ಇತ್ತೀಚಿನ ಸುದ್ದಿ
ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಸ್ಪಾಟ್ ನಂಬರ್ 4ರ ಉತ್ಖನನ ಪ್ರಕ್ರಿಯೆ ಆರಂಭ
30/07/2025, 18:06

ಧರ್ಮಸ್ಥಳ(reporterkarnataka.com): ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್ಐಟಿ)ದಿಂದ ದೂರುದಾನ ಸಮ್ಮುಖದಲ್ಲಿ ಸ್ಪಾಟ್ ನಂಬರ್ 2 ಮತ್ತು 3ರ ಅಗೆತ ನಡೆದಿದ್ದು, ಯಾವುದೇ ಅಸ್ತಿಪಂಜರ ಲಭ್ಯವಾಗಿಲ್ಲದ ಹಿನ್ನೆಲೆಯಲ್ಲಿ ಸ್ಪಾಟ್ ನಂಬರ್ 4ರ ಉತ್ಖನನ ಪ್ರಕ್ರಿಯೆ ಆರಂಭಗೊಂಡಿದೆ.
ಈಗಾಗಲೇ ಉತ್ಖನನ ನಡೆಸಿದ ಸ್ಪಾಟ್ ನಂಬರ್ 1,2 ಮತ್ತು 3ಕ್ಕಿಂತ ಈ ಪ್ರದೇಶ ಭೌಗೋಳಿಕ ಸ್ವಲ್ಪ ಭಿನ್ನವಾಗಿದೆ. ಪುತ್ತೂರು ಅಸಿಸ್ಟೆಂಟ್ ಕಮಿಷನರ್ ಸ್ಟೆಲ್ಲಾ ವರ್ಗೀಸ್ ಅವರ ಜತೆ ಎಸ್ಐಟಿ ತಂಡ ಸ್ಪಾಟ್ ನಂಬರ್ 4ಕ್ಕೆ ತೆರಳಿದೆ. ಕಡಿದಾದ ದಾರಿಯಲ್ಲಿ ಈ ಸ್ಪಾಟ್ ಗೆ ಎಸ್ ಐಟಿ ಹಾಗೂ ಅಧಿಕಾರಿಗಳ ತಂಡ ತೆರಳಬೇಕಾಗಿದೆ.
ಇಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದೆ.
ಶವ ಹೂತ್ತಿಟ್ಟ ಸ್ಥಳದ ಉತ್ಖನನ ಕಾರ್ಯ ನಿನ್ನೆ(ಮಂಗಳವಾರ) ಆರಂಭಿಸಲಾಗಿತ್ರು. ನಿನ್ನೆ ಸ್ಪಾಟ್ ನಂಬರ್ 1ರಲ್ಲಿ ಅಗೆತ ನಡೆಸಲಾಗಿತ್ರು. ಆದರೆ, ಎಸ್ ಐಟಿ ತಂಡ ಯಾವುದೇ ಅಸ್ತಿಪಂಜರ ಸಿಗದ ಬರಿಗೈಯಲ್ಲಿ ವಾಪಸಾಗಿತ್ತು. ಎರಡನೇ ದಿನವಾದ ಇಂದು(ಬುಧವಾರ) ಸ್ಪಾಟ್ 2, 3ರಲ್ಲಿ ಮಧ್ಯಾಹ್ನ 3 ಗಂಟೆ ತನಕ ಉತ್ಖನನ ನಡೆಸಿತ್ತು. ಆದರೆ ಅಸ್ತಿಪಂಜರವಿರುವ ಯಾವುದೇ ಕುರುಹು ಲಭ್ಯವಾಗಲಿಲ್ಲ. ಆದರೆ, ಸ್ಪಾಟ್ ನಂಬರ್ 1ರಲ್ಲಿ ಡೆಬಿಟ್ ಮತ್ತು ಪಾನ್ ಕಾರ್ಡ್ ಲಭ್ಯವಾಗಿರುವ ಮಾಹಿತಿ ಇದೆ. ಇದೀಗ ಸ್ಪಾಟ್ ನಂಬರ್ 4ರ ಉತ್ಖನನ ಪ್ರಕ್ರಿಯೆ ಆರಂಭವಾಗಿದೆ. ಇಂದು ಸ್ಪಾಟ್ ನಂಬರ್ 2, 3 ಮತ್ತು 4ರ ಉತ್ಖನನ ನಡೆಸಲು ಈ ಮುನ್ನವೇ ನಿರ್ಧರಿಸಲಾಗಿತ್ತು.