6:15 AM Thursday27 - November 2025
ಬ್ರೇಕಿಂಗ್ ನ್ಯೂಸ್
ಟೈಯರ್ ಸ್ಫೋಟ: ನಿಯಂತ್ರಣ ಕಳೆದುಕೊಂಡು ಪಿಕ್ ಅಪ್ ಪಲ್ಟಿ; ಚಾಲಕನಿಗೆ ತೀವ್ರ ಗಾಯ ಛಲವಾದಿ ಹಾಗೂ ಆರ್. ಅಶೋಕ್ ಗೆ ರಾಜಕೀಯ ವಿವೇಕ ಇಲ್ಲ: ಸಚಿವ ಎನ್.… ಸಂತಾನ ಹರಣ ಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಪತ್ನಿ: ಪತಿಯಿಂದ ವೈದ್ಯರಿಗೆ ಬೆದರಿಕೆ ಆರೋಪ:… ರಾಜ್ಯದ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ನಗದು ಬಹುಮಾನ ಜತೆಗೆ ಸರ್ಕಾರಿ… ಹೈವಿಷನ್ ಇಂಡಿಯಾ ಜತೆ ಕೊರಿಯನ್ ಸಂಸ್ಥೆ ಜಿಟಿಟಿಸಿ ಒಪ್ಪಂದಕ್ಕೆ ಸಹಿ |ರಾಜ್ಯದ ಪ್ರವಾಸಿ… ಗಗನಯಾನಿಯಾಗಲು ದೈಹಿಕ, ಮಾನಸಿಕ ಆರೋಗ್ಯ ಬಹಳ ಮುಖ್ಯ: ಶುಭಾಂಶು ಶುಕ್ಲಾ Kodagu | ಅಪಘಾತಕ್ಕೆ ಈಡಾಗಿ ಗಂಭೀರ ಸ್ಥಿತಿಯಲ್ಲಿ ಪುತ್ರ: ನೊಂದ ತಾಯಿ ಕೆರೆಗೆ… ಅಕ್ರಮ‌ ಆಸ್ತಿ ಸಂಪಾದನೆ ಆರೋಪ: ಕೊಡಗು ಪಿಡಬ್ಲ್ಯುಡಿ ಎಂಜಿನಿಯರ್ ಕಚೇರಿ, ಮನೆ ಮೇಲೆ… Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇತ್ತೀಚಿನ ಸುದ್ದಿ

ಕಲರ್ ನೀರಿನಲ್ಲಿ ಕೈ ಅದ್ದಿ ಬಿಳಿ ಹಾಳೆಯ ಮೇಲೆ ಅಚ್ಚು, ಮುಖಕ್ಕೆ ಬಣ್ಣ, ಹಾಡಿಗೆ ಹೆಜ್ಜೆ: ಚೇತನಾ ಶಾಲೆಯಲ್ಲಿ ಹೋಳಿ ಸಂಭ್ರಮ!

14/03/2025, 21:47

ಮಂಗಳೂರು(reporterkarnataka.com): ಬಣ್ಣಗಳನ್ನು ಮುಖಕ್ಕೆ ಹಚ್ಚಿಕೊಂಡು, ನೀರು ತುಂಬಿದ ಬೆಲೂನುಗಳನ್ನು ಸಿಡಿಸಿ, ಹಾಡಿಗೆ ಹೆಜ್ಜೆ ಹಾಕುತ್ತಾ ಚೇತನಾ ಶಾಲೆಯ ವಿಶೇಷ ಚೇತನ ಮಕ್ಕಳು ಈ ಬಾರಿಯ ಹೋಳಿ ಸಂಭ್ರಮವನ್ನು ಆಚರಿಸಿದರು.


ಪ್ರಾರಂಭದಲ್ಲಿ ಪ್ರತಿ ಮಗು ಕೂಡ ತನ್ನ ಕೈಗಳನ್ನು ಬಣ್ಣದ ನೀರಿನಲ್ಲಿ ಅದ್ದಿ ಬಿಳಿ ಹಾಳೆಯ ಮೇಲೆ ಅಚ್ಚನ್ನು ಒತ್ತುತ್ತಾ ಮುಖದಲ್ಲಿ ಅರಳುತ್ತಿದ್ದ ನಗೆಯನ್ನು ಸಂಭ್ರಮಿಸುತ್ತಾ ಕಾರ್ಯಕ್ರಮ ಆರಂಭವಾಯಿತು. ನಂತರ ಮಕ್ಕಳ ಕೈಗಳಲ್ಲಿ ರಾಸಾಯನಿಕ ರಹಿತ, ಪರಿಸರ ಸ್ನೇಹಿ ಬಣ್ಣಗಳನ್ನು ನೀಡುತ್ತಿದ್ದಂತೆ ಪರಸ್ಪರ ಹಚ್ಚಿ ಖುಷಿಪಟ್ಟರು. ನಂತರ ಹಾಡುಗಳಿಗೆ ಮಕ್ಕಳು ಹೆಜ್ಜೆ ಹಾಕುತ್ತಾ, ನೀರಿನ ಬೆಲೂನುಗಳನ್ನು ಎಸೆದು ಅದು ಸಿಡಿಯುತ್ತಿದ್ದಂತೆ ಚಪ್ಪಾಳೆ, ಕೇಕೆಗಳೊಂದಿಗೆ ಹರುಷಪಟ್ಟರು. ವಯಸ್ಸು, ಜಾತಿ, ಭಾಷೆ, ಧರ್ಮದ ಭೇದವಿಲ್ಲದೆ, ಶಿಕ್ಷಕರ ಪ್ರೀತಿ ವಾತ್ಸಲ್ಯದೊಂದಿಗೆ, ಆರೈಕೆ, ಆರೋಗ್ಯದ ಕಾಳಜಿಯೊಂದಿಗೆ ಮಕ್ಕಳಲ್ಲಿ ನೈತಿಕ ಸ್ಥೈರ್ಯ, ಹುಮ್ಮಸ್ಸನ್ನು ನೀಡುತ್ತಾ ಬರುತ್ತಿರುವ ಮಂಗಳೂರಿನ ವಿ.ಟಿ.ರಸ್ತೆಯಲ್ಲಿರುವ ಚೇತನಾ ಮಕ್ಕಳ ಅಭಿವೃದ್ಧಿ ಕೇಂದ್ರದಲ್ಲಿ ಕಲಿಯುತ್ತಿರುವ ನೂರಕ್ಕೂ ಮಿಕ್ಕಿದ ವಿಶೇಷ ಮಕ್ಕಳಲ್ಲಿ ಹೋಳಿಯ ಸಂಭ್ರಮವನ್ನು ಹೆಚ್ಚಿಸಲು ಯೂತ್ ಆಫ್ ಜಿಎಸ್ ಬಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಯೂತ್ ಆಫ್ ಜಿಎಸ್ ಬಿಯ ಪ್ರಮುಖರು, ಹಿತೈಷಿಗಳು, ಶಾಲೆಯ ಶಿಕ್ಷಕರು, ಆಡಳಿತ ಮಂಡಳಿಯ ಪ್ರಮುಖರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು