6:58 PM Tuesday28 - October 2025
ಬ್ರೇಕಿಂಗ್ ನ್ಯೂಸ್
ಕೇರಳ ಪ್ರವಾಸಿ ಬಸ್ ಗಳಲ್ಲಿ ಡಿಜೆ ಅಳವಡಿಕೆ: ಶಬ್ದ ಮಾಲಿನ್ಯದ ವಿರುದ್ಧ ಆಕ್ಷೇಪ;… ಕಾಂಗ್ರೆಸ್‌ ಸರ್ಕಾರ ರಸ್ತೆಗಳ ಅಭಿವೃದ್ಧಿ ಮರೆತಿದೆ, ಒಂದು ಲೇಯರ್‌ ಗೆ 4-5 ಸಾವಿರ… ಮತ ಚೋರಿ ತಡೆಗೆ ಕೈ ಕಾರ್ಯಪಡೆ!: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೆಬ್ಬಾಳ… Chikkamagaluru | ಚಾರ್ಮಾಡಿ ಘಾಟಿಯಲ್ಲಿ ಕಾರು ಪಲ್ಟಿ: 3 ಮಂದಿ ಪ್ರಾಣಾಪಾಯದಿಂದ ಪಾರು Kodagu | ಸುಂಟಿಕೊಪ್ಪ: ಕ್ರಿಕೆಟ್ ಆಡುತ್ತಿದ್ದ ವೇಳೆ ಯುವಕ ಹೃದಯಘಾತದಿಂದ ದಾರುಣ ಸಾವು ಮಾಧ್ಯಮ ಅಕಾಡೆಮಿಯಲ್ಲಿ ಟಿಜೆಎಸ್ ಜಾರ್ಜ್‌ ದತ್ತಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆ Bangaluru | ಪಿಡಿಪಿಎಸ್‌ಯಡಿ ಈರುಳ್ಳಿ ಖರೀದಿ ಪ್ರಯತ್ನ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ… Bangaluru | ರಾಜ್ಯ ಸರಕಾರಕ್ಕೆ ಕೆಎಸ್ ಡಿಎಲ್ ರಿಂದ 135 ಕೋಟಿ ಡಿವಿಡೆಂಡ್… ಬೆಂಗಳೂರು ಲಾಡ್ಜ್‌ನಲ್ಲಿ ಯುವತಿ ಜತೆ ತಂಗಿದ್ದ ಯುವಕನ ಸಾವಿಗೆ ಕಿಡ್ನಿ ವೈಫಲ್ಯ ಕಾರಣ:… ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ: ಕಡೂರು ಸಮೀಪದ ಹಡಗಲು ಗ್ರಾಮ ಅಕ್ಷರಶಃ ಜಲಾವೃತ

ಇತ್ತೀಚಿನ ಸುದ್ದಿ

ಕೇರಳ ಪ್ರವಾಸಿ ಬಸ್ ಗಳಲ್ಲಿ ಡಿಜೆ ಅಳವಡಿಕೆ: ಶಬ್ದ ಮಾಲಿನ್ಯದ ವಿರುದ್ಧ ಆಕ್ಷೇಪ; ಪೊಲೀಸರಿಂದ 4 ಬಸ್ ಗಳಿಗೆ ದಂಡ

28/10/2025, 12:54

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಕೇರಳ ರಾಜ್ಯದಿಂದ ಪ್ರವಾಸಿಗರನ್ನು ಹೊತ್ತು ಕೊಡಗು ಜಿಲ್ಲೆಯ ಅನೇಕ ಸ್ಥಳಗಳಿಗೆ ಪ್ರತಿದಿನ 30ಕ್ಕೆ ಹೆಚ್ಚು ಪ್ರವಾಸಿ ಬಸುಗಳು ಕುಟ್ಟ ಗೇಟ್ ಮೂಲಕ, ಪೊನ್ನಂಪೇಟೆ ಗೋಣಿಕೊಪ್ಪ ತಿತಿಮತಿ ಪಟ್ಟಣಕ್ಕಾಗಿ ಕುಶಾಲನಗರ ಮೈಸೂರು ಜಿಲ್ಲೆಗೆ ಪ್ರವಾಸಕ್ಕೆ ತೆರಳುತ್ತಾರೆ.
ಈ ಬಸುಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿದ್ದು, ಹೆಚ್ಚಿನ ಶಬ್ದ ದೊಂದಿಗೆ ಕರ್ಕಶ ಸಂಗೀತದೊಂದಿಗೆ ಶಬ್ದ ಮಾಲಿನ್ಯ ಆಗುತ್ತಿರುವ ಬಗ್ಗೆ ಸಾರ್ವಜನಿಕರು ಒಬ್ಬರು ಇಂದು ಸಂಜೆ ವಿರಾಜಪೇಟೆ ಡಿ ವೈ ಎಸ್ ಪಿ ಅವರ ಗಮನಕ್ಕೆ ತಂದಾಗ, ಕೂಡಲೆ ಅವರು ಕಾರ್ಯಪ್ರವೃತ್ತರಾಗಿ, ಕುಟ್ಟ ಪೊಲೀಸ್ ಠಾಣೆಯಲ್ಲಿ ಈ ಪ್ರವಾಸಿ ಬಸುಗಳ ಮೇಲೆ ದಂಡ ವಿಧಿಸಿ ಸೂಕ್ತ ಎಚ್ಚರಿಕೆ ನೀಡಿ ಕಳುಹಿಸಿಕೊಡಲಾಗಿದೆ.


ಕೇರಳ ರಾಜ್ಯದಲ್ಲಿ ಧ್ವನಿವರ್ಧಕ ಹಾಗೂ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಬಸುಗಳಲ್ಲಿ ಅಳವಡಿಸಲು , ಹಾಗೆ ಬಣ್ಣ ಬಣ್ಣದ ಚಿತ್ರದಿಂದ ಅಲಂಕಾರ ಗೊಳಿಸುವುದನ್ನು ನಿಷೇಧಿಸಲಾಗಿದೆ. ಆದರೆ ಕೇರಳದ ಗಡಿ ದಾಟಿದ ತಕ್ಷಣ ಈ ಪ್ರವಾಸಿ ಬಸುಗಳಲ್ಲಿ ಧ್ವನಿವರ್ಧಕಗಳು ಮೊಳುಗುತ್ತವೆ, ಸಂಜೆಯಾಗುತ್ತಿದ್ದಂತೆ ಬಸ್ಸಿನಲ್ಲಿ ಬಣ್ಣ ಬಣ್ಣದ ದೀಪಗಳು ಹಾಕಿಕೊಂಡು ಹೆಚ್ಚಿನ ಶಬ್ದದ ಸಂಗೀತದೊಂದಿಗೆ ಕೊಡಗಿನ ಮೂಲಕ ಸಂಚರಿಸುತ್ತದೆ ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದ್ದು ಈ ಬಗೆ, ಹಲವು ಬಾರಿ ಈ ಬಸುಗಳು ಹಾದು ಹೋಗುವ ಪೊಲೀಸ್ ಠಾಣೆಗೆ ಮೌಖಿಕವಾಗಿ ಹಲವರು ದೂರು ನೀಡಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳದಿದ್ದಾಗ, ಆರ್. ಟಿ.ಓ.ಕಚೇರಿಯ ಇನ್ಸ್ಪೆಕ್ಟರ್ ಗೆ ಕೂಡ ಸಾರ್ವಜನಿಕರು ಮೌಕಿಕವಾಗಿ ಮಾಹಿತಿ ನೀಡಿದರು ಯಾವುದೇ ಕ್ರಮ ಕೈಗೊಳದಿರುವಾಗ, ಇಂದು ನೇರವಾಗಿ ಡಿ ವೈ.ಎಸ್. ಪಿ ಮಹೇಶ್ ಕುಮಾರ್ ರವರ ಗಮನಕ್ಕೆ ತಂದಾಗ ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರು ಡಿ. ವೈ ಎಸ್. ಪಿ ಅವರ ಕಾರ್ಯಕ್ಷಮತೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು