ಇತ್ತೀಚಿನ ಸುದ್ದಿ
ಫಲ್ಗುಣಿ ಶ್ರೀಕಲಾನಾಥೇಶ್ವರ ಸ್ವಾಮಿಯ ಸಂಭ್ರಮದ ರಥೋತ್ಸವ: ಸಹಸ್ರಾರು ಭಕ್ತರಿಂದ ವಿಶೇಷ ಪೂಜೆ
27/03/2024, 21:42
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೋಳೂರು ಸಾವಿರದ ಫಲ್ಗುಣಿ ಶ್ರೀಕಲಾನಾಥೇಶ್ವರ ಸ್ವಾಮಿಯ ರಥೋತ್ಸವ ಸಹಸ್ರಾರು ಜನರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆಯೇ ಫಲ್ಗುಣಿ ಗ್ರಾಮದ ವ್ಯಾಪ್ತಿಯ ಜನರು ದೇವಸ್ಥಾನಕ್ಕೆ ತೆರಳಿ ಹಣ್ಣು ಕಾಯಿ ಮಾಡಿಸಿದರು. ಮಹಾಮಂಗಳಾರತಿ ಕಾರ್ಯದಲ್ಲಿ ಭಾಗವಹಿಸಿ ಕಲಾನಾಥೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಕೃತಾರ್ಥರಾದರು. ಮಂಗಳವಾರ ಸಂಜೆ 4.30ರಿಂದ ಸುತ್ತಮುತ್ತಲಿನ ಗ್ರಾಮಸ್ಥರು, ಹಿರಿಯ ಮುಖಂಡರು ಜಾತ್ರೆಯಲ್ಲಿ ಭಾಗವಹಿಸಿ ಸ್ವಾಮಿಯ ರಥವನ್ನು ಎಳೆದು ಸಂಭ್ರಮಿಸಿದರು. ದೇವಸ್ಥಾನದ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಜಾತ್ರೋತ್ಸವದಲ್ಲಿ ಭಾಗವಹಿಸಿ ಉತ್ಸವಕ್ಕೆ ಕಳೆ ತಂದರು.
ಉತ್ಸವದ ಎರಡನೇ ದಿನವಾದ ಬುಧವಾರ ಕಲಾನಾಥೇಶ್ವರ ಸ್ವಾಮಿ ಹಾಗೂ ಪಾರ್ವತಿ ಅಮ್ಮನವರಿಗೆ ನೀರೋಕಳಿ ಪೂಜೆಯನ್ನು ನೆರವೇರಿಸಲಾಯಿತು. ದೇವರಿಗೆ ಅವಭೃತ ಸ್ನಾನವನ್ನು ನೆರವೇರಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.