ಇತ್ತೀಚಿನ ಸುದ್ದಿ
ದುಬೈ ಯಕ್ಷೋತ್ಸವಕ್ಕೆ ತೆಂಕುತಿಟ್ಟಿನ ಭಾಗವತರಾದ ಭವ್ಯಶ್ರೀ ಕುಲ್ಕುಂದ, ಪುಟಾಣಿ ಅಗಸ್ತ್ಯ ಕುಲ್ಕುಂದ
01/06/2024, 10:10
ಮಂಗಳೂರು(reporterkarnataka.com): ಯಕ್ಷಗಾನ ಅಭ್ಯಾಸ ಕೇಂದ್ರ ದುಬೈ ಯುಎಇ ವತಿಯಿಂದ ಜೂನ್ 9ರಂದು ದುಬೈನಲ್ಲಿ ನಡೆಯಲಿರುವ ‘ದುಬೈ ಯಕ್ಷೋತ್ಸವ’ದಲ್ಲಿ ತೆಂಕುತಿಟ್ಟಿನ ಭಾಗವತರಾದ ಭವ್ಯಶ್ರೀ ಕುಲ್ಕುಂದ ಭಾಗವಹಿಸಲಿದ್ದಾರೆ.
ದುಬೈ ಯಕ್ಷೋತ್ಸವ 2024ರ ದಾಶರಥಿ ದರ್ಶನ ಪ್ರಸಂಗದಲ್ಲಿ ಭವ್ಯಶ್ರೀ ಅವರು ಭಾಗವತಿಕೆ ನಡೆಸಲಿದ್ದಾರೆ. ಅವರ ಪುತ್ರ ಅಗಸ್ತ್ಯ ಕುಲ್ಕುಂದ ಚಕ್ರತಾಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದುಬೈ ಯಕ್ಷೋತ್ಸವ ಹಿನ್ನೆಲೆಯಲ್ಲಿ ಜೂ.1ರಂದು ಭವ್ಯಶ್ರೀ ಕುಲ್ಕುಂದ ಹಾಗೂ ಅಗಸ್ತ್ಯ ಕುಲ್ಕುಂದ ಅವರು ದುಬೈಗೆ ತೆರಳಲಿದ್ದಾರೆ. ಭವ್ಯಶ್ರೀ ಅವರು ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ಅಗಸ್ತ್ಯ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಮೂರನೇ ತರಗತಿ ವಿದ್ಯಾರ್ಥಿ.