7:57 PM Monday6 - January 2025
ಬ್ರೇಕಿಂಗ್ ನ್ಯೂಸ್
ಊಟದಲ್ಲಿ ರಾಜಕೀಯ ಬೆರೆಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್ ಮೂಡಿಗೆರೆ: ಹುಲಿ ದಾಳಿಗೆ ಬಾಣಂತಿ ಹಸು ಬಲಿ; ಕರುವಿನ ಆಕ್ರಂಧನ ಬೆಂಗಳೂರು: 22ನೇ ಚಿತ್ರಸಂತೆ ಉದ್ಘಾಟನೆ; ಕಲಾಕೃತಿ ಕೊಂಡು ಕಲಾವಿದರ ಬೆಂಬಲಿಸಲು ಮುಖ್ಯಮಂತ್ರಿ ಕರೆ ವಿರೋಧ ಪಕ್ಷ ಆರೋಪ ಮಾಡಿದರೆ ಸಾಬೀತು ಮಾಡಬೇಕು: ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ ಇಡಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಲೂಟಿ: ಕಠಿಣ… ಬೆಂಗಳೂರು: ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವ ರಸ್ತೆಗಳನ್ನು ಗುರುತಿಸಲು ಸೂಚನೆ ಎನ್. ಆರ್. ಪುರ: ರಾಜ್ಯ ಹೆದ್ದಾರಿಯಲ್ಲಿ ಓಡಾಡಿದ ಕಾಡಾನೆ; ನಾಗರಿಕರಲ್ಲಿ ಹೆಚ್ಚಿದ ಆತಂಕ ದೀರ್ಘಾವಧಿ ಸಾಲ 137.85 ಕೋಟಿಗಳ ಅನುದಾನ ವಿನಿಯೋಗ: ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ… ರಾಜ್ಯದ 4 ಸಾರಿಗೆ ನಿಗಮಗಳಲ್ಲಿ ಶೇ.15ರಷ್ಟು ದರ ಹೆಚ್ಚಳ: ಸಚಿವ ಸಂಪುಟ ಅನುಮೋದನೆ ಮಂಗಳೂರು ಸಹಿತ ರಾಜ್ಯದ 6 ಸ್ಮಾರ್ಟ್‌ ಸಿಟಿ ಕಾಮಗಾರಿಗಳ ತನಿಖೆ: ಸಚಿವ ಬೈರತಿ…

ಇತ್ತೀಚಿನ ಸುದ್ದಿ

ಇಡಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಲೂಟಿ: ಕಠಿಣ ಕ್ರಮಕ್ಕೆ ಸ್ಪೀಕರ್ ಖಾದರ್ ಸೂಚನೆ

05/01/2025, 12:30

ಮಂಗಳೂರು(reporterkarnataka.com):ಉದ್ಯಮಿ ಸಿಂಗಾರಿ ಬೀಡಿ ಮಾಲೀಕ ಸುಲೈಮಾನ್ ಹಾಜಿ ಅವರ ಮನೆಗೆ ರಾತ್ರಿ ಸರಿಸುಮಾರು 8:30 ಕ್ಕೆ ತಮಿಳುನಾಡು ನೋಂದಣಿ ಸಂಖ್ಯೆ ಇನ್ನೋವಾ ಕಾರ್ ನಲ್ಲಿ ಬಂದ ಖದೀಮರು ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಮನೆಯಲ್ಲಿದ್ದ ಹಣ, ಮೊಬೈಲ್ ಹಾಗೂ ದಾಖಲೆ ಪತ್ರವನ್ನು ದೋಚಿ ಪರಾರಿಯಾದ ಘಟನೆ ನಡೆದಿದ್ದು ಸ್ಪೀಕರ್ ಯು. ಟಿ. ಖಾದರ್ ದಿಗ್ಭ್ರಮೆ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಗೃಹ ಇಲಾಖೆಯ ವರಿಷ್ಠಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ
ಖಾದರ್ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಶೀಘ್ರ ಪತ್ತೆಗೆ ಕ್ರಮ ಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಗೃಹ ಇಲಾಖೆ ಡಿವೈಎಸ್ ಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿದ್ದು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಸುಲೈಮಾನ್ ಹಾಜಿ ಹಾಗೂ ಕುಟುಂಬಸ್ಥರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಸಭಾಧ್ಯಕ್ಷ ಯು ಟಿ ಖಾದರ್ ಧೈರ್ಯ ತುಂಬಿ ಧೃತಿಗೆಡದಂತೆ ತಿಳಿಸಿದ್ದು ಖದೀಮರು ಶೀಘ್ರ ಬಂಧನವಾಗುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು