ಇತ್ತೀಚಿನ ಸುದ್ದಿ
ದೇವಿನಗರ ಸುಬ್ರಹ್ಮಣ್ಯ ದೇವಸ್ಥಾನದ ಮೇಲ್ಚಾವಣಿ ಶಾಸಕ ಡಾ. ಭರತ್ ಶೆಟ್ಟಿ ಉದ್ಘಾಟನೆ
14/12/2022, 22:24

ಸುರತ್ಕಲ್(reporterkarnataka.com): ಕುಂಜತ್ತಬೈಲ್ ಉತ್ತರ ವಾರ್ಡಿನ ದೇವಿನಗರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಮ್ಮ ಶಾಸಕರ ನಿಧಿಯಿಂದ ಹಾಕಿಸಲಾದ ಮೇಲ್ಚಾವಣಿಯನ್ನು ಡಾ. ಭರತ್ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಸಕರನ್ನು ದೇವಸ್ಥಾನದ ಆಡಳಿತ ಮಂಡಳಿಯಿಂದ ಗೌರವಿಸಲಾಯಿತು. ಪಾಲಿಕೆಯ ಸ್ಥಳೀಯ ಸದಸ್ಯರಾದ ಶರತ್ ಕುಮಾರ್, ಬೂತ್ ಅಧ್ಯಕ್ಷರಾದ ಅಮನ್ ,ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಾಬಣ್ಣ ಹಾಗೂ ಕೃಷ್ಣ ದೇವಿ ನಗರ,, ಜಗನ್ನಾಥ್, ಪೊನ್ನುಸ್ವಾಮಿ, ಜಗದೀಶ, ಆನಂದ, ಸುರೇಶ್, ಶಕ್ತಿಕೇಂದ್ರ ಅಧ್ಯಕ್ಷರಾದ ಗಣೇಶ್ ಕುಲಾಲ್, ಪ್ರಮುಖರಾದ ದೇವಸ್ಥಾನದ ದಿವಾಕರ ಪಕ್ಕಲ, ಚಂದ್ರಶೇಖರ್ ಸೇನವ, ಶೇಖರ್ ಶೆಟ್ಟಿ,ಆಡಳಿತ ಮಂಡಳಿಯ ಸದಸ್ಯರುಗಳು ಹಾಗೂ ಭಕ್ತಾದಿಗಳು ಇದ್ದರು.