5:55 PM Wednesday25 - March 2026
ಬ್ರೇಕಿಂಗ್ ನ್ಯೂಸ್
ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ… ಲ್ಯಾಂಬೊರ್ಗಿನಿ ಕಾರು ಗಿರಿಗಿಟ್ಲೆ ಹೊಡೆಸಿದ ಪ್ರಕರಣ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ,… ಮತ್ತೆ ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ: ಪೂಜಾ-ವಿಧಿ ವಿಧಾನದ ವಿಚಾರದಲ್ಲಿ ಮುಸ್ಲಿಮರ… ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್‌ ರೋಡ್‌… ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರುತನಿಖೆ ಕೋರಿ ಸಲ್ಲಿಸಿದ ಮೇಲ್ಮನವಿ ಸುಪ್ರೀಂ ಕೋರ್ಟ್… ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ; ಒಮ್ಮತದಿಂದ ಸಮರ್ಥ್‌ಗೆ ಟಿಕೆಟ್‌: ಡಿಸಿಎಂ ಡಿ.ಕೆ. ಶಿವಕುಮಾರ್ ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ, ಬಿಜೆಪಿಯಿಂದ ವೀರಣ್ಣ ಚರಂತಿಮಠ ನಾಮಪತ್ರ ಸಲ್ಲಿಕೆ

ಇತ್ತೀಚಿನ ಸುದ್ದಿ

ಸದನದಲ್ಲಿ ಸಿಎಂ ಹಾಕಿದ ಮೈಸೂರು ಸಿಲ್ಕ್ ಶಾಲು ಬಗ್ಗೆ ಚರ್ಚೆ: ಬೆಲೆ 13,500 ಎಂದ ಸಿದ್ದರಾಮಯ್ಯ

25/03/2026, 17:45

ಬೆಂಗಳೂರು(reporterkarnataka.com): ಸಿದ್ದರಾಮಯ್ಯ ಅವರು ಧರಿಸಿರುವ ಶಲ್ಯದ ಬೆಲೆ ₹13,500. ಅಲ್ಲದೆ ಪ್ಯೂರ್ ಮೈಸೂರು ಸಿಲ್ಕ್. ವಿಧಾನಸಭೆಯಲ್ಲಿ ಬುಧವಾರ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಕಿರುವ ಶಾಲಿನ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು.
ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಧರಿಸಿರುವ ಶಾಲಿನ ಬಗ್ಗೆ ಉಲ್ಲೇಖ ಮಾಡಿ ವಿಪಕ್ಷದ ಸದಸ್ಯರು ಕಾಲೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ “ನಾನು ಈಗ ಹಾಕಿರೋದು ಕಾಸ್ಟ್ಲೀ, ಪ್ಯೂರ್ ಸಿಲ್ಕ್” ಎಂದರು. ಈ ವೇಳೆ “ಅದರ ಬೆಲೆ 13,500″ ಎಂದು ಶಲ್ಯದ ದರದ ಬಗ್ಗೆ ಸಿದ್ದರಾಮಯ್ಯ ಅವರಿಗೆ ಡಿಕೆಶಿ ತಿಳಿಸಿದರು. ಹೂಂ, ಹೌದು ಎಂದು ಈ ವೇಳೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ. ಇದು ಮೈಸೂರು ಸಿಲ್ಕ್, ಡಿಕೆಶಿ ಹಾಕಿದ್ದು ಯಾವುದು ಎಂದು ಗೊತ್ತಿಲ್ಲ, ಅದು ಸಿಲ್ಕ್ ಅಲ್ಲ ವುಲನ್ ಎಂದರು.
ಈ ವೇಳೆ ಅವರೇ ಕೊಡಿಸಿದ್ದಾ ಇದು ಎಂದು ವಿಪಕ್ಷ ಸದಸ್ಯರು ಕಾಲೆಳೆದರು. ಇಲ್ಲ‌, ಇಲ್ಲ ಇದು ಬೇರೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ಈ ಹಿಂದೆ ನಾನು ಟವೆಲ್ ಹಾಕೊಳ್ಳುತ್ತಿದೆ. ಬಗ್ಗಿದರೆ ಅದು ಪದೇ ಪದೇ ಬೀಳುತ್ತಿತ್ತು. ಕುತ್ತಿಗೆಗೆ ಹಾಕೊಂಡರೆ ಅಷ್ಟು ಚೆನ್ನಾಗಿ ಕಾಣುತ್ತಿರಲಿಲ್ಲ. ಅದಕ್ಕಾಗಿ ಬಿಟ್ಟು ಬಿಟ್ಟೆ. ಇದರಲ್ಲಿ ಯಾವ ಶಾಸ್ತ್ರ, ಯಾವ ರಾಹುಕಾಲ, ಗುಳಿಕಕಾಲ ಇಲ್ಲ” ಎಂದು ನುಡಿದರು.

*ನಿಮ್ಮವರಿಗೆ ನೀರು ಕುಡಿಸ್ತಿದ್ದೀರಿ!*
ಉತ್ತರದ ಸಂದರ್ಭದಲ್ಲಿ ಬಾಲ್ಯ ನೆನಪಿಸಿಕೊಂಡ ಸಿದ್ದರಾಮಯ್ಯ, “ನನ್ನ ಅಪ್ಪ ದನಕರುಗಳಿಗೆ ನೀರು ಕೊಡಿಸುವ ಜವಾಬ್ದಾರಿ ಕೊಟ್ಟಿದ್ದರು. ನಮ್ಮ ಮನೆಯ ಪಕ್ಕದಲ್ಲಿ ಒಂದು ಬಾವಿ ಇತ್ತು” ಎಂದರು. ಈ ವೇಳೆ ನಗುತ್ತಿದ್ದ ಆರ್ ಅಶೋಕ್ ಉದ್ದೇಶಿಸಿ ಯಾಕೆ ನಗ್ತಿದ್ದೀರಾ? ಎಂದು ಸಿಎಂ ಪ್ರಶ್ನಿಸಿದರು.
ಅದಕ್ಕೆ “ನಿಮ್ಮ ಅಪ್ಪ ಅವರನ್ನು ಮೆಚ್ಚಬೇಕು. ಆ ವಯಸ್ಸಿನಲ್ಲಿ ತಂದೆ ಪಿತೃ ಎಂದ ಅಶೋಕ್ಗೆ, ‘ಪಿತೃ ಅಲ್ಲ ತಂದೆ’ ಎಂದು ಸಿದ್ದರಾಮಯ್ಯ ಸರಿಪಡಿಸಿದರು. ಎರಡೂ ಒಂದೇ ಅಲ್ವಾ? ಪಿತೃ ಎಂದರೆ ಸಂಸ್ಕೃತ ಎಂದು ಅಶೋಕ್ ಉತ್ತರಿಸಿದರು. ಈ ವೇಳೆ, ನೀನು ಸಂಸ್ಕೃತ ಹೇಳ್ತೀಯಾ ಎಂದು ಸಿಎಂ ಕಿಚಾಯಿಸಿದರು. ‘ನಾನು ಹೇಳಲ್ಲ, ನಿಮ್ಮ ಪಕ್ಕದಲ್ಲಿ ಇರುವವರು ಹೇಳ್ತಾರೆ ಎಂದು ಡಿಕೆಶಿಗೆ ಪರೋಕ್ಷವಾಗಿ ಅಶೋಕ್ ಟಾಂಗ್ ಕೊಟ್ಟರು.
ಮುಂದುವರಿದು, ‘ಸಿದ್ದರಾಮಯ್ಯ ತಂದೆ ಯವರಿಗೆ ಆ ಕಾಲದಲ್ಲಿ ದೂರ ದೃಷ್ಟಿ ಇತ್ತು. ಮುಂದೆ ಯಾರ್ಯಾರಿಗೆ ನೀರು ಕುಡಿಸಬೇಕೆಂದು ಅಭ್ಯಾಸ ಮಾಡಿದ್ದಾರೆ. ಇಲ್ಲಿ ಬಂದು ನಮಗೆಲ್ಲ ನೀರು ಕುಡಿಸ್ತಾರೆ. ಯಾರ್ಯಾರು ಅವರ ಹಿಂದೆ ಮುಂದೆ ಇರುವವರಿಗೆ ನೀರು ಕುಡಿಸ್ತಾರೆ ಎಂದು ಅಶೋಕ್ ಕಾಲೆಳೆದರು.
ಸಿದ್ದರಾಮಯ್ಯ ಕರ್ಮ ಸಿದ್ದಾಂತದ ಬಗ್ಗೆ ಮಾತನಾಡ್ತಾರೆ. ಬಸವಣ್ಣ ಸಿದ್ದಾಂತದ ಬಗ್ಗೆ ಮಾತನಾಡ್ತಾರೆ. ಆದರೆ ಇವರದ್ದು ಯಾವ ಸಿದ್ದಾಂತ. ಎಂಟು ವರ್ಷದಿಂದ ಇವರೇ ಸಿಎಂ ಆಗಿದ್ದಾರೆ. ಇದು ಯಾವ ಸಿದ್ದಾಂತ? ಪುಣ್ಯವನ್ನೇ ಮಾಡಿ ಬಂದಿದ್ದೀರಾ. ಉಳಿದವರು ಪಾಪ ಮಾಡಿ ವೈಟಿಂಗ್ ಲಿಸ್ಟ್ ನಲ್ಲಿದ್ದಾರೆ. ನಿಮಗೆ ಎಲ್ಲಿ ಹೋದರೂ ಡೋರ್ ಟಕ ಟಕ ಎಂದು ತೆರೆಯುತ್ತೆ ಎಂದು ಕಿಚಾಯಿಸಿದರು.
ಬಜೆಟ್ ರಾಹುಕಾಲ ಬಿಟ್ಟು ಮಂಡಿಸಿದ್ದಾರೆ. ಹೇಳೋದೊಂದು ಮಾಡೋದೊಂದು ಆಗಬಾರದು. ಕಾಮಾಕ್ಯದಲ್ಲಿ ಪೂಜೆ ಮಾಡಿಸ್ತಿದ್ದಾರೆ ನಿಮ್ಮ ಪಕ್ಷದವರು. ನಾನು ಒಂದೇ ನಿಮಿಷ ದೇವರ ಮುಂದೆ ನಿಲ್ತೇನೆ ಅಷ್ಟೇ. ಕಾಮಾಕ್ಯಕ್ಕೆ ಶಕ್ತಿ ಕೊಡಲಿ ಎಂದು ಪದೇ ಪದೇ ಹೋಗ್ತಿದ್ದಾರೆ. ಆದರೆ ಇವರು ನೀರು ಕುಡಿಸುತ್ತಿದ್ದಾರೆ. ನೀರು ಕುಡಿಸಬೇಕಾದರೆ ಉಪ್ಪು ಖಾರ ಹಾಕಿ ಕುಡಿಸಲಿ ಎಂದು ಕಿಚಾಯಿಸಿದರು‌.

ಇತ್ತೀಚಿನ ಸುದ್ದಿ

ಜಾಹೀರಾತು