ಇತ್ತೀಚಿನ ಸುದ್ದಿ
Ex CM | ಸಿಂಧೂರ ಕಳೆದುಕೊಂಡ ಹೆಣ್ಣು ಮಕ್ಕಳ ಪ್ರತೀಕಾರ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
07/05/2025, 16:24

ಬೆಂಗಳೂರು(reporterkarnataka.com): ಪಹಲ್ಗಾಮ್ ನಲ್ಲಿ ಅಮಾಯಕ ಭಾರತೀಯರ ಮೇಲೆ ದಾಳಿ ಮಾಡಿದ್ದ ಪಾಕ್ ಪೋಷಿತ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿ ಪ್ರತ್ಯುತ್ತರ ನೀಡಿದ್ದು, ಸಿಂಧೂರ ಕಳೆದು ಕೊಂಡಿರುವ ಹೆಣ್ಣು ಮಕ್ಕಳ ಪ್ರತೀಕಾರವಾಗಿ ಇದು ಆಪರೇಷನ್ ಸಿಂಧೂರ ದಾಳಿ ನಡೆದಿದ್ದು, ಸೇನೆಯ ಕಾರ್ಯಕ್ಕೆ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಾಕಿಸ್ತಾನವು ಅಂತಾರಾಷ್ಟ್ರೀಯ ಭಯೋತ್ಪಾದಕರ ನೆಲೆಗಟ್ಟು ಮತ್ತು ತರಬೇತಿ ನೀಡುವ ಫ್ಯಾಕ್ಟರಿ ಆಗಿ ಪರಿವರ್ತನೆ ಆಗಿದೆ. ಇದು ಕೇವಲ ಭಾರತ ಅಷ್ಟೇ ಅಲ್ಲ ಇಡೀ ವಿಶ್ವದಲ್ಲೇ ಭಯೋತ್ಪಾದನೆ ಕಿತ್ತೊಗೆಯುವ ಕೆಲಸ ಭಾರತೀಯ ಸೇನೆ ಮಾಡಿದೆ. ಇದು ಇನ್ನೂ ಪ್ರಾರಂಭ ಪಾಕಿಸ್ತಾನದಲ್ಲಿರುವ ಕೊನೆಯ ಭಯೋತ್ಪಾದಕರಿರುವವರೆಗೂ ಈ ಕಾರ್ಯಾಚರಣೆ ನಡೆಯುತ್ತದೆ ಎಂದು ಹೇಳಿದ್ದಾರೆ.
ಇಂತಹ ಸಂದರ್ಭದಲ್ಲಿ ಎಲ್ಲ ಭಾರತೀಯರು ಒಂದಾಗಿ ನಮ್ಮ ಪ್ರಧಾನಿ ನರೇಂದ್ರ ಮೊದಿ ಹಾಗೂ ನಮ್ಮ ದೇಶದ ಪ್ರಬಲ ಸೇನಾ ಪಡೆ ಹಿಂದೆ ಒಗ್ಗಟ್ಟಾಗಿ ನಿಲ್ಲಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ದೇಶಗಳು ಭಾರತದ ಈ ಕಾರ್ಯಾಚರಣೆಗೆ ಬೆಂಬಲ ಸೂಚಿಸಬೇಕು.
ಪಹಲ್ಗಾಮ್ ದಾಳಿಯಲ್ಲಿ ಮರಣ ಹೊಂದಿದ ಹಲವಾರು ಮುಗ್ದ ಭಾರತಿಯರ ಕುಟುಂಬಗಳ ಭಾವನೆ ಹಾಗೂ ತಮ್ಮ ಸಿಂಧೂರ ಕಳೆದು ಕೊಂಡಿರುವ ಹೆಣ್ಣು ಮಕ್ಕಳ ಪ್ರತೀಕಾರವಾಗಿ ಇದು ಆಪರೇಷನ್ ಸಿಂಧೂರ ಎಂದು ನಮ್ಮ ಪ್ರಧಾನಮಂತ್ರಿ ಹೆಸರಿಸಿ, ಹೆಸರಿಗೆ ತಕ್ಕ ಹಾಗೆ ದಾಳಿ ಮಾಡಿದ್ದಾರೆ. ಅವರ ಜೊತೆಗೆ ನಿಂತ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಜೈಶಂಕರ್ ಮತ್ತು ಭಾರತೀಯ ಸೇನೆಗೆ ಹೃದಯ ಪೂರ್ವಕ ಅಭಿನಂದನೆಗಳು ಎಂದು ಹೇಳಿದ್ದಾರೆ.