5:26 PM Sunday5 - April 2026
ಬ್ರೇಕಿಂಗ್ ನ್ಯೂಸ್
ಎಸ್ಸೆಸ್ಸೆಲ್ಸಿ ಗ್ರೇಡಿಂಗ್ ಪದ್ಧತಿಗೆ ರಾಜ್ಯಪಾಲರು ವಿರೋಧ: ನಾಳೆ ರಾಜಭವನಕ್ಕೆ ಕರವೇ ಮುತ್ತಿಗೆ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ’: ರಾಜ್ಯಪಾಲರಿಗೆ ಕರವೇ ನಾರಾಯಣ ಗೌಡ ಖಡಕ್… ದೇಶದಲ್ಲೇ ಅತಿ ಹೆಚ್ಚು | ಬೆಂಗಳೂರಿಂದ 272 ಅಕ್ರಮ ಬಂಗ್ಲಾ ವಲಸಿಗರು ಗಡಿಪಾರು Kodagu | ಕುಶಾಲನಗರ: ಹರದೂರು – ಕಾಜೂರು ಮಕಾಂ ಉರೂಸ್ ಗೆ ಚಾಲನೆ ತ.ನಾ. ಚುನಾವಣೆ | ಚಾಮರಾಜನಗರ ಸಮೀಪದ ಮೆಟ್ಟೂರು ಕ್ಷೇತ್ರದಿಂದ ವೀರಪ್ಪನ್‌ ಪುತ್ರಿ ವಿದ್ಯಾರಾಣಿ… ಅಡಿಕೆಯೊಳಗಿದ್ದ ಸ್ಫೋಟಕ ಸಿಡಿದು ಮಹಿಳೆಗೆ ಗಾಯ: ಅಡಿಕೆಯಲ್ಲಿ ಇದ್ದಿದ್ದಾದರೂ ಏನು..? ಪ್ರಕರಣದ ಸತ್ಯಾಂಶ… ನಂಜನಗೂಡು: ಶ್ರದ್ಧಾ ಭಕ್ತಿಯಿಂದ ನಡೆದ ಪುರಾಣ ಪ್ರಸಿದ್ಧ ಕಳಲೆ ಶ್ರೀ ಲಕ್ಷ್ಮಿಕಾಂತ ಸ್ವಾಮಿ… ದ್ವೇಷ ಬಿತ್ತಬೇಡಿ, ಅಭಿವೃದ್ಧಿ ನೋಡಿ: ಉಪ ಚುನಾವಣಾ ಪ್ರಚಾರದಲ್ಲಿ ಗುಡುಗಿದ ಸಿಎಂ ಸಿದ್ದರಾಮಯ್ಯ Bangalore | ರಿಕ್ಕಿ ರೈ ಲ್ಯಾಂಬೋರ್ಗಿನಿ ಕಾರು ಸೀಜ್: 35 ಲಕ್ಷ ದಂಡ ರಾಜ್ಯದ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಬದಲಾವಣೆ ಸಾಧ್ಯತೆ: ಗೃಹ ಸಚಿವ ಡಾ. ಪರಮೇಶ್ವರ್

