5:29 PM Sunday1 - February 2026
ಬ್ರೇಕಿಂಗ್ ನ್ಯೂಸ್
ಮೊದಲಿನಂತೆ ಸ್ವತಂತ್ರವಾಗಿ ಸಿನಿಮಾ ಮಾಡಲಾಗುತ್ತಿಲ್ಲ: ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಇಂದ್ರಿಯ ನಿಗ್ರಹಿಸುವುದೇ ನೈಜ ಜ್ಞಾನ; ಇದುವೇ ಜೀವನ ಮಾರ್ಗ : ಶೃಂಗೇರಿ ಶಾರದಾಪೀಠದ… ಗೃಹ ಸಚಿವರ ರಾಜೀನಾಮೆ, ಪೊಲೀಸ್ ಕಮೀಷನರ್ ಅಮಾನತಿಗೆ ಬಿಜೆಪಿ ಆಗ್ರಹ ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ದೇವದುರ್ಗ: ಕಿರಾಣಿ ಅಂಗಡಿಗಳಲ್ಲಿ ಬಡವರ ಲೂಟಿ, ಕಲಬೆರಕೆ ಗೊಬ್ಬರ ಮೂಲಕ ರೈತರ ಜೇಬಿಗೆ ಕತ್ತರಿ, ಅಕ್ರಮ ಮದ್ಯ ದಂಧೆಯಲ್ಲಿ ಲಕ್ಷ ಲಕ್ಷ ಕಮಾಯಿ!!

27/05/2021, 07:51

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜನಪ್ರತಿನಿಧಿಗಳು ಯಾಕೆ ಸೂಚಿಸುವುದಿಲ್ಲ? ಪ್ರಗತಿ ಪರಿಶೀಲನ ಸಭೆಯಲ್ಲಿ ಅಧಿಕಾರಿಗಳಿಗೆ ಯಾಕೆ ಎಚ್ಚರಿಕೆ ನೀಡುತ್ತಿಲ್ಲ? ಎಂಬ ಪ್ರಶ್ನೆಯನ್ನು ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದ ಸಾರ್ವಜನಿಕರು ಕೇಳುತ್ತಿದ್ದಾರೆ. ಗಬ್ಬೂರ್ ಹೋಬಳಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ, ಕಿರಾಣಿ ಅಂಗಡಿಗಳನ್ನು ಲೂಟಿ ಮಾಡಲಾಗುತ್ತಿದೆ, ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಆದರೆ ಜನಪ್ರತಿನಿಧಿಗಳು ಮೌನವಹಿಸಿದ್ದಾರೆ ಎಂಬ ಆರೋಪವಿದೆ.

ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿದೆ.160 ರೂಪಾಯಿಯ ಬೀರ್ 400 ರೂಪಾಯಿಗೆ, 100 ರೂಪಾಯಿಯ ಕ್ವಾಟರ್ 450 ರೂ.ಗೆ ಮಾರಾಟವಾಗುತ್ತಿದೆ. ಇವೆಲ್ಲವನ್ನು ತಡೆಯಲು ಅಬಕಾರಿ ಇಲಾಖೆಯಲ್ಲಿ ಸಿಬ್ಬಂದಿಗಳು ಇಲ್ಲವಂತೆ. ಹಾಗೆ ಕಿರಾಣಿ ಅಂಗಡಿಗಳ ಲೂಟಿ ನಡೆಯುತ್ತಿದೆ

ಸುಂಕೇಶ್ವರಹಳ, ಗಬ್ಬುರ್ ದಲ್ಲಿ 1ಕೆಜಿ ಎಣ್ಣೆ 220 ರೂ. ಮಾರಾಟ ಮಾಡಲಾಗುತ್ತದೆ. ಇಷ್ಟೆಲ್ಲ ಹಣ ಕೊಟ್ಟು ಬಡವರಿಗೆ ತಿನ್ನಲು  ಆಗುತ್ತಾ ತಹಶೀಲ್ದಾರ ಸಾಹೇಬರೇ? ಎಂದು ಬಡವರು ಪ್ರಶ್ನಿಸುತ್ತಿದ್ದಾರೆ. ಅಕ್ರಮ ಮರಳುಗಾರಿಕೆ ಮಾಡುವವರು, ಅಕ್ರಮ ಮದ್ಯ ಮಾರಾಟ ಮಾಡುವವರು, ಮಟ್ಕಾ ಬರೇದುಕೊಳ್ಳುವವರು, ದುಪ್ಪಟ್ಟು ರೇಟ್ ಕೊಟ್ಟು ತಿನ್ನಬಹುದು, ಆದರೆ ಬಡ ಸಾರ್ವಜನಿಕರು, ಕೂಲಿ ಕಾರ್ಮಿಕರು ತಿನ್ನಲು ಆಗುವುದಿಲ್ಲ. ಆದ ಕಾರಣ ದಯವಿಟ್ಟು ಕಿರಾಣಿ ಅಂಗಡಿಗಳ ಮೇಲೆ ದಾಳಿ ಮಾಡಿ. ಇನ್ನು ಮುಂದೆ ಮೋಸ ಮಾಡದಂತೆ ತಡೆಯಿರಿ ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.

ದೇವದುರ್ಗ ಪಟ್ಟಣದಲ್ಲಿ ಯೂರಿಯಾ ಗೊಬ್ಬರವನ್ನು ಕೃತಕ ಸೃಷ್ಟಿ ಮಾಡಲು, ಬೇರೆ ಬೇರೆ ಸ್ಥಳಗಳಲ್ಲಿ ಸ್ಟಾಕ್  ಮಾಡುತ್ತಿದ್ದಾರೆ.  ಅಮಾಯಕ ರೈತ ಬಾಂಧವರೇ ಈ ಸಲವಾದರೂ ಎಚ್ಚೆತ್ತುಕೊಳ್ಖುವ ಅಗತ್ಯವಿದೆ. ಕರ್ನಾಟಕದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮೋಸ ಮಾಡುತ್ತಿರುವ ಗೊಬ್ಬರ  ಅಂಗಡಿಯ ಮಾಲೀಕರು ಗಳಿರುವುದು ದೇವದುರ್ಗದಲ್ಲಿ. ಬೇರೆ ಬೇರೆ ವಿಧದ ಬಹಳಷ್ಟು ನಿಷೇಧಿತ ಕ್ರಿಮಿನಾಶಕಗಳನ್ನು ಎರಡು ನೂರು ರೂಪಾಯಿ ತೆಗೆದುಕೊಂಡು ಬಂದು ರೈತರಿಗೆ ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಾರೆ. ಲಾಕ್ ಡೌನ್ ಸಮಯದಲ್ಲಿ ಜನರು ಕೆಲಸವಿಲ್ಲ ಮನೆಯಲ್ಲಿ ಕುಳಿತ್ತಿದ್ದಾರೆ. ಶಾಸಕ ಶಿವನಗೌಡ ನಾಯಕ್ ಅಧಿಕಾರಿಗಳ ಮೂಲಕ ಕ್ರಮ ಜರಗಿಸಿ ಬಡವರ ಪಾಲಿಗೆ ದಯ ತೋರಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು