6:18 PM Thursday4 - December 2025
ಬ್ರೇಕಿಂಗ್ ನ್ಯೂಸ್
ಕೊಡಗಿನಲ್ಲಿ ಮುಂದುವರಿದ ಆನೆ- ಮಾನವ ಸಂಘರ್ಷ: ಕುಶಾಲನಗರ ಬಳಿ ರೈಲ್ವೆ ಬ್ಯಾರಿಕೇಡ್ ಮುರಿದ… ಸಿಎಂ ಸಿದ್ದರಾಮಯ್ಯ – ವೇಣುಗೋಪಾಲ್‌ ಭೇಟಿ ಬೆನ್ನಲ್ಲೇ ದೆಹಲಿಗೆ ಹಾರಿದ ಡಿಸಿಎಂ ಡಿ.ಕೆ.… ಅಧಿಕಾರ ಹಸ್ತಾಂತರ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ -‌ ಕೆ.ಸಿ. ವೇಣುಗೋಪಾಲ್ ಭೇಟಿ; ಮಾತುಕತೆ ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

ಇತ್ತೀಚಿನ ಸುದ್ದಿ

ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ ರಮೇಶ್ ಅರವಿಂದ್: ತೆರೆದ ವಾಹನದಲ್ಲಿ ಮೆರವಣಿಗೆ

19/04/2025, 19:07

ಪುತ್ತೂರು(reporterkarnataka.com): ಸುಮಾರು 8 ದಶಕಗಳ ಇತಿಹಾಸವಿರುವ ಪುತ್ತೂರಿನ ಮುಳಿಯ ಚಿನ್ನದ ಮಳಿಗೆಯ ವಿಸ್ತೃತ ಹಾಗೂ ನವೀಕೃತ
ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಅನ್ನು ದಕ್ಷಿಣ ಭಾರತದ ಜನಪ್ರಿಯ ಸಿನಿಮಾ ನಟ ರಮೇಶ ಅರವಿಂದ್ ಅವರು ನಾಳೆ(ಏ. 20) ಉದ್ಘಾಟಿಸಲಿದ್ದಾರೆ.


ಮುಳಿಯ ಚಿನ್ನಾಭರಣಗಳ ಶೋರೂಮ್ ಹಲವು ಹೊಸತನದೊಂದಿಗೆ ದಕ್ಷಿಣ ಕನ್ನಡದ ಬೃಹತ್ ಮಳಿಗೆಯಾಗಿ ನಾಳೆ ಅನಾವರಣಗೊಳ್ಳಲಿದೆ. ಚಲನಚಿತ್ರ ನಟ ರವೇಶ್ ಅರವಿಂದ್ ಅವರು ನಾಳೆ ಬೆಳಿಗ್ಗೆ 9.30 ಗಂಟೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಆನಂತರ ದೇವರ ದೀಪದೊಂದಿಗೆ ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಶೋರೂಮ್ ಬಂದು ದೀಪ ಬೆಳಗಿಸಿ ಉದ್ಘಾಟಿಸಲಿರುವರು. ರಮೇಶ್ ಅರವಿಂದ್ ಅವರನ್ನು ತೆರೆದ ವಾಹನದಲ್ಲಿ ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಗೋಲ್ಡ್ & ಡೈಮಂಡ್ ಶೋರೂಮಿಗೆ ಕರೆತರಲಾಗುವುದು.

ಇತ್ತೀಚಿನ ಸುದ್ದಿ

ಜಾಹೀರಾತು