ಇತ್ತೀಚಿನ ಸುದ್ದಿ
ಭದ್ರಾವತಿಯ ಯುವಕ ಹಾಗೂ ಬೆಂಗಳೂರಿನ ಯುವತಿಯ ಶವ ಕಾಫಿನಾಡಲ್ಲಿ ಪತ್ತೆ: ಕೊಲೆಗೈದು ಆತ್ಮಹತ್ಯೆ ಶಂಕೆ
20/02/2025, 15:50

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ನಿಂತಿದ್ದ ಕಾರಲ್ಲಿ ಯುವತಿಯ ಶವ ಹಾಗೂ ಪಕ್ಕದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.
ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಖಾಸಗಿ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿ ಪೂರ್ಣಿಮಾ(25) ಹಾಗೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಮಧು ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಯುವತಿಯನ್ನು ಕೊಂದು, ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಬೆಂಗಳೂರು ನೋಂದಣಿಯ yellow board ಕಾರಿನಲ್ಲಿ ಯುವಕ-ಯುವತಿ ಬಂದಿದ್ದರು.
ಯುವತಿಯ ಕುತ್ತಿಗೆಯಲ್ಲಿ ಕತ್ತು ಹಿಸುಕಿರುವ ಗುರುತು ಕಂಡು ಬಂದಿದೆ ಎನ್ನಲಾಗಿದೆ. ಯುವಕನ ಶವ ಪಕ್ಕದ ಮರದಲ್ಲಿ ವೇಲ್ ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಇದೆ.
ಪೂರ್ಣಿಮಾ ಮಾಗಡಿ ಪಟ್ಟಣದ ಖಾಸಗಿ ಹೈಸ್ಕೂಲ್‌ನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು.ಬೇರೆಯವರೊಂದಿಗೆ ಎಂಗೇಜ್ಮೆಂಟ್ ಆಗಿದ್ದ ಇವಳನ್ನು ಮಧು ಡ್ರಾಪ್ ನೆಪದಲ್ಲಿ ಕಾರಿನಲ್ಲಿ ಕರೆತಂದು ‘ಟ್ರಿಪ್ ಹೋಗೋಣ’ ಎಂದು ಹೇಳಿ ಚಿಕ್ಕಮಗಳೂರಿನ ದಾಸರಹಳ್ಳಿಗೆ ಕರೆದುಕೊಂಡು ಹೋಗಿದ್ದ. ಮಧು ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದವನಾಗಿದ್ದು,ಮಾಗಡಿಯಲ್ಲಿ ಡ್ರೈವರ್ ವೃತ್ತಿ ಮಾಡಿಕೊಂಡಿದ್ದ.
ಮಧು ಪೂರ್ಣಿಮಾ ಕುಟುಂಬಕ್ಕೆ ಚಿರಪರಿಚಿತನಾಗಿದ್ದು,ಕಳೆದ ಮೂರು ವರ್ಷಗಳಿಂದ ಅವರ ಮನೆಗೆ ಬಂದು ಹೋಗುತ್ತಿದ್ದ. ಪೂರ್ಣಿಮಾ ಮತ್ತು ಮಧು ನಡುವಿನ ಸಂಬಂಧ ಪ್ರೀತಿಯ ಆಳತೆಗೆ ತಲುಪಿದ್ದು, ಇದರ ಫಲವಾಗಿ ಮುಜುಗರದ ಕಾರಣದಿಂದ ಮಧು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಪೂರ್ಣಿಮಾ ಮೇಲೆ ಯಾವುದೇ ಆಭರಣಗಳಿಲ್ಲದ ಸ್ಥಿತಿಯಲ್ಲಿ ಅವಳ ದೇಹ ಪತ್ತೆಯಾಗಿದ್ದು, ಘಟನೆ ಇನ್ನಷ್ಟು ಸಸ್ಪೆನ್ಸ್ ಹೆಚ್ಚಿಸಿದೆ.
ಈ ಇಬ್ಬರ ಮೃತ ದೇಹಗಳು ಚಿಕ್ಕಮಗಳೂರು ಜಿಲ್ಲಾ ಶವಾಗಾರದಲ್ಲಿ ಇರಿಸಲಾಗಿದ್ದು,ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಹಿಂದಿನ ನಿಜವಾದ ಕಾರಣವನ್ನ ತಿಳಿದುಕೊಳ್ಳಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.