6:45 PM Monday23 - March 2026
ಬ್ರೇಕಿಂಗ್ ನ್ಯೂಸ್
ರಷ್ಯಾದಿಂದ ಮಂಗಳೂರಿಗೆ ಕಚ್ಚಾತೈಲ ತಂದ ಹಡಗು: ಅನ್‌ಲೋಡಿಂಗ್‌ ಆರಂಭ; ಎಂಆರ್‌ಪಿಎಲ್‌ಗೆ ರವಾನೆ ಶುರು ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಚೆಂಬೆಬೆಳ್ಳೂರು ಗ್ರಾಮದಲ್ಲಿ ಒಂಟಿ ಸಲಗ ಸೆರೆ ಕೈಗೆ ಕಂಟಕ? | ದಾವಣಗೆರೆ ಉಪ ಚುನಾವಣೆ: ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸಾದಿಕ್… ಮಸ್ಕಿ ಪುರಸಭೆ ಮುಖ್ಯಾಧಿಕಾರಿಗೆ ಹೆಚ್ಚುವರಿ ಹೊಣೆ: ಹೆಚ್ಚುತ್ತಿರುವ ರಸ್ತೆ, ನೀರು, ಸ್ವಚ್ಛತೆ ಸಮಸ್ಯೆ ರಂಗೇರಿದ ದಾವಣಗೆರೆ ಉಪ ಚುನಾವಣೆ ಸಮರ: ಕೈ-ಕಮಲ ಅಭ್ಯರ್ಥಿಗಳ ಆಸ್ತಿ ವಿವರ ಘೋಷಣೆ ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್: ಬಿಜೆಪಿ ಅಭ್ಯರ್ಥಿಯಾಗಿ ಶ್ರೀನಿವಾಸ್ ದಾಸಕರಿಯಪ್ಪ ನಾಮಪತ್ರ ಸಲ್ಲಿಕೆ ದಾವಣಗೆರೆ ದಕ್ಷಿಣ ಉಪ ಚುನಾವಣೆ: ಕಾಂಗ್ರೆಸ್‌ ಟಿಕೆಟ್‌ ಘೋಷಣೆಗೂ ಮುನ್ನವೇ ಸಮರ್ಥ್‌ ಶಾಮನೂರು… ಬಾಗಲಕೋಟೆ ಉಪ ಚುನಾವಣೆ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಬಿಸಿಲ‌ ಧಗೆ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ 25ಕ್ಕೂ ಹೆಚ್ಚು ಕಡೆಯಲ್ಲಿ ಶೋಲಾ ಹುಲ್ಲುಗಾವಲಿಗೆ… Kodagu | ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಆಟೋ ಚಾಲಕ ಅರೆಸ್ಟ್

ಇತ್ತೀಚಿನ ಸುದ್ದಿ

ಅಸಾಧಾರಣಾ ಸ್ಮರಣಶಕ್ತಿ ಮತ್ತು ಭಾಷಾ ಕೌಶಲ್ಯ: 22 ತಿಂಗಳ ಮಾಶಿತಾಳಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅವಾರ್ಡ್

02/07/2025, 10:32

ಗಿರಿಧರ ಕೊಂಪಳಿರ ಮಡಿಕೇರಿ

info.reporterkarnataka@gmail.com

ಈ ಪೋರಿಗೆ ಒಂದು ವರ್ಷ ಹತ್ತು ತಿಂಗಳ ಪ್ರಾಯ. ಈಗಲೇ ತನ್ನಲ್ಲಿರುವ ಅಸಾಧಾರಣ ಬುದ್ದಿಮತ್ತೆಗಾಗಿ ಮತ್ತು ವಿಷಯವನ್ನು ಗ್ರಹಿಸುವ ವಿಶೇಷ ಸಾಮರ್ಥ್ಯಕಾಗಿ ವಿಶ್ವ ದಾಖಲೆ ಹಾಗೂ ಇಂಡಿಯಾ ಬುಕ್ ಆಫ್ ರೆಕೆರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದಾಳೆ.
ಚೆಟ್ಟಳ್ಳಿ ಸಮೀಪದ ಕಂಡಕರೆ ನಿವಾಸಿ ಕೆ.ಎಂ. ಮೊಯ್ದಿನ್ ಹಾಗೂ ಸಫ್ವಾನಾ ದಂಪತಿಯ ಪುತ್ರಿ ಮಾಶಿತಾ ತನ್ನ ಅಸಾಧಾರಣಾ ಸ್ಮರಣಶಕ್ತಿ ಮತ್ತು ಭಾಷಾ ಕೌಶಲ್ಯಕ್ಕಾಗಿ ವಿಶ್ವ ದಾಖಲೆಯೊಂದಿಗೆ
ಇಂಡಿಯಾ ಬುಕ್ ಆಫ್ ರೆಕೆರ್ಡ್ಸ್ ನಲ್ಲಿ ಮನ್ನಣೆ ಗಳಿಸಿರುವ ಮಗು ಆಗಿದೆ.
ಇಂಗ್ಲಿಷ್ ವರ್ಣಮಾಲೆಗಳು (A -Z), ಅರೇಬಿಕ್ ವರ್ಣಮಾಲೆಗಳು ಹಾಗೂ ಈ ಎರಡೂ ಭಾಷೆಗಳ ಸಂಖ್ಯೆಗಳು, ಹಣ್ಣು, ತರಕಾರಿ, ವಾಹನ ಮತ್ತು ವಿವಿಧ ದೇಶಗಳ ರಾಷ್ಟ್ರಧ್ವಜಗಳ ಹೆಸರುಗಳನ್ನು ಗುರುತಿಸುವುದು ಹಾಗೂ ಅರೇಬಿಕ್ ಭಾಷೆಯ ಸಣ್ಣ ಕವಿತೆಗಳು ಜನಪ್ರಿಯ ಮಕ್ಕಳ ಇಂಗ್ಲಿಷ್ ಹಾಡುಗಳು, ದೈನಂದಿನ ಇಸ್ಲಾಮಿಕ್ ಧಿಕ್ರ್ ಹಾಗೂ ದುವಾ ಮೂಲಕ ಈ ಸಾಧನೆ ಮಾಡಿದೆ. ಬಹುಭಾಷೆಗಳಲ್ಲಿ ವಿಷಯವನ್ನು ಪ್ರತ್ಯೇಕಿಸುವ ಮತ್ತು ಪಠಿಸುವ ಮಾಶಿತಾಳ ಸಾಮರ್ಥ್ಯವು ಅಸಾಧಾರಣಾ ಸಾಧನೆ ಎನಿಸಿದೆ.
ಆನ್ ಲೈನ್ ನಲ್ಲಿ ಮಗುವಿನ ಅಸಾಧಾರಣಾ ಗ್ರಹಿಸುವ ಮತ್ತು ಪಠಿಸುವ ಲೈವ್ ವಿಡಿಯೋ ಮೂಲಕ I.B.R. ACHEIVER ಶೀರ್ಷಿಕೆಯ ಇಂಡಿಯಾ ಬುಕ್ ಆಫ್ ರೆಕೆರ್ಡ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಅಲ್ಲದೇ ವೈಯಕ್ತಿಕ ವಿಭಾಗದಲ್ಲಿ ವಿಶೇಷ ಪ್ರತಿಭೆಯ ಅಸಾಧಾರಣಾ ಗ್ರಹಿಸುವ ಶಕ್ತಿಯ ಪ್ರತಿಭಾನ್ವಿತ ಮಗು ಎಂಬ ಶೀರ್ಷಿಕೆಯ ಕಲಾಮ್ಸ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಯನ್ನು ಪಡೆದಿದೆ. ಸೆಪ್ಟೆಂಬರ್ 27 ರಂದು ಚೆನ್ನೈನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಾಶಿತಾ ಪೋಷಕರೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು