12:10 PM Monday4 - August 2025
ಬ್ರೇಕಿಂಗ್ ನ್ಯೂಸ್
Kodagu | ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ: ರ್‍ಯಾಂಬುಟನ್ ಹಣ್ಣು ಮಾರಾಟಕ್ಕೆ ನಿರ್ಬಂಧ; ವ್ಯಾಪಾರಸ್ಥರ… SIT | ಧರ್ಮಸ್ಥಳ ಪ್ರಕರಣ: ದೂರು ನೀಡಲು ಮತ್ತೊಬ್ಬ ದೂರುದಾರ ಎಸ್ಐಟಿ ಕಚೇರಿಗೆ… ಸುಹಾಸ್ ಶೆಟ್ಟಿ ಮರ್ಡರ್ ಕೇಸ್: ಕಾಫಿನಾಡು ಕಳಸದಲ್ಲಿ ಎನ್ಐಎ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ Bangaluru | ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಯಕೃತ್‌ ರವಾನೆ: ಸ್ಪರ್ಶ್‌ ಆಸ್ಪತ್ರೆಯಲ್ಲಿ… ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ:… ಸ್ಪಾಟ್ 1ರಲ್ಲಿ ದೊರೆತ ಡೆಬಿಟ್, ಪಾನ್ ಕಾರ್ಡ್ ವಾರಸುದಾರರು ಪತ್ತೆ; ಧರ್ಮಸ್ಥಳ ಪ್ರಕರಣಕ್ಕೂ… ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಗಳ್ಳತನದ ವಿರುದ್ಧ ರಾಹುಲ್ ನೇತೃತ್ವದಲ್ಲಿ ಆ.5ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಡಿಸಿಎಂ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಮುಂದುವರಿಯಲಿರುವ ಉತ್ಖನನ ಪ್ರಕ್ರಿಯೆ; ತಾತ್ಕಾಲಿಕ ಶೆಡ್ ನಿರ್ಮಾಣ

ಇತ್ತೀಚಿನ ಸುದ್ದಿ

ಭಾರತದ ನಾಗರಿಕರ ಮೇಲಿನ ಸಣ್ಣ ಉಗ್ರ ದಾಳಿಯೂ ಯುದ್ಧಕ್ಕೆ ಸಮ: ಗಯಾನಾ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸಂಸದ ತೇಜಸ್ವೀ ಸೂರ್ಯ ಭಾಷಣ

27/05/2025, 20:51

ಜಾರ್ಜ್‌ಟೌನ್, ಗಯಾನಾ(reporterkarnataka.com): ಭಾರತದ ನಾಗರಿಕರ ಮೇಲೆ ದಾಳಿ ನಡೆಸಿ, ನಂತರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದ ಉಗ್ರಗಾಮಿಗಳಿಗೆ ಮತ್ತು ಅದರ ಪೋಷಕ ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲಿಯೇ ದಿಟ್ಟ ಪ್ರತಿಕ್ರಿಯೆ ನೀಡುವ ಮೂಲಕ ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಾರತದ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ ಎಂಬ ಸಂದೇಶ ನೀಡಿದೆ ಎಂದು ಸಂಸದ ತೇಜಸ್ವೀ ಸೂರ್ಯ ಹೇಳಿದ್ದಾರೆ.
ಗಯಾನಾ ರಾಷ್ಟ್ರೀಯ ಅಸೆಂಬ್ಲಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು.

ಆಪರೇಶನ್‌ ಸಿಂಧೂರ ಕಾರ್ಯಾಚರಣೆ ನಡೆಸುವುದಕ್ಕಿಂತ ಮೊದಲು ಮತ್ತು ನಂತರದ ಬೆಳವಣಿಗೆಗಳ ಕುರಿತಾಗಿ ಜಾಗತಿಕ ಅಭಿಪ್ರಾಯ ಮತ್ತು ಸಂವಹನಕ್ಕಾಗಿ ಅಮೆರಿಕಾಗೆ ಭೇಟಿ ನೀಡಿರುವ ಸರ್ವಪಕ್ಷ ನಿಯೋಗದ ಭಾಗವಾಗಿ ಗಯಾನ ಕ್ಕೆ ತೆರಳಿರುವ ತಂಡವು, ಗಯಾನಾದ ಅಧ್ಯಕ್ಷ ಮೊಹಮ್ಮದ್‌ ಇರ್ಫಾನ್‌ ಅಲಿ, ಪ್ರಧಾನ ಮಂತ್ರಿ ಬ್ರಿಗೇಡಿಯರ್ (ನಿವೃತ್ತ) ಮಾರ್ಕ್ ಫಿಲಿಪ್ಸ್ ಮತ್ತು ಉಪಾಧ್ಯಕ್ಷ ಭರತ್ ಜಗ್ದೇವ್, ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಮನ್ಜೂರ್ ನಾದಿರ್ ಅವರನ್ನು ಭೇಟಿ ಮಾಡಿ, ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ಮತ್ತು ಒಗ್ಗಟ್ಟಿನ ನಿಲುವನ್ನು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿನ ‘ಶೂನ್ಯ ಸಹಿಷ್ಣುತೆ’ ಸಿದ್ಧಾಂತವನ್ನು ತಿಳಿಸಿತು. ಇದೇ ಸಂದರ್ಭದಲ್ಲಿ ಡಾ. ಶಶಿ ತರೂರ್‌ ರವರ ನೇತೃತ್ವದಲ್ಲಿನ ತಂಡವು ಜಾರ್ಜ್‌ಟೌನ್‌ನಲ್ಲಿರುವ ಐತಿಹಾಸಿಕ ಪ್ರೊಮೆನೇಡ್ ಗಾರ್ಡನ್ಸ್ ಗೆ ಭೇಟಿ ನೀಡಿ, ಮಹಾತ್ಮ ಗಾಂಧಿಯವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, 1838 ರಲ್ಲಿ ಮೊದಲ ಭಾರತೀಯರನ್ನು ಗಯಾನಾಗೆ ಕರೆತಂದ ಹಡಗು ‘ವಿಟ್ಬಿ’ಯ ಕಂಚಿನ ಪ್ರತಿಕೃತಿಗೆ ಗೌರವ ಸಲ್ಲಿಸುವ ಮೂಲಕ ಆರಂಭಿಕ ಭಾರತೀಯ ವಲಸಿಗರಿಗೆ ನಮನ ಸಲ್ಲಿಸಿದ್ದು ಗಮನಾರ್ಹ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಸೂರ್ಯ ರವರು, “ ಭಾರತ ಮತ್ತು ಗಯಾನಾ ಸಂಬಂಧವು ಸಾಂಸ್ಕೃತಿಕ ಮತ್ತು ಐತಿಹಾಸಿಕ ನೆಲೆಗಟ್ಟಿನ ಮೇಲೆ ನಿರ್ಮಾಣವಾಗಿದ್ದು, ಉಭಯ ದೇಶಗಳು ಆಳವಾದ ಸ್ನೇಹವನ್ನು ಹಂಚಿಕೊಂಡಿವೆ. ವ್ಯಾಪಾರ, ಇಂಧನ, ಕೃಷಿ ಮತ್ತು ಶಿಕ್ಷಣದಲ್ಲಿ ಹೆಚ್ಚುತ್ತಿರುವ ಸಹಕಾರದೊಂದಿಗೆ, ನಮ್ಮ ಪಾಲುದಾರಿಕೆ ಆಳ ಮತ್ತು ಉದ್ದೇಶ ಎರಡರಲ್ಲೂ ವಿಸ್ತರಿಸುತ್ತಿದೆ.
ನಮ್ಮ ಭೇಟಿಯ ಸಂದರ್ಭದಲ್ಲಿ, ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಗೆ ನಮ್ಮ ವಿರೋಧವನ್ನು ಮತ್ತು ‘ಆಪರೇಷನ್ ಸಿಂಧೂರ್’ ಮೂಲಕ ಭಾರತದ ಸೂಕ್ತ ಪ್ರತಿಕ್ರಿಯೆಯ ಅಗತ್ಯತೆಯನ್ನು ವಿವರಿಸಿದ್ದೇವೆ. ಗಯಾನಾ ಭಾರತದ ಕ್ರಿಯೆಗೆ ಸಹಾನುಭೂತಿ ಮತ್ತು ಬೆಂಬಲ ವ್ಯಕ್ತಪಡಿಸಿದ್ದು ಗಮನಾರ್ಹ. ಭಯೋತ್ಪಾದನೆಯ ವಿರುದ್ಧ ಭಾರತದ ದೃಢ ಮತ್ತು ತಾತ್ವಿಕ ನಿಲುವನ್ನು ಮತ್ತು ‘ಆಪರೇಷನ್ ಸಿಂಧೂರ್’ ಮೂಲಕ ಪಾಕಿಸ್ತಾನ-ಪ್ರಾಯೋಜಿತ ಭಯೋತ್ಪಾದನೆಗೆ ಭಾರತವು ನಿರ್ಧಿಷ್ಟ ದಾಳಿ ನಡೆಸುವ ಮುಖಾಂತರ ನೀಡಿರುವ ಪ್ರತಿಕ್ರಿಯೆ ಬಗ್ಗೆ ಗಯಾನಾದ ನಾಯಕರಿಗೆ ವಿವರಿಸಲಾಗಿದ್ದು, ಗಯಾನಾ ವು ಭಾರತದ ಭದ್ರತಾ ಸವಾಲುಗಳನ್ನು ಅರ್ಥಮಾಡಿಕೊಂಡಿದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ನಿಂತಿದೆ ಎಂಬ ಸಂದೇಶ ಗಯಾನಾದ ಪ್ರತಿನಿಧಗಳು ವ್ಯಕ್ತಪಡಿಸಿದ್ದು ವಿಶೇಷ “ಎಂದು ಸಂಸದ ಸೂರ್ಯ ರವರು ವಿವರಿಸಿದರು.
ಕಳೆದ ಒಂದು ದಶಕದಲ್ಲಿ, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ, ಭಾರತ-ಗಯಾನಾ ಸ್ನೇಹ- ಸಂಬಂಧಗಳು ಹಲವು ರಂಗಗಳಲ್ಲಿ ಧನಾತ್ಮಕ ರೀತಿಯಲ್ಲಿ ವೃದ್ಧಿಯಾಗುತ್ತಿದ್ದು, ಎರಡೂ ದೇಶಗಳು ಇಂಧನ, ಶಿಕ್ಷಣ, ಕೃಷಿ, ಸಂಶೋಧನೆ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದಿಂದ ಮುನ್ನಡೆಯುತ್ತಿರುವುದು ವಿಶೇಷ. ಇಂದು, ಗಯಾನಾದ ಜನಸಂಖ್ಯೆಯ 40% ಕ್ಕಿಂತ ಹೆಚ್ಚು ಜನರು ಭಾರತೀಯ ಮೂಲದವರಾಗಿದ್ದು, ಹೆಚ್ಚಿನ ಆರಂಭಿಕ ವಲಸಿಗರು ತಮ್ಮ ಬೇರುಗಳನ್ನು ಉತ್ತರ ಪ್ರದೇಶ ಮತ್ತು ಬಿಹಾರದೊಂದಿಗೆ ಗುರುತಿಸುತ್ತಾರೆ. ಭಾರತದೊಂದಿಗಿನ ಅವರ ನಿರಂತರ ಸಾಂಸ್ಕೃತಿಕ ಸಂಪರ್ಕವು ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಎಂದು ಸಂಸದ ತೇಜಸ್ವೀ ಸೂರ್ಯ ರವರು ತಿಳಿಸಿದ್ದಾರೆ.
ಸರ್ವಪಕ್ಷ ನಿಯೋಗವು, ಗಯಾನಾದ ವಿವಿಧ ನಾಯಕರಗಳನ್ನು ಭೇಟಿಯಾಗಿ ಈ ಕೆಳಕಂಡ ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿ ಮನವರಿಕೆ ಮಾಡಿಕೊಟ್ಟಿದ್ದು, “ ಪಾಕಿಸ್ತಾನವನ್ನು, ಭಾರತದೊಂದಿಗೆ ಸಮಾನಾಂತರವಾಗಿ ನೋಡುವುದು ನಿಜಕ್ಕೂ ಅಸಾಧ್ಯ. ಎಲ್ಲ ರಂಗಗಳಲ್ಲಿಯೂ ಭಾರತ ಮುಂದಿದೆ. ಭಾರತದೊಂದಿಗಿನ ವ್ಯಾಪಾರ, ವ್ಯವಹಾರ,ತಂತ್ರಜ್ಞಾನ, ವಿಜ್ಞಾನ, ಬಾಹ್ಯಾಕಾಶ ಕ್ಷೇತ್ರದ ಪಾಲುದಾರಿಕೆ ಜಗತ್ತಿನ ಪ್ರಗತಿಗೆ ಪೂರಕ. ಅದೇ ಪಾಕಿಸ್ತಾನ ದೊಂದಿಗಿನ ನಂಟು, ಅಭಿವೃದ್ಧಿಯ ಹಿನ್ನಡೆ, ಭಯೋತ್ಪಾದನೆಗೆ ಪ್ರೇರಣೆಗೆ ಮಾತ್ರ ಸೀಮಿತವಾಗಲಿದೆ. ಭಾರತ ಯುವ, ಉತ್ಸಾಹೀ ಪಡೆಯೊಂದಿಗೆ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ನಿರತವಾದರೆ, ಪಾಕಿಸ್ತಾನ ತನ್ನ ಯುವ ಸಮೂಹವನ್ನು ಉಗ್ರಗಾಮಿ ಕೃತ್ಯಗಳಿಗೆ ದೂಡುತ್ತಿದೆ. ವಿಶ್ವವು ಭಾರತದ ಶಕ್ತಿ, ಪಾಕಿಸ್ತಾನದ ಕುಟಿಲ ನೀತಿಗಳನ್ನು ಅರ್ಥ ಮಾಡಿಕೊಂಡು ಸೂಕ್ತ ಹೆಜ್ಜೆ ಇಡುವ ಅಗತ್ಯತೆ ಇದೆ” ಎಂಬುದರ ಕುರಿತು ವಿವರಿಸಲಾಗಿದೆ ಎಂದು ಸಂಸದ ಸೂರ್ಯ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು