10:24 AM Sunday8 - March 2026
ಬ್ರೇಕಿಂಗ್ ನ್ಯೂಸ್
ಕಂಬಳಕ್ಕೆ ರಾಜ್ಯ ಸರಕಾರದಿಂದ ಹಣಕಾಸಿನ ನೆರವು: ಬಂಟ್ವಾಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಹೈಕಮಾಂಡ್ ಸೂಚಿಸಿದರೆ ಕ್ಷಣಾರ್ಧದಲ್ಲಿ ಕುರ್ಚಿ ಬಿಡಲು ಸಿದ್ಧ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಜನಾಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ: ಮೈಸೂರಿನಲ್ಲಿ‌ ಸಿಎಂ ಸಿದ್ದರಾಮಯ್ಯ Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ ಎಣ್ಣೆಪ್ರಿಯರಿಗೆ ಶಾಕ್ ನೀಡಿದ ಬಜೆಟ್‌: ಮದ್ಯದ ಮೇಲೆ ಹೊಸ ರೂಪದ ತೆರಿಗೆ ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್‌ ಸ್ಥಾಪನೆ

ಇತ್ತೀಚಿನ ಸುದ್ದಿ

ದೋಟ ಬೆಂಗ್ರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೊ ಬಿರುಸಿನ ಚುನಾವಣಾ ಪ್ರಚಾರ

24/04/2023, 17:40

ಮಂಗಳೂರು(reporterkarnataka.com): ಮಹಾನಗರ ಪಾಲಿಕೆಯ 60ನೇ ಬೆಂಗ್ರೆ ವಾರ್ಡಿನ ವ್ಯಾಪ್ತಿಯ ದೋಟ ಬೆಂಗ್ರೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿರುಸಿನ ಪ್ರಚಾರ ನಡೆಯಿತು.
ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಜೆ. ಆರ್. ಲೋಬೊ ಅವರು ಹಾಜರಿದ್ದು ತಮ್ಮ ಭಾಷಣದಲ್ಲಿ ತಾನು ಶಾಸಕನಾಗಿದ್ದಾಗ ಈ ಪ್ರದೇಶದ ಸುಮಾರು 2,000 ಜನರಿಗೆ ಹಕ್ಕು ಪತ್ರಗಳನ್ನು ನೀಡಿದ್ದೇನೆ. ಈ ಹಿಂದೆ ಬೆಂಗ್ರೆ ಪ್ರದೇಶಕ್ಕೆ ಕಂದಾಯ ಗ್ರಾಮ ಇರಲಿಲ್ಲ. ಅದನ್ನು ಕೂಡ ನಾನೇ ಮಾಡಿಸಿದ್ದೆ. ಅದಲ್ಲದೆ ಸ್ಮಾರ್ಟ್ ಸಿಟಿ ಯೋಜನೆ ಮಂಜೂರಾಗಿದ್ದು ಹಳೆ ಬಂದರು ಮತ್ತು ಮೀನುಗಾರಿಕೆಯಿಂದ. ಮೊದಲ ಹಂತದಲ್ಲಿ ಈ ಯೋಜನೆ ಮಂಜೂರು ಆಗಿರಲಿಲ್ಲ. ಬಿಜೆಪಿ ಸಂಸದರು ಇದ್ದೂ ಏನೂ ಪ್ರಯೋಜನ ಆಗಿರಲಿಲ್ಲ. ಆದುದರಿಂದ ನಾನು ಹಳೆ ಬಂದರು ಮತ್ತು ಮೀನುಗಾರಿಕೆ ಇವೆರಡರ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಅಧಿಕಾರಿಗಳಿಗೆ ಅಧ್ಯಯನ ಮಾಡಲು ಹೇಳಿ, ಬಳಿಕ ಎರಡನೇ ಹಂತದಲ್ಲಿ ಮಂಜೂರು ಮಾಡಿಸಿದೆ. ಆದರೂ ಈಗಿನ ಬಿಜೆಪಿ ಶಾಸಕರು ಮೀನುಗಾರಿಕೆ, ಹಳೆ ಬಂದರು ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.ಅವಕಾಶ ಕೊಟ್ಟರೆ ಖಂಡಿತವಾಗಿಯೂ ಈ ಮೀನುಗಾರಿಕೆ, ಹಳೆ ಬಂದರು ಪ್ರದೇಶವನ್ನು ವಿಶೇಷವಾಗಿ ಒತ್ತು ನೀಡಿ ಅಭಿವೃದ್ಧಿಗೊಳಿಸಲು ಪಣ ತೋಡುವುದಾಗಿ ಹೇಳಿದರು.


ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷರು, ಮಾಜಿ ಎಂಎಲ್ ಸಿ ಐವನ್ ಡಿಸೋಜ, ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಿಂ, ಹಿರಿಯ ಕಾಂಗ್ರೆಸ್ ನಾಯಕರಾದ ಶೇಖರ್ ಸುವರ್ಣ, ಪ್ರದೇಶ ಕಾಂಗ್ರೆಸ್ ಒಬಿಸಿ ಉಪಾಧ್ಯಕ್ಷ ಚೇತನ್ ಬೆಂಗ್ರೆ,ಜಿಲ್ಲಾ ಕಾಂಗ್ರೆಸ್ ಮೀನುಗಾರಿಕಾ ಘಟಕದ ಅಧ್ಯಕ್ಷ ಹರೀಶ್ ಅಮೀನ್ ಬೆಂಗ್ರೆ,ವಾರ್ಡ್ ಅಧ್ಯಕ್ಷ ಅಬೂಬಕ್ಕರ್ ಅಶ್ರಫ್, ಮಾಜಿ ಅಧ್ಯಕ್ಷ ಆಸೀಫ್ ಬೆಂಗ್ರೆ, ಮಾಜಿ ಕಾರ್ಪೊರೇಟರ್ ಶಕುಂತಲಾ ಬೆಂಗ್ರೆ, ಸದಾಶಿವ ಅಮೀನ್,ಸತೀಶ್ ಕೋಟ್ಯಾನ್, ನವೀನ್ ಕರ್ಕೇರ, ತುಕಾರಾಂ ಕಾರ್ವಿ, ಭೋಜ ಕಾರ್ವಿ, ಸಮದ್, ಪ್ರವೀಣ್, ಅನಿಲ್ ಡಿಸೋಜ, ಮಿಥುನ್, ಪ್ರಸಾದ, ಮೋಹನ್, ಭಾಸ್ಕರ್ ರಾವ್, ಕಾರ್ಪೊರೇಟರ್ ಆಶ್ರಫ್ ಬಜಾಲ್, ರಫೀಕ್ ಕಣ್ಣೂರು, ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು