ಇತ್ತೀಚಿನ ಸುದ್ದಿ
ಎಣ್ಮೂರು ಶ್ರೀ ಕೋಟಿ ಚೆನ್ನಯ ಗರೋಡಿ ನೇಮೋತ್ಸ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಭೇಟಿ; ವಿಶೇಷ ಪ್ರಾರ್ಥನೆ
24/03/2024, 20:03

ಕಡಬ(reporterkarnataka.com):ಕಡಬ ತಾಲೂಕಿನ ಎಣ್ಮೂರು ಶ್ರೀ ನಾಗಬ್ರಹ್ಮ ಶ್ರೀ ಕೋಟಿ ಚೆನ್ನಯ ಆದಿ ಬೈದೇರುಗಳ ಗರೋಡಿಯಲ್ಲಿ ನೇಮೋತ್ಸವ ಅಂಗವಾಗಿ ಶ್ರೀ ಕ್ಷೇತ್ರಕ್ಕೆ ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ ನೀಡಿ ಅವಳಿ ವೀರರ ಆಶೀರ್ವಾದ ಬೇಡಿ, ಕಿನ್ನಿದಾರು ಅಮ್ಮರವರ ಅನುಗ್ರಹ ಪಡೆದರು.
ಕ್ಷೇತ್ರದ ಮೊಕ್ತೇಸರರು, ಆಡಳಿತ ಸಮಿತಿಯ ಪದಾಧಿಕಾರಿಗಳು ಸ್ವಾಗತಿಸಿದರು. ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಇದ್ದರು.