ಇತ್ತೀಚಿನ ಸುದ್ದಿ
ಡ್ರೈವರ್ ವರ್ಗಾವಣೆಗೆ 10 ಸಾವಿರ ಲಂಚ ಬೇಡಿಕೆ: ಕೆಎಸ್ಸಾರ್ಟಿಸಿ ಡಿಸಿ ಲೋಕಾಯುಕ್ತ ಬಲೆಗೆ
07/02/2024, 15:58
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarma@gmail.com
ಲಂಚ ಸ್ವೀಕರಿಸುತ್ತಿದ್ದ ವೇಳೆ ಚಿಕ್ಕಮಗಳೂರು ಕೆಎಸ್ಸಾರ್ಟಿಸಿ
ಡಿಸಿ(ಡಿವಿಜನಲ್ ಕಂಟ್ರೋಲರ್) ಬಸವರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸಿಬ್ಬಂದಿಯೊಬ್ಬರನ್ನು ಚಿಕ್ಕಮಗಳೂರಿನಿಂದ ಕಡೂರು ಡಿಪೋಗೆ ವರ್ಗಾವಣೆ ಮಾಡಲು 10 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಕೆಎಸ್ಸಾರ್ಟಿಸಿ ಡ್ರೈವರ್ ನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕೆಎಸ್ಸಾರ್ಟಿಸಿ ಡಿಸಿ ಬಸವರಾಜ್ ಅವರು 10 ಸಾವಿರ ಲಂಚ ಬೇಡಿಕೆ ಇಟ್ಟ ಬಗ್ಗೆ ಬಸ್ ಡ್ರೈವರ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಚಿಕ್ಕಮಗಳೂರು ಲೋಕಾಯುಕ್ತ ಅಧಿಕಾರಿಗಳು ಬಸವರಾಜ್ ಅವರ ವಿಚಾರಣೆ ನಡೆಸುತ್ತಿದ್ದಾರೆ.