1:25 AM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ದೇವಾಲಯಗಳ ನೆಲಸಮ: ಬಿಜೆಪಿ ಸರಕಾರದ ಬಗ್ಗೆ ಕೆಪಿಸಿಸಿ ಪ್ಯಾನಲಿಸ್ಟ್  ವೆರೋನಿಕಾ ಕರ್ನೆಲಿಯೊ ಹೇಳಿದ್ದೇನು? 

16/09/2021, 16:53

ಉಡುಪಿ(reporterkarnataka.com): ಮೈಸೂರಿನಲ್ಲಿ ನಡೆದಿರುವ ದೇವಾಲಯಗಳ ಕೆಡಹುವಿಕೆ ಪ್ರಕ್ರಿಯೆ ನಿಜಕ್ಕೂ ಬೇಸರ ಹಾಗೂ ಭಕ್ತರ ಭಾವನೆಗಳಿಗೆ ನೋವು ತರುವ ಸಂಗತಿಯಾಗಿದ್ದು, ಇದನ್ನು ತಾನು ತೀವ್ರವಾಗಿ ಖಂಡಿಸುವುದಾಗಿ ಕೆಪಿಸಿಸಿ ಪ್ಯಾನಲಿಸ್ಟ್‌ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.

ಒಂದು ದೇವಸ್ಥಾನ ಧಾರ್ಮಿಕ ಕೇಂದ್ರವಾಗಿದ್ದು ಅದರ ಮೇಲೆ ಭಕ್ತರಿಗೆ ತನ್ನದೆ ಆದ ಭರವಸೆ ನಂಬಿಕೆ ಇಟ್ಟುಕೊಂಡು ಅಲ್ಲಿ ಶಾಂತಿ ಸಮಾಧಾನವನ್ನು ಬಯಸಿಕೊಂಡು ಹೋಗುತ್ತಾರೆ. ಅಂತಹ ಒಂದು ಭಾವನಾತ್ಮಕ ಸಂಬಂಧವನ್ನು ಹೊಂದಿರುವ ದೇವಸ್ಥಾನವನ್ನು ಏಕಾಏಕಿ ಕೆಡಹುವುದು ಭಕ್ತರ ಭಾವನೆ ಮತ್ತು ಭಕ್ತಿಗೆ ಧಕ್ಕೆ ತರುವಂತಹ ವಿಚಾರವಾಗಿದೆ. ಒಂದು ವೇಳೆ ಅಂತಹ ದೇವಸ್ಥಾನ ಅನಧಿಕೃತ ಎಂದಾದಲ್ಲಿ ಅದನ್ನು ಕಟ್ಟುವಾಗಲೇ ಅದರ ಕುರಿತು ಕ್ರಮ ಜರುಗಿಸಬೇಕಾಗಿತ್ತು ಅದನ್ನು ಬಿಟ್ಟು ಇಷ್ಟು ವರ್ಷ ಆರಾಧಿಸಿಕೊಂಡು ಬಂದಿರುವಂತಹ ದೇವಸ್ಥಾನವನ್ನು ಕೆಡವಿದ್ದು ಸರಿಯಲ್ಲ. ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಹಂತಗಳಲ್ಲಿ ಬಿಜೆಪಿ ಸರಕಾರವೇ ಇದ್ದರೂ ಕೂಡ ಅದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಏಕೆ ಸಾಧ್ಯವಾಗಿಲ್ಲ. ಈ ಹಿಂದೆ ಕೂಡ ನ್ಯಾಯಾಲಯಗಳು ಇಂತಹ ಆದೇಶ ನೀಡಿದಾಗ ನ್ಯಾಯಾಲಯಕ್ಕೆ ಸರಕಾರದಿಂದ ಮನವರಿಕೆ ಮಾಡಿದಂಥಹ ಹಲವಾರು ಘಟನೆಗಳು ನಡೆದಿವೆ. ಹಾಗಿದ್ದರೂ ಕೂಡ ಬಿಜೆಪಿ ನಾಯಕರು ಈ ವಿಚಾರದಲ್ಲಿ ಮೌನವಾಗಿರುವುದು ಏಕೆ? ಬಿಜೆಪಿಗರು ಈ ವಿಚಾರದಲ್ಲಿ ಮೌನವಾಗಿದ್ದಾಗ ಕೂಡ ಸಂಘಟನೆಗಳು ಯಾಕೆ ಮಾತನಾಡುತ್ತಿಲ್ಲ ಬಿಜೆಪಿ ಸರಕಾರ ಇದ್ದಾಗ ದೇವರ ರಕ್ಷಣೆ ಮಾಡುವುದು ಸಾಧ್ಯವಿಲ್ಲವೇ? ಈ ವಿಚಾರದಲ್ಲಿ ಪ್ರತಿಯೊಬ್ಬ ಧರ್ಮದವರು ಕೂಡ ಪ್ರತಿಭಟಿಸಬೇಕಾದ ಪ್ರಮೇಯ ಒದಗಿ ಬಂದಿದೆ ಪ್ರತಿಯೊಬ್ಬರು ಅವರವರ ಧರ್ಮದ ರಕ್ಷಣೆ ಮಾಡುವ ಜವಾಬ್ದಾರಿ ಇದೆ.

ಇಷ್ಟೋಂದು ಪುರಾತನ ದೇವಾಲಯವನ್ನು ಜೆಸಿಬಿ ಮೂಲಕ ನೆಲಸಮ ಮಾಡಿದ್ದಲ್ಲದೆ ಅಲ್ಲಿದ್ದ ದೇವರ ಮೂರ್ತಿಗಳನ್ನು ಕಸದ ತೊಟ್ಟಿಗೆ ಎಸೆದಿರುವುದುನ್ನು ನೋಡಿದರೆ ಪ್ರತಿಯೊಬ್ಬರ ಮನಸ್ಸಿಗೂ ಕೂಡ ನೋವುಂಟು ಮಾಡುತ್ತದೆ. ರಾಜ್ಯದಲ್ಲಿ ಬಿಜೆಪಿ ಸರಕಾರವೇ ಅಧಿಕಾರದಲ್ಲಿರುವಾಗ ಇಂತಹ ಘಟನೆ ನಡೆದಿರುವುದು ನಿಜಕ್ಕೂ ಖಂಡನೀಯವಾಗಿದೆ. ಹಿಂದೂ ಧರ್ಮದ ರಕ್ಷಣೆಯನ್ನು ಗುತ್ತಿಗೆ ಪಡೆದವರ ರೀತಿ ಮಾತನಾಡುತ್ತಿದ್ದ ಬಿಜೆಪಿಗೆ ಇಂತಹ ದುಸ್ಸಾಹಸ ಮಾಡುವ ಮೊದಲು ಹಿಂದುತ್ವ ರಕ್ಷಣೆಯ ನೆ‌ನಪಾಗದೇ ಇರುವುದು ಮಾತ್ರ ಬೇಸರದ ವಿಚಾರವಾಗಿದೆ.

ಜನರ ಭಾವನಾತ್ಮಕ ಧಾರ್ಮಿಕ ಭಾವನೆಗಳಿಗೆ ಬಿಜೆಪಿ ಸರ್ಕಾರ ಧಕ್ಕೆ ತರುತ್ತಿದ್ದು, ಇದೇ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದ್ದರೆ ಇದೇ ಬಿಜೆಪಿ ನಾಯಕರು ಬೀದಿಗೆ ಬಂದು ಹೋರಾಟ ಮಾಡುತ್ತಿದ್ದರು. ಆದರೆ ಇವರದ್ದೇ ಬಿಜೆಪಿ ಸರಕಾರ ಆಡಳಿತದಲ್ಲಿ ಇರುವಾಗ ಇದರ ಬಗ್ಗೆ ಪ್ರತಿಕ್ರಿಯಿಸಿದೇ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅವರು ಮಾಧ್ಯಮ ಪ್ರಕಟಣೆಯ ಮೂಲಕ ಕಿಡಿಕಾರಿದ್ದಾರೆ

ಇತ್ತೀಚಿನ ಸುದ್ದಿ

ಜಾಹೀರಾತು