6:08 PM Wednesday30 - July 2025
ಬ್ರೇಕಿಂಗ್ ನ್ಯೂಸ್
ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಸ್ಪಾಟ್ ನಂಬರ್ 4ರ ಉತ್ಖನನ ಪ್ರಕ್ರಿಯೆ ಆರಂಭ ಬಾಲಮಂದಿರ, ಮಹಿಳಾ ನಿಲಯಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದಿಢೀರ್ ಭೇಟಿ: ಚಿಣ್ಣರನ್ನು ಮುದ್ದಾಡಿದ… USA | ಡ್ರೈವರ್ ಇಲ್ಲದ ಕಾರಿನಲ್ಲಿ ಪ್ರಯಾಣಿಸಿದ ಸ್ಪೀಕರ್ ಯು.ಟಿ. ಖಾದರ್!: ಇದು… Bangaluru | ಪತ್ರಿಕಾ ಸಂಪಾದಕರ ಕೈಕಟ್ಟಿ ಹಾಕಲಾಗುತ್ತಿದೆ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ… Mandya | ಒಂದೇ ದಿನ 1146 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ… ಬಾಳೆಬೈಲು – ಕುರುವಳ್ಳಿ ಬೈಪಾಸ್ ರಸ್ತೆಯಲ್ಲಿ ಕುಸಿಯುತ್ತಿರುವ ಗುಡ್ಡ: ಬ್ಯಾರಿಕೆಡ್ ಹಾಕಿರುವ ಪೊಲೀಸರು Shivamogga | ತೀರ್ಥಹಳ್ಳಿ: ಬೆಜ್ಜವಳ್ಳಿ ಸಮೀಪ ಸ್ಕೂಟಿಗೆ ಹಿಂಭಾಗದಿಂದ ಬಸ್ ಡಿಕ್ಕಿ; ಸವಾರ… ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಒಂಟಿ ಸಲಗ ಪ್ರತ್ಯಕ್ಷ: ಪ್ರಯಾಣಿಕರಲ್ಲಿ ಭೀತಿ ಗದಗ -ಬಂಕಾಪುರ ರಾಷ್ಟ್ರೀಯ ಹೆದ್ದಾರಿಗೆ ಗಡ್ಕರಿ ಭರವಸೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Koppa | ಬೃಹತ್ ಮರ ರಸ್ತೆಗೆ ಪತನ: ಜಯಪುರ- ಬಸರೀಕಟ್ಟೆ,- ಕಳಸ- ಹೊರನಾಡು…

ಇತ್ತೀಚಿನ ಸುದ್ದಿ

ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಸ್ಪಾಟ್ 2 ಮತ್ತು 3ರಲ್ಲಿ ಉತ್ಖನನ; ಪತ್ತೆಯಾಗದ ಅಸ್ತಿಪಂಜರ

30/07/2025, 16:08

ಧರ್ಮಸ್ಥಳ(reporterkarnataka.com): ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್ಐಟಿ)ದಿಂದ ದೂರುದಾನ ಸಮ್ಮುಖದಲ್ಲಿ ಸ್ಪಾಟ್ 2 ಮತ್ತು 3ರ ಅಗೆತ ನಡೆದಿದ್ದು, ಯಾವುದೇ ಅಸ್ತಿಪಂಜರ ಲಭ್ಯವಾಗಲಿಲ್ಲ.
ನಿನ್ನೆ ಮೊದಲ ದಿನ ಶವ ಹೂತಿಟ್ಟ ಸ್ಥಳದಲ್ಲಿ ಅಗೆತ ಆರಂಭಿಸಿದ ಯಾವುದೇ ಅಸ್ತಿಪಂಜರ ಸಿಗದೆ ಎಸ್ಐಟಿ ತಂಡ ಬರಿಗೈಯಲ್ಲಿ ವಾಪಸಾಗಿತ್ತು. ಎರಡನೇ ದಿನವಾದ ಇಂದು(ಬುಧವಾರ) ಸ್ಪಾಟ್ 2, 3 ಮತ್ತು 4ರ ಉತ್ಖನನಕ್ಕೆ ನಿರ್ಧರಿಸಲಾಗಿತ್ತು. ಅದರಂತೆ ಮಧ್ಯಾಹ್ನ 3 ಗಂಟೆ ವರೆಗೆ ಸ್ಪಾಟ್ 2 ಮತ್ತು 3ರ ಉತ್ಖನನ ನಡೆಸಲಾಯಿತು. ಆದರೆ, ಅಸ್ತಿಪಂಜರದ ಯಾವುದೇ ಕುರುಹು ಲಭ್ಯವಾಗಲಿಲ್ಲ. ಮಧ್ಯಾಹ್ನ 3 ಗಂಟೆಗೆ ಊಟಕ್ಕೆ ಬ್ರೇಕ್ ನೀಡಿ, ತಾತ್ಕಾಲಿಕವಾಗಿ ಉತ್ಖನನವನ್ನು ನಿಲ್ಲಿಸಲಾಗಿದೆ. ಮಧ್ಯಾಹ್ನ ಬಳಿಕ ಸ್ಪಾಟ್ 3 ಅಥವಾ 13ನೇ ಸ್ಪಾಟ್ ನ ಉತ್ಖನನ ನಡೆಸಲಾಗುತ್ತದೆಯೇ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಪ್ರಸ್ತುತ ಗುರುತಿಸಲಾದ 13 ಸ್ಟಾಟ್ ಗಳು ನೇತ್ರಾವತಿ ನದಿ ದಡದಲ್ಲೇ ಇರುವುದರಿಂದ ಮಳೆಗಾಲದ ವೇಳೆಯಲ್ಲಿ ಇಲ್ಲಿ ಸಾಕಷ್ಟು ಬಾರಿ ನೆರೆ ಬಂದಿರುವ ಸಾಧ್ಯತೆಗಳಿರುತ್ತದೆ. ಗುಡ್ಡದಿಂದ ಮಣ್ಣು ಬಂದು ಸೇರಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ ಸಂಬಂಧಿಸಿದಂತೆ ನಿನ್ನೆ ಮೊದಲ ದಿನ ಶವ ಹೂತಿಟ್ಟ ಸ್ಥಳದಲ್ಲಿ ಅಗೆತ ಆರಂಭಿಸಿದ ವಿಶೇಷ ತನಿಖಾ ತಂಡ(ಎಸ್ಐಟಿ) ಯಾವುದೇ ಅಸ್ತಿಪಂಜರ ಸಿಗದೆ ಬರಿಗೈಯಲ್ಲಿ ವಾಪಸಾಗಿದ್ದು, ಇವತ್ತು ಕನಿಷ್ಠ 3 ಸ್ಥಳಗಳಲ್ಲಿ ಉತ್ಖನನ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ದೂರುದಾರ ಒಟ್ಟು 13 ಸ್ಥಳಗಳನ್ನು ಗುರುತಿಸಿದ್ದ. ಅದರಲ್ಲಿ ನಿನ್ನೆ ಪಾಯಿಂಟ್ ನಂಬರ್ 1ರ ಮಾತ್ರ ಅಗೆತ ಮಾಡಲಾಗಿತ್ತು. ಇದು ನೇತ್ರಾವತಿ ನದಿ ದಡದ ಪ್ರದೇಶವಾಗಿತ್ತು. ಜಾಗದಲ್ಲಿ ಸಾಕಷ್ಟು ಹೂಳು ತುಂಬಿತ್ತು. ಇದೀಗ ಅಸ್ತಿ ಪಂಜರಗಳ ಶೋಧ ಕಾರ್ಯ ಎರಡನೇ ದಿನವೂ ಮುಂದುವರಿಯಲಿದ್ದು ಇಂದು (ಬುಧವಾರ) ದೂರುದಾರ ತೋರಿಸಿದ 3 ಸ್ಥಳಗಳಲ್ಲಿ ಮಣ್ಣು ಅಗೆಯಲು ಎಸ್ಐಟಿ ನಿರ್ಧರಿಸಿದೆ ಎನ್ನಲಾಗಿದೆ.
