ಇತ್ತೀಚಿನ ಸುದ್ದಿ
ದೇರೆಬೈಲ್ ನಲ್ಲಿ ಪ್ರಸ್ತಾವಿತ ಕಿಯೋನಿಕ್ಸ್ ಐಟಿ ಪಾರ್ಕ್: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪರಿಶೀಲನೆ
23/06/2023, 22:47
ಮಂಗಳೂರು(reporterkarnataka.com): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ನಗರದ ದೇರೆಬೈಲ್ನ ಬ್ಲೂಬೇರಿ ಹಿಲ್ಸ್ ನಲ್ಲಿ ಪ್ರಸ್ತಾಪಿತ ಕಿಯೋನಿಕ್ಸ್ ಐಟಿ ಪಾರ್ಕ್ ಭೇಟಿ ನೀಡಿ ಸಂಬಂಧಿಸಿದವರೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್, ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್,
ಜಿಲ್ಲಾಧಿಕಾರಿ ಮುಲ್ಲೈಮುಗಿಲನ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್, ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಯ)ಯ ಜಿಲ್ಲಾ ಅಧ್ಯಕ್ಷ ಪ್ರವೀಣ್ ಕಲ್ಬಾವಿ, ಗೌರವ್ ಹೆಗ್ಡೆ, ಸಾಫ್ಟ್ ವೇರ್ ಟೆಕ್ನಾಲಜಿ ಪಾಕ್೯ ಆಫ್ ಇಂಡಿಯಾದ ಜಂಟಿ ನಿರ್ದೇಶಕ ರವೀಂದ್ರ ಆರೋರಾ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.