4:20 AM Thursday28 - November 2024
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ, ಗರ್ಭಿಣಿಯರ ಸಾವು: ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ… ಲಂಡನ್ ವಾಲ್ವ್ಸ್ 2024 ರಲ್ಲಿ ಮಿಂಚಿದ ಭಾರತ: ಹೃದಯ ಕವಾಟ ಆವಿಷ್ಕಾರ ‘ಮೈವಾಲ್… ಹುಣಸಗಿ: ವಿದ್ಯಾರ್ಥಿಗಳಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ; ಸಾರ್ವಜನಿಕರ ಸಾಥ್ ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ…

ಇತ್ತೀಚಿನ ಸುದ್ದಿ

ಈ ದೇಶದಲ್ಲಿ ಗಾಂಧಿ ಕುಟುಂಬಕ್ಕೊಂದು, ಜನರಿಗೊಂದು ಕಾನೂನು ಇಲ್ಲ: ಚಿಕ್ಕಮಗಳೂರಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ 

22/06/2022, 20:55

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಈ ದೇಶದಲ್ಲಿ ಗಾಂಧಿ ಕುಟುಂಬಕ್ಕೊಂದು, ಜನರಿಗೊಂದು ಕಾನೂನಿಲ್ಲ.ಎಲ್ಲರಿಗೂ ಒಂದೇ ಕಾನೂನು, ಈ ನೆಲದ ಕಾನೂನುನನ್ನ ಎಲ್ಲರೂ ಗೌರವಿಸಬೇಕು ಎಂದು ಕಾಂಗ್ರೆಸ್ ಪ್ರತಿಭಟನೆ ವಿರುದ್ಧ ಗೃಹ ಸಚಿವ ಅರಗ ಜ್ಞಾನೇಂದ್ರ ಕಿಡಿ ಜಾರಿದರು.

ಇಲ್ಲಿ ಬುಧವಾರ ಮಾಧ್ಯಮ ಜತೆ ಮಾತನಾಡಿದ ಅವರು, ತಪ್ಪಿದ್ದಾಗ ಇಡಿ ಕರೆದು ವಿಚಾರಣೆ ಮಾಡಿದಾಗ ಪ್ರತಿಭಟನೆ ಮಾಡ್ತಾರೆ. ಅವರಿಗೆ ಈ ದೇಶದ ಕಾನೂನಿನ ಬಗ್ಗೆ ಗೌರವವಿಲ್ಲ. ಕಾಂಗ್ರೆಸ್ ದೇಶದ ಜನರ ವಿಶ್ವಾಸ ಕಳೆದುಕೊಳ್ತಾರೆ, ಜನ ತುಚ್ಛವಾಗಿ ನೋಡ್ತಾರೆ ಎಂದರು.

2019 ಬಿಜೆಪಿ-ಶಿವಸೇನೆ ಒಟ್ಟಿಗೆ ಜನರ ಬಳಿ ಹೋಗಿದ್ರು, ಜನ ತೀರ್ಪು ನೀಡಿದ್ರು. ಉದ್ಧವ ಠಾಕ್ರೆ ಉದ್ದಟತನ ಮಾಡಿ ೮ ಪಕ್ಷ ಸೇರಿಸಿಕೊಂಡು ಸಿಎಂ ಆದ್ರು. ಎಲ್ಲರಿಗೂ ಗೊತ್ತಿತ್ತು ಇದು ಬಹಳ ದಿನ ನಡೆಯಲ್ಲ, ಈ ಸರ್ಕಾರಕ್ಕೆ ಆಯಸ್ಸು ಕಡಿಮೆ ಅಂತ.

ಇಂದು ಅದರಂತೆಯೇ ಎಲ್ಲಾ ನಡೆಯುತ್ತಿದೆ, ಇದು ಮೊದಲೇ ಗೊತ್ತಿತ್ತು ಎಂದು ಅವರು ನುಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು