ಇತ್ತೀಚಿನ ಸುದ್ದಿ
ದೆಹಲಿ ಉಪ ಮುಖ್ಯಮಂತ್ರಿ ಸಿಸೋಡಿಯಾ ಬಂಧನಕ್ಕೆ ಹೆಚ್ಚಿನ ಸಿಬಿಐ ಅಧಿಕಾರಿಗಳ ವಿರೋಧ ಇತ್ತು: ಕೇಜ್ರಿವಾಲ್
27/02/2023, 13:35
ಮೃದುಲಾ ನಾಯರ್ ಹೊಸದಿಲ್ಲಿ
info.reporterkarnataka@gmail.com
ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನಕ್ಕೆ ಹೆಚ್ಚಿನ ಸಿಬಿಐ ಅಧಿಕಾರಿಗಳು ವಿರೋಧಿಸಿದ್ದಾರೆ. ಆದರೆ ಮನೀಶ್ ಬಂಧನಕ್ಕೆ ರಾಜಕೀಯ ಒತ್ತಡ ಎಷ್ಟಿತ್ತೆಂದರೆ ಅವರು ತಮ್ಮ ರಾಜಕೀಯ ಯಜಮಾನರಿಗೆ ವಿಧೇಯರಾಗಬೇಕಾಯಿತು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.
ಸೋಮವಾರ ದೆಹಲಿಯಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ಮನೀಶ್ ಬಂಧನಕ್ಕೆ ಹೆಚ್ಚಿನ ಸಿಬಿಐ ಅಧಿಕಾರಿಗಳು ವಿರೋಧಿಸಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ಅವರೆಲ್ಲರಿಗೂ ಅವರ ಬಗ್ಗೆ ಅಪಾರ ಗೌರವವಿದೆ ಮತ್ತು ಅವರ ವಿರುದ್ಧ ಯಾವುದೇ ಪುರಾವೆಗಳಿಲ್ಲ. ಆದರೆ ಮನೀಶ್ ಅವರನ್ನು ಬಂಧಿಸುವ ರಾಜಕೀಯ ಒತ್ತಡ ಎಷ್ಟಿತ್ತೆಂದರೆ ಅವರು ತಮ್ಮ ರಾಜಕೀಯ ಯಜಮಾನರಿಗೆ ವಿಧೇಯರಾಗಬೇಕಾಯಿತು ಎಂದಿದ್ದಾರೆ.














