ಇತ್ತೀಚಿನ ಸುದ್ದಿ
ದಾವಣಗೆರೆ ಪತ್ರಕರ್ತನ ಬಿಡುಗಡೆ ಮಾಡಿ: ಕಾನಿಪ ಧ್ವನಿ ಮಸ್ಕಿ ತಾಲೂಕು ಘಟಕ ರಾಜ್ಯಪಾಲರಿಗೆ ಮನವಿ
25/03/2023, 14:47
ರಾಯಚೂರು(reporterkarnataka.com): ಬಂಧನದಲ್ಲಿರುವ ದಾವಣಗೆರೆ ಜಿಲ್ಲೆಯ ಬಿ ಟಿವಿ ವರದಿಗಾರ ಮೈಬೂಬ್ ವನವಳ್ಳಿ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಮತ್ತು ಸೂಕ್ತ ತನಿಖೆಗೆ ಆದೇಶಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿಯ ಮಸ್ಕಿ ತಾಲೂಕು ಘಟಕದ ಅಧ್ಯಕ್ಷ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ನೇತೃತ್ವದ ನಿಯೋಗ ರಾಜ್ಯಪಾಲರಿಗೆ ತಹಶೀಲ್ದಾರ್ ಮೂಲಕ ಮನವಿ ಮಾಡಿದೆ.
ಮೈಬುಬ್ ಮುನವಳ್ಳಿ ಅವರು ಕೊಲೆ ಆರೋಪಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ಬಂಧಿಸಿರುವ ಪೊಲೀಸ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಕ್ಷಣ ಅವರನ್ನು ಬಿಡುಗಡೆಗೊಳಿಸಬೇಕೆಂದು ಪತ್ರಕರ್ತರ ನಿಯೋಗ ಆಗ್ರಹಿಸಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಮಾತನಾಡಿ, ಭ್ರಷ್ಟಾಚಾರ ವಿರೋಧಿಸಿ ಜನಸಾಮಾನ್ಯರ ಸಮಸ್ಯೆಗಳನ್ನ ಎತ್ತಿ ಹಿಡಿದು ವರದಿ ಮಾಡುವ ವರದಿಗಾರರನ್ನು ಗುರಿಯಾಗಿರಿಸಿಕೊಂಡು ಕೆಲ ಸಮಾಜಘಾತಕ ಪಟ್ಬಭದ್ರ ಹಿತಾಶಕ್ತಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ರಾಜ್ಯದಲ್ಲಿ ಪತ್ರಕರ್ತರ ಮೇಲೆ ಪದೇ ಪದೇ ದೌರ್ಜನ್ಯ ನಡೆಸುತ್ತಿದ್ದಾರೆ. ಇಂತಹ ಬೆದರಿಕೆಗಳಿಗೆ ಜಗ್ಗದೆ ಪಾರದರ್ಶಕವಾಗಿ ವರದಿಗಳನ್ನು ಮಾಡಿದ್ದಾಗ ಕೆಲ ಪ್ರಭಾವಿಗಳು ವರದಿಗಾರರ ಮೇಲೆ ಸುಳ್ಳು ಕೇಸ್ ಹಾಕುವ ಮೂಲಕ ವರದಿಗಾರರನ್ನು ಕುಗ್ಗಿಸುವ ಮತ್ತು ಸಂಪೂರ್ಣವಾಗಿ ಮುಗಿಸುವ ತಂತ್ರಗಾರಿಕೆ ನಡೆಸುತ್ತಿದ್ದಾರೆ ಎಂದರು.


ಕಾನಿಪ ಧ್ವನಿ ಸಂಘಟನೆಯ ಜಿಲ್ಲಾ ಸಮಿತಿಯ ಸದಸ್ಯ ಎಸ್ ನಜೀರ್ ಮಾತನಾಡಿ, ರಾಜ್ಯದಲ್ಲಿ ಸಮಾಜಮುಖಿಯಾಗಿ ಪಾರದರ್ಶಕ ವರದಿ ಮಾಡುವ ವರದಿಗಾರರ ಮೇಲೆ ಕೊಲೆ ಬೆದರಿಕೆ, ಹಲ್ಲೆ, ಗುಂಡಾಗಿರಿ ನಡೆಯುತ್ತಾನೆ ಇದೆ. ಇದನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ತೀವ್ರವಾಗಿ ಖಂಡಿಸುತ್ತದೆ. ಈ ಕೂಡಲೇ ಮಾನ್ಯ ರಾಜ್ಯಪಾಲರು ಮತ್ತು ಸರ್ಕಾರ ಇಂತಹ ವಿಷಯಗಳನ್ನು ಮುತ್ತುವರ್ಜಿ ವಹಿಸಿ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡುವಂತಹ ಕಾನೂನುಗಳನ್ನು ಜಾರಿಗೊಳಿಸ ಬೇಕು. ಜಿಲ್ಲಾ, ತಾಲೂಕು ಮಟ್ಟದ ಪತ್ರಕರ್ತರು ಪ್ರಭಾವಿಗಳ ಕೈಗೊಂಬೆಯಾಗದೆ ನಿರ್ಭಯವಾಗಿ ವರದಿಗಳನ್ನು ಬಿತ್ತರಿಸುವ ಮತ್ತು ಆರ್ಥಿಕವಾಗಿ ಸಫಲರಾಗುವ ಯೋಜನೆಗಳನ್ನು ಸರ್ಕಾರ ನೀಡಬೇಕೆಂದು. ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾನಿಪ ದ್ವನಿ ಮಸ್ಕಿ ತಾಲೂಕು ಪ್ರಧಾನ ಕಾರ್ಯದರ್ಶಿ ಮಾಂತೇಶ್ ಪಟ್ಟಣಶೆಟ್ಟಿ ದಿದಿಗೆ, ಬಸವರಾಜ್ ಉದ್ಬಾಳ್, ಬಾಲಚಂದ್ರ,ಶರಣಬಸವ, ಕೆ ಸರಸ್ವತಿ, ಮಲ್ಲಿಕಾರ್ಜುನ ಸೇರಿದಂತೆ ಇತರರು ಉಪಸ್ಥಿತರಿದ್ದರು.














