3:57 AM Thursday1 - January 2026
ಬ್ರೇಕಿಂಗ್ ನ್ಯೂಸ್
6322 ಪರಿಶಿಷ್ಟ ಕುಟುಂಬಗಳಿಗೆ ಕೊಳವೆಬಾವಿ ಭಾಗ್ಯ: ಕಾಮಗಾರಿ ಚುರುಕುಗೊಳಿಸಲು ನೀರಾವರಿ ಸಚಿವರ ಖಡಕ್… Kodagu | ಸೋಮವಾರಪೇಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆ: ಕೋವಿ ಸಹಿತ ಮೂವರ… ಕೋವಿಡ್ ಸಾವು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ: ಸರಕಾರಕ್ಕೆ ಅಂತಿಮ ವರದಿ… ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ… ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇತ್ತೀಚಿನ ಸುದ್ದಿ

ಡಾ. ಅಂಬೇಡ್ಕರ್ ಚಿಂತನೆ ಯುವ ಪೀಳಿಗೆಯಲ್ಲಿ ಬಿತ್ತುವ ಕಾರ್ಯ ನಡೆಯಲಿ: ಶಾಸಕ ವೇದವ್ಯಾಸ ಕಾಮತ್

30/11/2022, 19:28

ಮಂಗಳೂರು(reporterkarnataka.com): ಅಂಬೇಡ್ಕರ್ ಚಿಂತನೆಗಳನ್ನು ಯುವ ಪೀಳಿಗೆ ಅಭ್ಯಸಿಸಿ ಅಳವಡಿಸಿಕೊಂಡಾಗ ದೇಶಕ್ಕೆ ಮುಂದಿನ ಭವಿಷ್ಯವಾಗಿ ವ್ಯಕ್ತಿತ್ವ ರೂಪುಗೊಳ್ಳಲಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆಯ ಕದ್ರಿ ಉತ್ತರ ವಾರ್ಡಿನ ನಂತೂರು ಶ್ರೀ ಕೊರಗಜ್ಜ ಗುಡಿಯ ಬಳಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಏಕತೆಯ ಕುರಿತು, ಸಾಮಾಜಿಕ ಸಮಾನತೆಯ ಕುರಿತು ದೂರ ದೃಷ್ಟಿಯ ಚಿಂತನೆಯಿಂದ ನಿರ್ಮಿಸಿದ ಸಂವಿಧಾನವು ಈ ದೇಶದ ಭದ್ರ ಬುನಾದಿ. ಅವರ ಚಿಂತನೆಗಳನ್ನು ಸಮಾಜದ ಯುವ ಪೀಳಿಗೆಗಳಲ್ಲಿ ಬಿತ್ತುವ ಮೂಲಕ ಅವರಲ್ಲಿ ರಾಷ್ರ್ಟಾಭಿಮಾನ ಬೆಳೆಸುವ ಕಾರ್ಯ ಆಗಬೇಕು ಎಂದು ಹೇಳಿದರು.

ನಂತೂರು ಪರಿಸರದಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವ‌ ಕುರಿತು‌ ಸ್ಥಳೀಯರು ಸ್ಥಳೀಯ ಕಾರ್ಪೋರೇಟರ್ ಮೂಲಕ ಸಲ್ಲಿಸಿದ ಬೇಡಿಕೆಯಂತೆ 20 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ಶಕಿಲಾ ಕಾವಾ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ರಮೇಶ್ ಕಂಡೆಟ್ಟು, ಭಾಸ್ಕರ್ ಚಂದ್ರ ಶೆಟ್ಟಿ, ಮುಖಂಡರಾದ ಅಜಯ್ ಕುಲಶೇಖರ, ಮಂಗಳಾ ಆಚಾರ್ಯ, ಪೂರ್ಣಿಮಾ ರಾವ್, ಗಿರಿಧರ್ ಶೆಟ್ಟಿ, ಸಂತೋಷ್ ನಂತೂರು, ಪ್ರಸನ್ನ, ಕಮಲಾಕ್ಷಿ, ಗಾಯತ್ರಿ, ಶಿಲ್ಪ, ಉಮಾ ಕಂಡೆಟ್ಟು, ಉಮಾ ಶೆಟ್ಟಿ, ನಾರಾಯಣ ಶೆಟ್ಟಿ, ರಾಮಕೃಷ್ಣ ಕದ್ರಿ, ವೆಂಕಟೇಶ್ ಕದ್ರಿ, ನಿರ್ಮಲ ಗುಂಡಳಿಕೆ, ಸುಜಾತ ಗುಂಡಳಿಕೆ, ರವೀಂದ್ರ ನಂತೂರು, ವಿಜಯ ಶೆಣೈ, ಪುಷ್ಪ, ಹರಿ ನಂತೂರು, ಗಂಗಾಧರ್ ನಂತೂರು, ಕಮಲಾಕ್ಷಿ, ವಿಕ್ಟರ್ ಗುಂಡಳಿಕೆ, ಬೇಬಿ, ವಿದ್ಯಾ, ದೀಕ್ಷಾ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು