ಇತ್ತೀಚಿನ ಸುದ್ದಿ
29ರಂದು ಜಿಲ್ಲಾ ಮಟ್ಟದ ನಿವೃತ್ತ ಸರಕಾರಿ ನೌಕರರ ಸಭೆ: ಸರಕಾರದ ಗಮನ ಸೆಳೆಯಲು ಬೆಂಗಳೂರು ಚಲೋಗೆ ಸಿದ್ಧತೆ
26/03/2025, 13:08

ಮಂಗಳೂರು(reporterkarnataka.com): ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆ ದ.ಕ. ಜಿಲ್ಲೆ, ಮಂಗಳೂರು ಮತ್ತು ದ.ಕ. ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ ಮಂಗಳೂರು ವತಿಯಿಂದ ಮಾ.29ರಂದು ಬೆಳಗ್ಗೆ 10.30ಕ್ಕೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಭಾಭವನ ತಾಲೂಕು ಮಿನಿವಿಧಾನ ಸೌಧ, ಮಂಗಳೂರು ಇಲ್ಲಿ ಜಿಲ್ಲಾ ಮಟ್ಟದ ನಿವೃತ್ತ ಸರಕಾರಿ ನೌಕರರ ಸಭೆಯನ್ನು ಕರೆಯಲಾಗಿದೆ.
ಜುಲೈ 1, 2022 ರಿಂದ ಜು.31, 2024ರ ಅವಧಿಯಲ್ಲಿ ನಿವೃತ್ತ ಸರಕಾರಿ ಅಧಿಕಾರಿ/ನೌಕರ ವರ್ಗದ ಸುಮಾರು ರಾಜ್ಯಾದ್ಯಂತ 26,743 ನಿವೃತ್ತರಿಗೆ 7ನೇ ವೇತನ, ಆಯೋಗದ ಲೆಕ್ಕಾಚಾರದಲ್ಲಿ ನಿವೃತ್ತಿ ಉಪಲಬ್ದಗಳನ್ನು ಪಾವತಿಸುವ ಸಂದರ್ಭದಲ್ಲಿ
ಆರ್ಥಿಕ ನಷ್ಟವಾಗಿರುತ್ತದೆ ಎಂದು ಸರಕಾರಕ್ಕೆ ಒತ್ತಾಯ ವಿಚಾರದಲ್ಲಿ ಈ ಸಭೆಯನ್ನು ಕರೆಯಲಾಗಿದೆ. ದ.ಕ.ಜಿಲ್ಲೆಯ ಸುಮಾರು 600ಕ್ಕೂ ಮಿಕ್ಕಿ ನಿವೃತ್ತ ನೌಕರರು ಮತ್ತು ರಾಜ್ಯದ ಸುಮಾರು 20 ಸಾವಿರ ಮಂದಿ ಸದಸ್ಯರಿಗೆ ಸಮಸ್ಯೆಯಾಗಿದೆ.
ಈ ಸಭೆಗೆ ರಾಜ್ಯದ ಮಹಾ ಪ್ರಧಾನ ಸಂಚಾಲಕರಾದ ಡಾ.ಎಂ.ಪಿ.ಎಂ. ಷಣ್ಮುಖಯ್ಯ ಮತ್ತು ರಾಜ್ಯದ ತಂಡದ ಸದಸ್ಯರು, ಎಂಎಲ್‍ಸಿ ಐವನ್ ಡಿ ಸೋಜ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಸರಕಾರಕ್ಕೆ ಇನ್ನೊಮ್ಮೆ ಆರ್ಥಿಕ ನಷ್ಟದ ಬಗ್ಗೆ ಮನವರಿಕೆ ಮಾಡುವ ಏ.3ರಂದು ಮೂರನೇ ಸಲ ಬೆಂಗಳೂರು ಚಲೋ ಕಾರ್ಯಕ್ರಮ ಹಾಗೂ ಏ.4 ರಂದು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತಿ ಸಂಘದ ವತಿಯಿಂದ ಬೆಂಗಳೂರು ಅರಮನೆ ಮೈದಾನದಲ್ಲಿ ರಾಜ್ಯ ಸಮ್ಮೇಳನದಲ್ಲಿ ಬೇಡಿಕೆ ಈಡೇರಿಸಲು ಸರಕಾರವನ್ನೂ ಒತ್ತಾಯಿಸುವ ಕುರಿತು ನಿರ್ಧಾರವನ್ನು ತಾಳಲಾಗುತ್ತದೆ ಎಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ರಾಜ್ಯ ಸಂಚಾಲಕ ಸಿರಿಲ್ ರಾಬರ್ಟ್ ಡಿ ಸೋಜ ಹಾಗೂ ದ.ಕ.ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ಸೀತಾರಾಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.