ಇತ್ತೀಚಿನ ಸುದ್ದಿ
ದೆಹಲಿ ಗಣರಾಜ್ಯೋತ್ಸವ ಪರೇಡ್: ಮಂಗಳೂರು ವಿಶ್ವ ವಿದ್ಯಾನಿಲಯದಿಂದ 3 ಮಂದಿ ಆಯ್ಕೆ
25/01/2023, 23:39

ಮಂಗಳೂರು(reporterkarnataka.com): ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನದ ಪಥಸಂಚಲನದಲ್ಲಿ ಭಾಗವಹಿಸಲು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ 3 ಮಂದಿ ಆಯ್ಜೆಗೊಂಡಿದ್ದಾರೆ.
ಎನ್ನೆಸ್ಸೆಸ್ ಸ್ವಯಂ ಸೇವಕರಾದ ಮಂಗಳೂರು ಎಸ್. ಡಿ. ಎಂ ಕಾಲೇಜಿನ ಭವಿಷ್ ಶೆಟ್ಟಿ, ಮಂಗಳೂರು ಬೆಸೆಂಟ್ ಮಹಿಳಾ ಕಾಲೇಜಿನ ತನುಶ್ರೀ ಹಾಗೂ ಉಡುಪಿ ಎಂ. ಜಿ. ಎಂ ಕಾಲೇಜಿನ ವಸುಪ್ರಧ ಆಯ್ಕೆಗೊಂಡಿದ್ದಾರೆ. ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ರಾ. ಸೇ.ಯೋ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.