ಇತ್ತೀಚಿನ ಸುದ್ದಿ
ದ.ಕ. ಕೈ ಕಚೇರಿಯಲ್ಲಿ ಕೈಕೈ ಮಿಲಾಯಿಸಿದರೇ ಕೈ ಮುಖಂಡರು?: ಖಾಕಿ ಎಂಟ್ರಿ ಕೊಟ್ಟಿರುವುದು ಯಾಕೆ?
02/12/2024, 15:20
ಮಂಗಳೂರು(reporterkarnataka.com): ಪಂಚಾಯಿತಿ ಉಪ ಚುನಾವಣೆಯಲ್ಲಿ ಆಯ್ಕೆಯಾದವರನ್ನು ಸನ್ಮಾನಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ಮಲ್ಲಿಕಟ್ಟೆ ಬಳಿ ಇರುವ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಹೊಡೆದಾಟ ನಡೆದಿದೆ.
ಜಿಲ್ಲಾ ಮುಖಂಡರು ಕೈಕೈ ಮಿಲಾಯಿಸಿದ್ದಾರೆ. ಪಂಚಾಯಿತಿ ಉಪ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಗೆದ್ದ ಅಭ್ಯರ್ಥಿ ಗಳನ್ನು ಸನ್ಮಾನಿಸುವ ವಿಚಾರವಾಗಿ ಮಾತಿನ ಚಕಮಕಿ ನಡೆದು, ನಂತರ ಅದು ಹೊಡೆದಾಟಕ್ಕೆ ತಿರುಗಿದೆ.
ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡ ಪ್ರಕಾಶ್ ಶೆಟ್ಟಿ ತುಂಬೆ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.
ತಕ್ಷಣ ಕಾಂಗ್ರೆಸ್ ಕಚೇರಿಗೆ ಪೊಲೀಸರು ಆಗಮಿಸಿದ್ದಾರೆ. ಸಂಟ್ರಲ್ ಎಸಿಪಿ ಮತ್ತು ಕದ್ರಿ ಪೊಲೀಸರು ಆಗಮಿಸಿದ್ದಾರೆ. ಉಭಯ ಗುಂಪುಗಳ ನಡುವೆ
ಸಂಧಾನ ನಡೆಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಒಂದು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.