5:01 PM Friday4 - July 2025
ಬ್ರೇಕಿಂಗ್ ನ್ಯೂಸ್
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ

ಇತ್ತೀಚಿನ ಸುದ್ದಿ

ಈ ಕುಗ್ರಾಮಕ್ಕೆ ಜೋಳಿಗೆಯೇ ಆ್ಯಂಬ್ಯುಲೆನ್ಸ್!: ಸಕಾಲದಲ್ಲಿ ಚಿಕಿತ್ಸೆ ಲಭಿಸದೆ 19ರ ಯುವಕ ಸಾವು; 3 ವರ್ಷದಲ್ಲಿ 3ನೇ ಬಲಿ!!

31/08/2024, 15:59

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಸಮೀಪದ ಕೋಣೆಗೂಡು ಗ್ರಾಮದ ಯುವಕನೊಬ್ಬ ಸಕಾಲದಲ್ಲಿ ಚಿಕಿತ್ಸೆ ಲಭಿಸದೆ ಮೃತಪಟ್ಟ ದಾರುಣ ಘಟನೆ ನಡೆದಿದೆ. ಈ ಕುಗ್ರಾಮಕ್ಕೆ ಜೋಳಿಗೆಯೇ ಆ್ಯಂಬ್ಯುಲೆನ್ಸ್ ಆಗಿದೆ. ಜೋಳಿಗೆಯಲ್ಲೇ ಅನಾರೋಗ್ಯಪೀಡಿತ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ, ಮೃತದೇಹವನ್ನು ಜೋಳಿಗೆಯಲ್ಲೇ ವಾಪಸ್ ತರಲಾಗಿದೆ.


ಕೋಣೆಗೂಡು ಗ್ರಾಮದ ಅವಿನಾಶ್ ಎಂಬ 19ರ ಹರೆಯದ ಯುವಕ ಅನಾರೋಗ್ಯಕ್ಕೀಡಾಗಿದ್ದರು. ರಸ್ತೆ ಸಂಪರ್ಕವಿಲ್ಲದ ಕುಗ್ರಾಮ ಆಗಿರುವುದರಿಂದ ಅನಾರೋಗ್ಯಪೀಡಿತ ಯುವಕನನ್ನು ಬೆನ್ನ ಮೇಲೆ ಹಾಕಿ ಕೊಂಡು ಸಂಬಂಧಿಕರು ಮರದ ಕಾಲುಸಂಕವಿರುವ ತೋಡು ದಾಟಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದರು. ಮತ್ತೆ ಮೃತದೇಹವನ್ನು ಅದೇ ರೀತಿ ಜೋಳಿಗೆಯಲ್ಲಿ ಹಾಕಿ ಸಾಗಿಸಲಾಯಿತು. ಇಲ್ಲಿಗೆ ಆ್ಯಂಬ್ಯುಲೆನ್ಸ್ ಬಂದ್ರೂ ನಿಲ್ಲೋದು ಊರಿನಿಂದ 1.5 ಕಿ.ಮೀ. ದೂರದಲ್ಲಿ!. ಆ್ಯಂಬ್ಯುಲೆನ್ಸ್ ಬಂದ್ರು ಹಳ್ಳ ದಾಟೋಕ್ಕೆ ಆಗೋಲ್ಲ.
ಜೋಳಿಗೆಯಲ್ಲಿ ಹೊತ್ಕೊಂಡೆ ಕಾಲು ಸಂಕ ದಾಟಬೇಕು.
ಮೂರು ವರ್ಷದಲ್ಲಿ ಒಂದೇ ಗ್ರಾಮದ ಮೂರು ಜನ ಸಾವನ್ನಪ್ಪಿದ್ದಾರೆ. ಗಂಭೀರ ಕಾಯಿಲೆ ಬಿದ್ರೆ ಊರಿನ ಜನ ಇದ್ರೆ ಮಾತ್ರ ಜೀವ ಉಳಿಯೋದು ಎನ್ನುವ ಪರಿಸ್ಥಿತಿ ಇದೆ.
ಜೀವ ಉಳಿಸಿಕೊಳ್ಳೋಕೆ ಸೇತುವೆ ರಸ್ತೆ ಮಾಡಿ‌ ಎಂದು ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಕೋಣೆಗೂಡು ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು