ಇತ್ತೀಚಿನ ಸುದ್ದಿ
85 ಕೆಜಿ ಪ್ಲಾಸ್ಟಿಕ್ ಗೆ 400 ಕೆಜಿ ಅಕ್ಕಿ!!: ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ವಿರುದ್ಧ ವಿಶೇಷ ಜನಜಾಗೃತಿ
02/10/2022, 11:30
ಪುಂಜಾಲಕಟ್ಟೆ(reporterkarnataka.com): ಪರಿಸರ ಸಂರಕ್ಷಣೆಗಾಗಿ ಪ್ಲಾಸ್ಟಿಕ್ ಬಳಕೆ ಕಡಿತಗೊಳಿಸಲು ಸ್ವಯಂ ಜಾಗೃತಿ ಅಗತ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೇಳಿದರು.
ದ.ಕ.ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್ , ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ತಾಲೂಕು ಪತ್ರಕರ್ತರ ಸಂಘ ಮತ್ತು ಪಿಲಾತಬೆಟ್ಟು ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಪರಿಸರ ಸಂರಕ್ಷಣೆ ಗಾಗಿ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜಾಗೃತಿ ಮತ್ತು ಸ್ವಚ್ಛತಾ ಕಾರ್ಯಕ್ರಮವನ್ನು ಸುವಿಧ ಸಹಕಾರಿ ಭವನ ಪುಂಜಾಲಕಟ್ಟೆ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಪ್ಲಾಸ್ಟಿಕ್ ಏಕೆ ಪರಿಸರಕ್ಕೆ ಹಾನಿಕಾರಕವೆಂದರೆ ಅದು ಮಣ್ಣಿನಲ್ಲಿ ಸೇರಲು 250ಕ್ಕೂ ಹೆಚ್ಚು ವರ್ಷ ತೆಗೆದುಕೊ ಳ್ಳುತ್ತದೆ.ಅಷ್ಟು ದೀರ್ಘ ಕಾಲ ಪರಿಸರದಲ್ಲಿ ಸೇರಿ ಹೋಗದೆ ಮನುಷ್ಯರು ಎಲ್ಲಾ ಜೀವಿಗಳ ಜೈವಿಕ ಪರಿಸರಕ್ಕೆ ಹಾನಿಯ ನ್ನುಂಟು ಮಾಡುತ್ತದೆ.ಪ್ಲಾಸ್ಟಿಕ್ ಬಳಕೆ ಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲಿಯೂ ಸ್ವಯಂ ಜಾಗೃತಿ ಮೂಡಿದಾಗ ಸಾಮೂಹಿಕ ಪ್ರಯತ್ನ ಸಾಧ್ಯ.ಪರಿಸರ ಮಾಲಿನ್ಯ ತಡೆಯಲು ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಸಂಘಟನೆಗಳ ಜೊತೆ ಪತ್ರ ಕರ್ತರು ವಿಶೇಷ ಕಾರ್ಯ ಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಕೃಷ್ಣ ಮೂರ್ತಿ ತಿಳಿಸಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯ ತಂದ ಸ್ಥಳೀಯ ರಿಗೆ ಕುಚ್ಚಲು ಅಕ್ಕಿಯನ್ನು ಪ್ರೋತ್ಸಾಹಕವಾಗಿ ನೀಡಲಾಯಿತು.ಅಕ್ಕಿ ಯನ್ನು ಕೊಡುಗೆ ಯಾಗಿ ನೀಡಿದ ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪೂಂಜಾಲಕಟ್ಟೆಯವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.ಮುಖ್ಯ ಅತಿಥಿಗಳಾಗಿ ಮಂಗಳೂರು ಅರಣ್ಯ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್ ಮಾತನಾಡುತ್ತಾ,ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆ ಕಡಿತಗೊಳಿಸಲು ಹಮ್ಮಿಕೊಂಡಿರುವ ಜಾಗೃತಿ ಮಹತ್ವದ್ದಾಗಿದೆ.ಪ್ಲಾಸ್ಟಿಕ್ ಪರಿಸರದಲ್ಲಿ ಸೇರಿಕೊಂಡಾಗ ನಮಗೆ ನಾವೆ ಅಪಾಯ ವನ್ನು ತಂದು ಕೊಂಡಂತಾಗುತ್ತದೆ.ಈ ನಿಟ್ಟಿನಲ್ಲಿ ಜನರು ಪ್ಲಾಸ್ಟಿಕ್ ತ್ಯಾಜ್ಯ ವನ್ನು ಸಂಗ್ರಹಿಸುವಂತೆ ಮಾಡುವ ಮೂಲಕ ಹಮ್ಮಿಕೊಂಡಿರುವ ಜಾಗೃತಿ ಕಾರ್ಯ ಕ್ರಮ ಮಾದರಿ ಕಾರ್ಯ ಕ್ರಮ ಎಂದು ಶ್ಲಾಘಿಸಿದ ರು.ದ.ಕ. ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ ಪ್ರಸ್ತಾವಿಕವಾಗಿ ಮಾತನಾಡುತ್ತಾ, ಪ್ಲಾಸ್ಟಿಕ್ ಬಳಕೆಯ ವಿರುದ್ಧ ಬಂಟ್ವಾಳ ತಾಲೂಕು ಪತ್ರ ಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪೂಂಜಾಲಕಟ್ಟೆ ಸ್ವಯಂ ಆಸಕ್ತಿ ಯಿಂದ ಅಕ್ಕಿ ಯನ್ನು ಕೊಡುಗೆ ಯಾಗಿ ನೀಡಿರುವುದು ಮಾದರಿ ಎಂದು ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ ಅಧ್ಯಕ್ಷ ತೆ ವಹಿಸಿದ್ದರು.ದ.ಕ. ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ, ಬಂಟ್ವಾಳ ತಾಲೂಕು ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪೂಂಜಾಲಕಟ್ಟೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲಕ್ಷ್ಮೀನಾರಾ ಯಣ,ದ.ಕ ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಸದಸ್ಯ ರಾಜೇಶ್ ದಡ್ಡಂಗಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯರು 85.350 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ತಂದಿದ್ದರು. ಅವರಿಗೆ 400 ಕೆ.ಜಿ.ಅಕ್ಕಿ ವಿತರಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಮಪ್ಪ ಕೊರವರು ಸ್ವಚ್ಛತಾ ಪ್ರಮಾಣ ವಚನ ಬೋಧಿಸಿದರು. ದ.ಕ.ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮೌನೇಶ್ ವಿಶ್ವ ಕರ್ಮ ವಂದಿಸಿದರು.