ಇತ್ತೀಚಿನ ಸುದ್ದಿ
ಕೊಡಗಿನಲ್ಲಿ ಮುಂದುವರೆದ ಆನೆ -ಮಾನವ ಸಂಘರ್ಷ: ಒಂದು ಬಲಿ; ಮತ್ತೊಬ್ಬನ ಮೇಲೂ ದಾಳಿ
08/07/2025, 13:05

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ದಕ್ಷಿಣ ಕೊಡಗಿನಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ವ್ಯಕ್ತಿ ಒಬ್ಬನ ಮೇಲೆ ಆನೆ ದಾಳಿ ನಡೆಸಿ ಸೈಕಲ್ ಸಂಪೂರ್ಣ ನಜ್ಜುಗುಜ್ಜು ಆಗಿ ಸವಾರ ಪರಾಗಿರುವ ಬೆನ್ನಲ್ಲೇ ಅದೇ ಮಾರ್ಗದಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ಕೊಡಗಿನ ಪೊನ್ನoಪೇಟೆ ತಾಲ್ಲೂಕಿನ ಬಾಳೆಲೆ ಸಮೀಪ ಪೊನ್ನಪ್ಪಸಂತೆ ರಸ್ತೆಯಲ್ಲಿ ಬೆಳಗಿನ ಜಾವ 7:00 ಸುಮಾರಿಗೆ ಕೋಣನ ಕಟ್ಟೆಯ ನಿವಾಸಿ ಹಾಗೂ ಬಾಳಲಿಯಲ್ಲಿ ಜೆರಾಕ್ಸ್ ಅಂಗಡಿಯ ಮಾಲೀಕ ಅಜಯ್ ಎಂಬುವನು ಬೆಳಿಗ್ಗೆ ಸೈಕ್ಲಿಂಗ್ ಮಾಡುತ್ತಿರುವಾಗ ಆನೆ ದಾಳಿ ನಡೆಸಿದೆ.
ಅಜಯ್ ಪ್ರಾಣಪಾಯದಿಂದ ಪಾರಾಗಿದ್ದು ಸೈಕಲ್ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ, ಅದೇ ಮಾರ್ಗದಲ್ಲಿ ತೆರಳುತ್ತಿದ್ದ ವ್ಯಕ್ತಿ ಮೇಲೆ ದಾಳಿ ನಡೆಸಿ ಆತನನ್ನು ಬಲಿ ಪಡೆದುಕೊಂಡಿದೆ. ಸ್ಥಳಕ್ಕೆ ಅರಣ್ಯಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು, ಸ್ಥಳೀಯರು ನಿರಂತರ ಆನೆ ಹಾವಳಿ ವಿರುದ್ದ ಆಕ್ರೋಶಗೊಂಡಿದ್ದಾರೆ.