ಇತ್ತೀಚಿನ ಸುದ್ದಿ
ದ.ಕ.ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ 3.5 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು: ಸಂಸದ ನಳಿನ್ ಕುಮಾರ್ ಕಟೀಲ್ ಭವಿಷ್ಯ
17/03/2024, 23:50

ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣೆ ಪೂರ್ವ ಭಾವಿ ಸಭೆಯು ಪಕ್ಷದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿಯ ಜಿಲ್ಲಾ ಚುನಾವಣಾ ಕಾರ್ಯಾಲಯದಲ್ಲಿ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಮೋದಿ ಸರಕಾರದ ಅವಧಿಯಲ್ಲಿ ತಾನು ಜಿಲ್ಲೆಗೆ ತಂಡ ಒಂದು ಲಕ್ಷ ಕೋಟಿ ಅನುದಾನದ ಮಾಹಿತಿ ಯನ್ನು ಮನೆ ಮನೆಗೆ ತಿಳಿಸುವಂತೆ ಕರೆ ನೀಡಿದರು. ನಿರಂತರ 15 ವರ್ಷಗಳ ಧೀರ್ಘ ಅವಧಿ ಗೆ ಸಂಸದನಾಗಿ ಕಾರ್ಯ ನಿರ್ವಹಿಸಲು ಸಹಕರಿಸಿದ ದೇವ ದುರ್ಲಭ ಕಾರ್ಯಕರ್ತರಿಗೆ ಕ್ರತಜ್ಞತೆ ಯನ್ನು ಸಲ್ಲಿಸುತ್ತಾ ಮುಂದಿನ ಅಭ್ಯರ್ಥಿ ಬ್ರಿಜೇಶ್ ಚೌಟರಿಗೆ 3 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವಲ್ಲಿ ಎಲ್ಲರೂ ಕಾರ್ಯ ಪ್ರವೃತ್ತ ರಾಗ ಬೇಕೆಂದು ಚುನಾವಣಾ ಕಾರ್ಯನಿರ್ವ ಹಣ ತಂಡಕ್ಕೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ,ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್, ನಿರ್ವಹಣಾ ಸಮಿತಿ ಸಂಚಾಲಕ ನಿತಿನ್ ಕುಮಾರ್, ಮಾಜಿ ಶಾಸಕರು, ಶಾಸಕರು, ಜಿಲ್ಲಾ ಪದಾಧಿಕಾರಿಗಳು, ಮಂಡಲ, ಮೋರ್ಚಾ ಪದಾಧಿಕಾರಿಗಳು, ಮಾದ್ಯಮ ಪ್ರಮುಖರು ಉಪಸ್ಥಿತರಿದ್ದರು.