ಇತ್ತೀಚಿನ ಸುದ್ದಿ

ಕಣ್ಮರೆಯಾಗುತ್ತಿರುವ ಜಂಗಮರ ಜೋಳಿಗೆ: ಜನರ ಭಕ್ತಿಭಾವನೆಯೂ ಇಳಿಕೆ

19/02/2026, 18:40

ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ಇಂದಿನ ಆಧುನಿಕತೆಯ ಭರಾಟೆಯಲ್ಲಿ ಅನೇಕ ಸಂಪ್ರದಾಯಗಳು ಕಣ್ಮರೆಯಾಗುತ್ತಿವೆ. ಅದರಲ್ಲಿ ಜಂಗಮರ ಜೋಳಿಗೆ ಕಾಯಕವೂ ಒಂದು…
ಹಿಂದೆ ಜಂಗಮರು ಹಳ್ಳಿಗಳಲ್ಲಿ ಪ್ರತಿನಿತ್ಯ ಬೆಳಗಿನ ಸಮಯದಲ್ಲಿ ಜೋಳಿಗೆ ಹಾಕಿಕೊಂಡು ಹಿಟ್ಟು ನೀಡಿಸಿಕೊಳ್ಳಲು ಮನೆ ಮನೆಗೆ ಹೋಗುವುದು ಸಾಮಾನ್ಯ ದೃಶ್ಯ ಜೊತೆಗೆ ದೈವಿಕತೆಯಾಗಿತ್ತು. ಜಂಗಮರು ಮೊಣಕಾಲಿಗೆ ಜಂಗು ಗಂಟೆ ಕಟ್ಟಿಕೊಂಡು ಕೈಯಲ್ಲಿ ಬೆತ್ತ ಹಿಡಿದುಕೊಂಡು ಮನೆ ಮನೆಗೆ ತೆರಳಿ ಗಂಟೆ ಶಬ್ದ ಮಾಡಿದ ತಕ್ಷಣ, ಭಕ್ತಾದಿಗಳು ಹೊರಗೆ ಬಂದು ಅವರನ್ನು ಬರಮಾಡಿಕೊಂಡು ಹಿಟ್ಟು ನೀಡಿ ಮನೆಯವರೆಲ್ಲರೂ ಪಾದಕ್ಕೆ ನಮಸ್ಕರಿಸಿ ಅವರ ಆಶೀರ್ವಾದ ಪಡೆಯುತ್ತಿದ್ದರು.
ಭಕ್ತರ ಮನೆಗೆ ಬಂದ ಜಂಗಮರು ಮಕ್ಕಳಿಗೆ ಕೆಲವು ಉಪದೇಶ, ಪಂಚಾಗದ ಮಾಹಿತಿ ತಿಳಿಸುತ್ತಿದ್ದರು.
ತಾಲೂಕಿನಾದ್ಯಂತ ವಿವಿಧ ಹಳ್ಳಿಗಳಲ್ಲಿ ಇನ್ನೂ ಕೂಡ ಜಂಗಮರು ಹಿಟ್ಟು ನೀಡಿಸಿಕೊಳ್ಳುವ ಕಾಯಕ ಕಲವೇ ಜನ ಮುಂದುವರೆಸಿಕೊಂಡು ಹೋಗುತ್ತಿದ್ದು, ಇದಕ್ಕೆ ಉದಾಹರಣೆ ಎಂಬಂತೆ ಪಟ್ಟಣದ ಕಂಬಾಳಿ ಮಠದ ಶರಣಯ್ಯ ಸ್ವಾಮಿ ರವರು ಪ್ರತಿನಿತ್ಯ ಭಕ್ತರ ಮನೆಗೆ ತೆರಳಿ ಪ್ರತಿ ದಿನ ಸ್ವಯಂ ಪಾಕದಲ್ಲಿ ಭಿಕ್ಷಾ ಹಾಗೂ ಪ್ರತಿ ಸೋಮವಾರ ದೀಪ ತೈಲದಲ್ಲಿ ಭಿಕ್ಷೆ ಎಂದು ಹೇಳಿದರೆ ಭಕ್ತರು ಹಿಟ್ಟು,ಎಣ್ಣಿ ತಂದು ನೀಡುವುದು ವಾಡಿಕೆ.
ಆದರೆ ಇಂದಿನ ಆಧುನಿಕತೆಯ ಭರಾಟೆ ನೆಪದಲ್ಲಿ ಜಂಗಮರು ಕೂಡಾ ಹಿಟ್ಟು ನೀಡಿಸಿಕೊಳ್ಳಲು ಬರುವುದಕ್ಕೆ ಹಿಂಜರಿಯುತ್ತಿದ್ದಾರೆ.
ಜನರ ಭಕ್ತಿಭಾವನೆಯು ಕಣ್ಮರೆಯಾಗುತ್ತಿದೆ.


ಆಗಿನ ಕಾಲದಲ್ಲಿ ರೈತಾಪಿ ವರ್ಗದವರು ತಾವು ಬೆಳೆದ ಧಾನ್ಯಗಳಲ್ಲಿ ಒಂದು ಪಾಲನ್ನು ದಾನದ ರೂಪದಲ್ಲಿ ಜಂಗಮರಿಗಾಗಿ ತೆಗೆದು ಇಡುತ್ತಿದ್ದರು. ಈ ಭಾವನೆ ಇಂದು ಕಡಿಮೆಯಾಗುತ್ತಿದೆ. ಜಂಗಮರು ವಿಶೇಷ ದಿನಗಳಾದ ಹಬ್ಬ ಹರಿದಿನದಂದು ಹಾಗೂ ಮನೆಗಳಲ್ಲಿ ಮದುವೆ,ಲಿಂಗ ದೀಕ್ಷೆ,ತೊಟ್ಟಿಲು ಕಾರ್ಯಕ್ರಮ ಸೇರಿದಂತೆ ಭಕ್ತರ ಮನೆಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆರ್ಶಿವದಿಸುತ್ತಾರೆ.
ಅಷ್ಟೆಯಲ್ಲದೆ ಸಮಾಜದಲ್ಲಿ ಬೆರೆತು ಹುಟ್ಟಿನಿಂದ ಅಂತ್ಯದವರೆಗೂ ಎಲ್ಲ ಕಾರ್ಯಕ್ರಮ ಮಾಡುವ ಪುರೋಹಿತರಾಗಿ ಭಕ್ತರು ನೀಡುವ ದಕ್ಷಣೆ ಪಡೆದು ಅವರಿಗೆ ಶುಭ ಹಾರೈಸುತ್ತಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು