ಇತ್ತೀಚಿನ ಸುದ್ದಿ
ಕೋಲಾರ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿ; ತೇರಹಳ್ಳಿ ಬೆಟ್ಟ ಪ್ರವಾಸಿ ತಾಣವಾಗಿ ಅಭಿವೃದ್ಧಿ; ಡಿಸಿಎಫ್ಒ ಸರೀನಾ ಸಿಕ್ಕಲಿಗಾರ್
28/03/2025, 13:28

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ಜಿಲ್ಲೆಯಾದಾದ್ಯಂತ ಸುಮಾರು 10 ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಅಂದಾಜಿಸಲಾಗಿದೆ, ಒತ್ತುವರಿ ತೆರವು ಕಾರ್ಯ ಮುಂದುವರೆಸಲಾಗಿದೆ ಮತ್ತು ತೇರಹಳ್ಳಿ ಬೆಟ್ಟ ಹಾಗೂ ಅಂತರಗಂಗೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅನುದಾನ ಬಿಡುಗಡೆಯಾದರೆ ಕ್ರಮವಹಿಸುವುದಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್ ಹೇಳಿದರು.
ಕೋಲಾರ ನಗರ ಹೊರವಲಯದ ಉಪ ಅರಣ್ಯ ಸಂರಕ್ಷಣಾ ಇಲಾಖೆ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೇರಹಳ್ಳಿ ಬೆಟ್ಟದಲ್ಲಿ ಅರಣ್ಯ ಒತ್ತುವರಿಯಾಗಿದ್ದರೆ ಅಲ್ಲಿಯೂ ತೆರವುಗೊಳಿಸಲು ಬದ್ದವಾಗಿರುವುದಾಗಿ ತಿಳಿಸಿದರು.
ಈಗಾಗಲೇ ಈ ಹಿಂದಿನ ಅಧಿಕಾರಿ ಏಡಕೊಂಡಲು ಅವರು ಒತ್ತುವರಿ ತೆರವು ಕಾರ್ಯವನ್ನು ಪ್ರಾರಂಭಿಸಿದ್ದರು. ಅವರ ವರ್ಗಾವಣೆಯ ನಂತರ ಅವರ ಸ್ಥಾನಕ್ಕೆ ಬಂದ ನಾನು ಒತ್ತುವರಿ ತೆರವು ಮುಂದುವರೆಸಿರುವುದಾಗಿ ತಿಳಿಸಿದರು.
ಕೆಲವರು ಸುಳ್ಳು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಒತ್ತುವರಿ ಮಾಡಿಕೊಂಡಿದ್ದಾರೆ. ಅವುಗಳನ್ನು ತೆರವು ಕಾರ್ಯಾಚರಣೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಹಂತ ಹಂತವಾಗಿ ಪ್ರಾರಂಭಿಸಲಾಗಿದೆ. ಈಗಾಗಲೇ ಕಾಮಸಮುದ್ರ ಗ್ರಾಮದಲ್ಲಿ 70 ಎಕರೆ ಹಾಗೂ ಕೋಲಾರ ತಾಲ್ಲೂಕಿನ ಅಬ್ಬಣಿ ಅರಣ್ಯದ 616 ಎಕರೆ ಒತ್ತುವರಿಯಲ್ಲಿ ಈಗಾಗಲೇ 210 ಎಕರೆ ಒತ್ತುವರಿಯನ್ನು ತೆರವು ಮಾಡಲಾಗಿದೆ. ಕಳೆದ 1931ರ ನೋಟಿಫಿಕೇಷನ್ ಪ್ರಕರಣ ಅರಣ್ಯ ಪ್ರದೇಶದ ಬೌಂಡೆರಿಯನ್ನು ಗುರುತಿಸಲಾಗಿದೆ. ಇದು ನಾನು ಬಂದ ನಂತರ ತೆರವು ಆಗಿದೆ. ಈ ಹಿಂದೆ ಏಡಕೊಂಡಲೂ ಅವರು 2800 ಎಕರೆ ಒತ್ತುವರಿಯನ್ನು ತೆರವು ಮಾಡಿಸಿದ್ದರು ಎಂದು ಹೇಳಿದರು.