ಈ ಪ್ರಕ್ರಿಯೆಗೆ ಸ್ಥಳೀಯ ಅಧಿಕಾರಿಗಳ ಸಹಕಾರ ಬೇಕಿದೆ. ಶಿಷ್ಟಾಚಾರದ ಪ್ರಕಾರ ಇದಕ್ಕೆ ಸಂಬಂಧಿತ ಅಧಿಕಾರಿಯಾದ ಪುತ್ತೂರಿನ ಅಸಿಸ್ಟೆಂಟ್ ಕಮಿಷನರ್ ಸ್ಟೆಲ್ಲಾ ವರ್ಗೀಸ್ ಅವರು ಅನುಮತಿ ನಿಡಬೇಕಿದೆ. ಸಿಬ್ಬಂದಿ ಲಭ್ಯತೆ ಮತ್ತು ಇತರ ಸಾಧ್ಯತೆಗಳನ್ನು ನೋಡಿಕೊಂಡು ಉತ್ಖನನಕ್ಕೆ ಅನುಮತಿ ನೀಡುವುದು ಎಸಿಗೆ ಬಿಟ್ಟ ವಿಚಾರವಾಗಿದೆ.
ನಿನ್ನೆ ದೂರುದಾರ ತೋರಿಸಿದ ಮೊದಲ ಪಾಯಿಂಟ್ ನೇತ್ರಾವತಿ ಸ್ನಾನ ಘಟ್ಟದ ಬಳಿ ಮಣ್ಣು ಅಗೆಯಲಾಗಿದೆ. ಆದರೆ, 8 ಅಡಿ ಆಳ ಅಗೆದರೂ ಅಲ್ಲಿ ಶವಗಳನ್ನು ಹೂತಿರುವ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಸುಮಾರು 10 ಕಾರ್ಮಿಕರನ್ನು ಒಳಗೊಂಡ ತಂಡವು ಹಾರೆ, ಪಿಕಾಸಿ ಬಳಸಿ ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಣ್ಣು ಅಗೆಯುವ ಕಾರ್ಯ ಆರಂಭಿಸಿತು. ನೇತ್ರಾವತಿ ನದಿಯಿಂದ 10 ಮೀಟರ್ ದೂರದಲ್ಲಿರುವ ಈ ಜಾಗವನ್ನು ಅಗೆದಂತೆ ನೀರು ಜಿನುಗಲಾರಂಭಿಸಿತು. ಜೊತೆಗೆ ಬಿಟ್ಟು ಬಿಟ್ಟು ಧಾರಾಕಾರ ಮಳೆಯೂ ಸುರಿಯುತ್ತಿತ್ತು, ಇದರಿಂದ ಅಗೆಯುವಿಕೆಗೆ ಅಡಚಣೆಯುಂಟಾಯಿತು. ಸಂಜೆ ವೇಳೆಗೆ ಎಸ್‌ಐಟಿ ಅಧಿಕಾರಿಗಳು ಸಣ್ಣ ಜೆಸಿಬಿ ಯಂತ್ರವನ್ನು ಸ್ಥಳಕ್ಕೆ ತರಿಸಿಕೊಂಡು ಅಗೆಯಿಸಿದರು. ಕೊನೆಗೆ ಶ್ವಾನದಳ ಕರೆತಂದು ಪರಿಶೀಲನೆ ನಡೆಸಿದರು. ಆದರೂ, ಶವಗಳನ್ನು ಹೂತಿರುವ ಬಗ್ಗೆ ಯಾವುದೇ ಕುರುಹು ಪತ್ತೆಯಾಗದ ಕಾರಣ ಮೊದಲ ದಿನದ ಅಗೆಯುವ ಕಾರ್ಯವನ್ನು ಸಂಜೆ 6ರ ವೇಳೆಗೆ ಸ್ಥಗಿತಗೊಳಿಸಲಾಯಿತು.
ಇಂದು ದೂರುದಾರ ತೋರಿಸಿದ ಎರಡನೇ ಪಾಯಿಂಟ್‌ನಿಂದ ಮಣ್ಣು ಅಗೆಯುವ ಕಾರ್ಯ ನಡೆಯಲಿದೆ. ಈಗಾಗಲೇ ಗುರುತಿಸಿರುವ 12 ಪಾಯಿಂಟ್‌ಗಳಲ್ಲಿ ಅಗೆತ ಬಾಕಿಯಿದೆ.
ಮೂಲಗಳ ಪ್ರಕಾರ, ದೂರುದಾರ ತಲೆ ಬುರುಡೆಯೊಂದನ್ನು ತಂದಿರುವ ಜಾಗದಲ್ಲಿ ಇಂದು ಅಗೆತ ನಡೆಯಲಿದೆ. ಮಾನವ ಶ್ರಮದ ಮೂಲಕವೇ ಮಣ್ಣು ಅಗೆಯಲಾಗುತ್ತದೆ. ಏಕೆಂದರೆ, ಈ ಪಾಯಿಂಟ್‌ಗಳು ಮೀಸಲು ಅರಣ್ಯ ಪ್ರದೇಶದಲ್ಲಿವೆ. ಅಲ್ಲದೆ, ಅಲ್ಲಿ ನಿನ್ನೆಯಂತೆ ನೀರಿನ ಒರತೆ ಅಡ್ಡಿಯಾಗುವ ಸಾಧ್ಯತೆ ಕಡಿಮೆಯಿದೆ.

ಇತ್ತೀಚಿನ ಸುದ್ದಿ

ಜಾಹೀರಾತು