದೇಶಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಲೀಲಾಕ್ಷ ಕರ್ಕೇರ, ನಿರ್ದೇಶಕರು ನಮ್ಮ ಕುಡ್ಲ ವಾಹಿನಿ, ವೀರಾಂಜನೇಯ ವ್ಯಾಯಾಮ ಶಾಲೆಯ ಪ್ರಭಾಕರ್ ಮಾಸ್ಟರ್ ಬ್ರಹ್ಮಕಲಶೋತ್ಸವ ಸಮಿತಿಯ ಪ್ರ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಮನೋಜ್ ತುಪ್ಪಕಲ್ಲು, ದೇವಸ್ಥಾನ ನಿರ್ಮಾಣ ಸಮಿತಿಯ ಕೋಶಾಧಿಕಾರಿ ಜಯರಾಮ ಕೊಟ್ಟಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೋಪಾಲ್ ಗೋವಿಂತೋಟ ಸ್ವಾಗತಿಸಿ, ಪವನ್ ಕುಮಾರ್ ಅಬ್ಬೆಟ್ಟು ಧನ್ಯವಾದವಿತ್ತರು, ದಿನೇಶ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ಶ್ರೀ ನಾಟ್ಯಂಜಲಿ ಕಲಾ ಅಕಾಡೆಮಿ ಬೆಂಗಳೂರು ಇವರ ನೃತ್ಯ ವೈವಿದ್ಯಮ ಹಾಗೂ ದೈವರಾಜೆ ಶ್ರೀ ಬಬ್ಬುಸ್ವಾಮಿ ಎಂಬ ತುಳು ಪೌರಾಣಿಕ ನಾಟಕ ಜನ ಮೆಚ್ಚುಗೆ ಪಡೆಯಿತು.