ನಾವು ರೈತರು, ನಾವು ಬಡವರು ಎಂಬ ಪ್ರಶ್ನೆಯೇ ಬರುವುದಿಲ್ಲ. ಕಾನೂನಿಗೆ ಎಲ್ಲರೂ ಒಂದೇ, ಶ್ರೀನಿವಾಸಪುರ ತಾಲ್ಲೂಕಿನ ಜಿನುಗುಲಕುಂಟೆ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಒತ್ತುವರಿದಾರರಿಗೆ 3 ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೆಲವು ದಾಖಲೆಗಳನ್ನು ಮುಂದಿಟ್ಟು ಕೊಂಡು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಾವು ಈಗಾಗಲೇ ಜಂಟಿ ಸರ್ವೆ ಸಹ ಮಾಡಲಾಗಿದೆ. ನಮ್ಮಲ್ಲಿ 3 ಎಕರೆ ಒಳಗೆ ಇರುವ ಜಾಗವನ್ನು ಒಂದು ಕುಟುಂಬಕ್ಕೆ ಕೆಲವೊಂದು ನಿಯಮಗಳ ಬಿಡಬಹುದು ಎಂಬುವುದನ್ನು 50-60 ಪ್ರಕಾರ ಮಂದಿ 3-4 ಎಕರೆ ತಂಡು ಭೂಮಿಯ ದಾಖಲೆಗಳನ್ನು ಮಾಡಿಸಿ ಕೊಂಡಿರುವ ಹಿಂದೆ ರಿಯಲ್ ಎಸ್ಟೇಟ್ ದಂಧೆ ನಡೆಸುವವರ ಕೈವಾಡ ಇರಬಹುದು ಎಂದು ಪ್ರಶ್ನೆಯೊಂದಕ್ಕೆ ಸ್ವಷ್ಟ ಪಡಿಸಿದರು.
ಹಲವಾರು ಪ್ರಕರಣಗಳು ಈಗಾಗಲೇ ವಜಾಗೊಂಡಿದೆ. ವಜಾ ಆಗಿರುವ ಭೂಮಿಯನ್ನು ಅರಣ್ಯ ಇಲಾಖೆ ತೆರವು ಮಾಡಿ ಸ್ವಾಧೀನಕ್ಕೆ ಪಡೆದುಕೊಂಡು ಫೇನ್ಸಿಂಗ್ ಹಾಕಲಾಗುತ್ತಿದೆ ಎಂದರು.
ನ್ಯಾಯಾಲಯದಲ್ಲಿ ಇತ್ಯರ್ಥವಾಗದಿರುವ
ಪ್ರಕರಣಗಳನ್ನು ಇತ್ಯರ್ಥಕ್ಕಾಗಿ ಕಾಯಲಾಗುತ್ತಿದೆ. ಅರಣ್ಯ ಭೂಮಿಯನ್ನು ಯಾರು ಕಸಿಯಲು ಸಾಧ್ಯವೇ ಇಲ್ಲ. ಅದರೆ ಸ್ವಲ್ಪ ವಿಳಂಬ ಅಗಬಹುದು ಅಷ್ಟೆ ಎಂದರು.
ಇನ್ನು ಶ್ರೀನಿವಾಸಪುರ ತಾಲೂಕಿನ ಜಿನಗುಲಕುಂಟೆ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಂಕಿ ಅಂಶಗಳು ತಾಳೆಯಾಗದಿರುವುದು ಅಲ್ಪ ಸ್ವಲ್ಪ ಲೋಪ ದೋಷಗಳಿರ ಬಹುದೇನೂ ಪರಿಶೀಲಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ನಾವು ಸಹ 9 ಆಕ್ಷೇಪಣೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಮೊದಲ ದಿನವೇ 116 ಎಕರೆ ಭೂಮಿ ಸೇರಿದಂತೆ ಸುಮಾರು 200 ಎಕರೆ ತೆರವು ಮಾಡಬೇಕಾಗಿದ್ದು ಅದರ ಮೌಲ್ಯ 100 ಕೋಟಿಗೂ ಹೆಚ್ಚು ಎಂದರು.
ಎಂಎಲ್ ಸಿ ಗೋವಿಂದರಾಜು ಅವರಿಗೆ ಪ್ರಕರಣದ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ. ಅಲ್ಲದೆ ಅವರು ನ್ಯಾಯಾಲಯದ ಹಂತದಲ್ಲಿ ವಿಚಾರಣೆ ನಡೆಯುತ್ತಿದೆ. ಕೆಲವೊಂದು ಪಕ್ಷಿಗಳು ಆ ಪ್ರದೇಶದಲ್ಲಿರುವುದರಿಂದ ಮಾನವೀಯತೆ ಮೇಲೆ ಕಾಲಾವಕಾಶ ನೀಡಲಾಗಿದೆ. ಹೊರತಾಗಿ ಬೇರೆ ರೀತಿಯಲ್ಲಿ ಅರ್ಥೈಸಬಾರದು ಎಂದರು.
ಅರಣ್ಯ ಪ್ರದೇಶಗಳಲ್ಲಿ ರಸ್ತೆಗಳನ್ನು ನಿರ್ಮಿಸಲು ಅನುಮತಿ ಪಡೆಯ ಬೇಕಾಗುತ್ತದೆ. ಸರ್ಕಾರಿ ಇಲಾಖೆಗಳು ಮಾಡುತ್ತಿದ್ದಾರೆ ಬೇರೆ ಕಡೆ ಅಷ್ಟು ಜಾಗವನ್ನು ನೀಡ ಬೇಕಾಗುತ್ತದೆ ಎಂದ ಅವರು ಪ್ರಶ್ನೆಯೊಂದಕ್ಕೆ ಈಗಾಗಲೇ ಕಾಡು ಪ್ರದೇಶಗಳಲ್ಲಿ ಸಿಮೆಂಟ್ ನೀರಿನ ತೊಟ್ಟಿಗಳನ್ನು ಮಾಡಿ ನೀರು ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.