ಇತ್ತೀಚಿನ ಸುದ್ದಿ
ಡ್ರೈವಿಂಗ್ ನಲ್ಲಿ ಪ್ರಸಿದ್ಧರಾದ ನಿವೃತ್ತ ಸೈನಿಕ, ಶತಾಯುಷಿ ಮಂಗಳೂರಿನ ಮೈಕಲ್ ಡಿಸೋಜ ಇನ್ನಿಲ್ಲ
11/09/2022, 10:42
ಮಂಗಳೂರು(reporterkarnataka.com):ಡ್ರೈವಿಂಗ್ ನಲ್ಲಿ ಎತ್ತಿದ ಕೈಗೆ ಪ್ರಸಿದ್ಧರಾದ ನಿವೃತ್ತ ಸೈನಿಕ, ಶತಾಯುಷಿ ಮಂಗಳೂರಿನ ಮೈಕಲ್ ಡಿಸೋಜ (108) ಅವರು ನಿಧನರಾಗಿದ್ದಾರೆ.
ಭಾರತೀಯ ಸೇನೆಯಲ್ಲಿ ಮೆಕ್ಯಾನಿಕಲ್ ಕಮ್ ಡ್ರೈವರ್ 10 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಸೈನ್ಯದಲ್ಲಿ 10 ವರ್ಷ ಸೇವೆಯ ನಂತರ ಲೋಕೋಪಯೋಗಿ ಇಲಾಖೆಗೆ ಸೇರಿ ಉಡುಪಿ ರಥಬೀದಿಯ ಕಾಂಕ್ರೀಟ್ ರಸ್ತೆ, ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಮಂಗಳೂರಿನ ಕೂಳೂರು ಸೇತುವೆ, ಮಲ್ಪೆ ಕಲ್ಮಾಡಿ ಸೇತುವೆ, ಬೈಂದೂರಿನ ಸೇತುವೆಗಳು, ಉಭಯ ಜಿಲ್ಲೆಗಳ ಅನೇಕ ಹಳೆಯ ಸೇತುವೆಗಳನ್ನು ನಿರ್ಮಿಸುವಾಗ ತಮ್ಮನ್ನು ತೊಡಗಿಸಿಕೊಂಡಿದ್ದರು.
ಅವರು ಪರ್ಕಳದಲ್ಲಿ ವಾಸ್ತವ್ಯ ಹೊಂದಿದ್ದರು.ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು.100 ವರ್ಷ ಕಳೆದರೂ ಉತ್ತಮ ದೃಷ್ಟಿ ಸಾಮರ್ಥ್ಯ
ಹೊಂದಿದ್ದರು.
2024ರ ತನಕ ಮಂಗಳೂರಿನ ಆರ್ ಟಿಒ ಅವರಿಗೆ ನಾಲ್ಕು ಚಕ್ರ ವಾಹನ ಚಾಲನೆ ಪರವಾನಗಿ ನೀಡಿತ್ತು. ಮೃತರ ಪತ್ನಿ 98ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಮೈಕಲ್ ಅವರ ತಾಯಿ ಕೂಡ 108 ವರ್ಷ ಕಾಲ ಬದುಕಿದ್ದರು. ಮಂಗಳೂರಿನ ಚರ್ಚ್‌ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.