4:24 AM Tuesday23 - September 2025
ಬ್ರೇಕಿಂಗ್ ನ್ಯೂಸ್
Kodagu | ವಿರಾಜಪೇಟೆ, ಕುಶಾಲನಗರ ಮತ್ತು ಹುದಿಕೇರಿ ಆಸ್ಪತ್ರೆ ಮೇಲ್ದರ್ಜೆಗೆ: ಆರೋಗ್ಯ ಸಚಿವ… ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಮಹಿಳೆಯರ ಬದುಕು ಸುಧಾರಣೆ: ಮಹಿಳಾ ದಸರಾ ಉದ್ಘಾಟಿಸಿ… ಪೊನ್ನಂಪೇಟೆ ಕೋಣಗೇರಿಯಲ್ಲಿ ಸೈನಿಕ ಪತಿಯಿಂದಲೇ ಪತ್ನಿಗೆ ಗುಂಡು: ಮೈಸೂರಿಗೆ ರವಾನೆ ಗೋಣಿಕೊಪ್ಪಲು ಬಿಟ್ಟಂಗಾಲ ಮುಖ್ಯರಸ್ತೆಯಲ್ಲಿ ಖಾಸಗಿ ಬಸ್ – ಜೀಪು ಅಪಘಾತ: ಅದೃಷ್ಟವಶಾತ್ ಎಲ್ಲರೂ… Kodagu | ಐತಿಹಾಸಿಕ ಮಡಿಕೇರಿ ದಸರಾಕ್ಕೆ ಚಾಲನೆ: 4 ಶಕ್ತಿ ದೇವತೆಗಳಿಗೆ ವಿಶೇಷ… ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಸರ್ಕಾರದಿಂದ 6 ಕೋಟಿ ನಗದು ಬಹುಮಾನ: ಮುಖ್ಯಮಂತ್ರಿ… ಜಿಎಸ್ ಟಿ ಜಾರಿ ಮಾಡಿದ್ದೂ ಮೋದಿ, ಜಿಎಸ್ ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ,… ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ

ಇತ್ತೀಚಿನ ಸುದ್ದಿ

ಡ್ರೈವಿಂಗ್ ಮಾಡುತ್ತಿರುವಾಗಲೇ ಚಾಲಕ ಹೃದಯಾಘಾತಕ್ಕೆ ಬಲಿ: ಕೆಎಸ್ಸಾರ್ಟಿಸಿ ಬಸ್ ಪಲ್ಟಿ 14 ಮಂದಿಗೆ ಗಾಯ

25/10/2022, 18:26

ರಾಯಚೂರು(reporterkarnataka.com):ಡ್ರೈವಿಂಗ್ ಮಾಡುತ್ತಿರುವಾಗಲೇ ಕೆಎಸ್ಸಾರ್ಟಿಸಿ ಬಸ್ ಚಾಲಕರೊಬ್ಬರು ತೀವ್ರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದು, ಬಸ್ ನಿಯಂತ್ರಣಕ್ಕೆ ಸಿಗದೆ ಪಲ್ಟಿ ಹೊಡೆದ ಪರಿಣಾಮ ಹಲವು ಮಂದಿ ಗಾಯಗೊಂಡ ಘಟನೆ ಜಿಲ್ಲೆಯ ಚಿಕ್ಕಹೆಸರೂರು ಎಂಬಲ್ಲಿ ನಡೆದಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಚಾಲಕ ರಾಯಚೂರು ವಿಭಾಗದ ಲಿಂಗಸೂಗುರ ಘಟಕದ ಚಾಲಕ ಶ್ರೀನಿವಾಸ್ ನಾರಾಯಣ ಗೌಡ (52) ಮೃತಪಟ್ಟ ಚಾಲಕರು.

ಸೋಮವಾರ ಸಂಜೆ ಬಸ್‌ ರಾಯಚೂರು-ಲಿಂಗಸೂಗುರ ಮಾರ್ಗವಾಗಿ ಬೆಳಗಾವಿಗೆ ಸಂಚರಿಸುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿ ಚಾಲಕನಿಗೆ ಹೃದಯಾಘಾತವಾಗಿದೆ. ಚಾಲಕ ಅಸ್ವಸ್ಥಗೊಂಡ ಕಾರಣ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿದೆ.ಅಪಘಾತದಲ್ಲಿ ನಿರ್ವಾಹಕ ಸೇರಿದಂತೆ 14 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಇವರಲ್ಲಿ ಓರ್ವ ಮಹಿಳೆಗೆ ಗಂಭೀರ ಗಾಯಗೊಂಡಿದ್ದು, ಲಿಂಗಸೂಗೂರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು 31 ಮಂದಿ ಪ್ರಯಾಣಿಕರನ್ನು ಹೊತ್ತು ರಾಜಹಂಸ ಬಸ್ ರಾಯಚೂರಿನಿಂದ ಬೆಳಗಾವಿ ಕಡೆ ಸಂಚರಿಸುತ್ತಿತ್ತು. ಇದಕ್ಕಿದ್ದಂತೆ ಬಸ್ ಚಾಲಕನಿಗೆ ಹೃದಯಾಘಾತವಾಗಿದೆ. ತೀವ್ರ ಹೃದಯಾಘಾತದಿಂದ ಬಳಲಿದ ಚಾಲಕ ಬಸ್ ನಿಯಂತ್ರಣಕ್ಕೆ ತರಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲೇ ಚಾಲಕನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಪರಿಣಾಮ ಬಸ್ ಅಪಘಾತಕ್ಕೀಡಾಗಿದೆ. ಬಸ್ ರಾಯಚೂರಿನಿಂದ ಸುಮಾರು 90 ಕಿಲೋಮೀಟರ್ ದೂರ ಪ್ರಯಾಣಿಸಿದೆ. ಈ ವೇಳೆ ಈ ದುರ್ಘಟನೆ ನಡೆದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು