ಇತ್ತೀಚಿನ ಸುದ್ದಿ
ದೆಹಲಿ ಹೋದವರಿಗೆ ಹೈಕಮಾಂಡ್ ತಕ್ಕ ಉತ್ತರ ಕೊಟ್ಟು ಕಳುಹಿಸಿದೆ: ನಾಯಕತ್ವ ಬದಲಾವಣೆ ಕುರಿತು ಬಿಎಸ್ ವೈ ಖಡಕ್ ಪ್ರತಿಕ್ರಿಯೆ
27/05/2021, 16:47
ಬೆಂಗಳೂರು(reporterkarnataka news): ಪ್ರಸ್ತುತ ನನ್ನೆದುರಿಗೆ ಇರುವುದು ಕೊರೊನಾ ಸವಾಲು ಮಾತ್ರ. ಕೊರೊನಾ ಎದುರಿಸಲು ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇನೆ. ಅದು ಬಿಟ್ಟು ನನ್ನ ಬಳಿ ಬೇರೆ ಏನೂ ಆಲೋಚನೆಗಳಿಲ್ಲ. ದೆಹಲಿಗೆ ಹೋದವರಿಗೆ
ಹೈಕಮಾಂಡ್ ತಕ್ಕ ಉತ್ತರ ಕೊಟ್ಟು ಕಳುಹಿಸಿದೆ. ಇನ್ನು ಶಾಸಕಾಂಗ ಸಭೆ ಕುರಿತು ನಿಮ್ಮ ಮುಂದೆ ಚರ್ಚಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ರಾಜ್ಯ ನಾಯಕತ್ವ ಬದಲಾವಣೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಖಾರವಾಗಿಯೇ ಉತ್ತರ ನೀಡಿದರು.
ಇಂದಿನ ಪರಿಸ್ಥಿತಿಯಲ್ಲಿ ಸಚಿವರು, ಶಾಸಕರು ಒಟ್ಟಾಗಿ ಕೋವಿಡ್ ಎದುರಿಸಬೇಕಿದೆ. ಕೊರೊನಾ ನಿಯಂತ್ರಿಸುವುದು, ಜನಹಿತ ಕಾಪಾಡುವುದು ನನ್ನ ಆದ್ಯತೆಯಾಗಿದೆ. ಯಾರೋ ಒಬ್ಬರು ಎಲ್ಲಿಗೋ ಹೋಗಿ ಬಂದರು, ಅದೆಲ್ಲ ನನಗೆ ಅಗತ್ಯವಿಲ್ಲ.
ಹೈಕಮಾಂಡ್ ಅವರಿಗೆ ಉತ್ತರ ಕೊಟ್ಟು ಕಳುಹಿಸಿದೆ. ಇನ್ನು ಶಾಸಕಾಂಗ ಪಕ್ಷದ ಸಭೆ ಕರೆಯುವ ವಿಚಾರ ನಿಮ್ಮೊಂದಿಗೆ ಚರ್ಚಿಸುವ ಅಗತ್ಯವಿಲ್ಲ ಎಂದರು.