ಇತ್ತೀಚಿನ ಸುದ್ದಿ
ಚಾರ್ಮಾಡಿ ಘಾಟಿ ರಸ್ತೆಯಲ್ಲಿ ದಟ್ಟ ಮಂಜು: ಕೇವಲ 5 ಅಡಿ ಅಂತರದಲ್ಲೂ ಕಾಣದ ವಾಹನಗಳು; ಚಾಲಕರೇ ಹುಷಾರ್!
06/07/2025, 12:52

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಂಗಳೂರು- ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಮುಸುಕಿದ್ದು, ಕೇವಲ
5 ಅಡಿ ದೂರದಲ್ಲಿರುವ ವಾಹನಗಳು ಕೂಡ ಕಾಣಿಸುವುದಿಲ್ಲ.
ಇದರಿಂದ ವಾಹನ ಚಾಲನೆ ತುಂಬಾ ಕಷ್ಟಕರವಾಗಿ ಪರಿಣಮಿಸಿದೆ.
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಮಳೆಯ ಜತೆಗೆ ದಟ್ಟ ಮಂಜು ಕೂಡ ಕವಿದಿದೆ. ಹಗಲಲ್ಲೇ ಇಲ್ಲಿ ವಾಹನ ಚಾಲನೆ ಮಾಡೋದೇ ಕಷ್ಟವಾಗಿರುವುದರಿಂದ ರಾತ್ರಿ ವೇಳೆ ಪ್ರಯಾಣ ಮತ್ತಷ್ಟು ಕಷ್ಟಕರವಾಗಿದೆ. ಹಾವು-ಬಳುಕಿನ ಮೈಕಟ್ಟಿನ ರಸ್ತೆ ಸಮಸ್ಯೆ ತಂದೊಡ್ಡಬಹುದು. ತಿರುವುಗಳಲ್ಲಿ ಹೆಡ್ ಲೈಟ್ ಜೊತೆ ಹಾರನ್ ಮಾಡ್ಕೊಂಡು ಹೋಗೋದು ಒಳ್ಳೆಯದು ಎಂಬ ಅಭಿಪ್ರಾಯ ಕೇಳಿ ಬಂದಿದೆ. ತಕ್ಷಣ ಕಂಟ್ರೋಲ್ ಮಾಡೋಕ್ ಹೋದ್ರೆ ಗಾಡಿ ಅಪ್ಸೆಟ್ ಆಗೋದು ಗ್ಯಾರಂಟಿ ಎನ್ನಲಾಗಿದೆ. ಚಾರ್ಮಾಡಿ ಘಾಟಿ ರಸ್ತೆಯು ಒಂದೆಡೆ ಗುಡ್ಡ, ಮತ್ತೊಂದೆಡೆ ಪ್ರಪಾತದಿಂದ ಕೂಡಿದೆ.