ಇತ್ತೀಚಿನ ಸುದ್ದಿ
ದೇವದಾಸಿಯರ ಮಕ್ಕಳಿಗೆ ತಂದೆಯ ಹೆಸರು ದಾಖಲಿಸುವುದು ಕಡ್ಡಾಯವಲ್ಲ: ರಾಜ್ಯ ಸರಕಾರ
09/12/2022, 20:26

ಬೆಂಗಳೂರು(reporterkarnataka.com): ದೇವದಾಸಿಯರ ಮಕ್ಕಳು ಸರ್ಕಾರಿ ಸೌಲಭ್ಯ ಪಡೆಯಲು ತಂದೆಯ ಹೆಸರನ್ನು ದಾಖಲಿಸುವುದು ಕಡ್ಡಾಯವಲ್ಲ, ಅದು ಐಚ್ಚಿಕವಾಗಿರುತ್ತದೆ.’
ಹೀಗೆಂದು ಸರಕಾರ ಆದೇಶ ಹೊರಡಿಸಿದೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಕುಂದು ಕೊರತೆ ಪರಿಹಾರ ಸಂಬಂಧ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.