3:46 AM Monday24 - November 2025
ಬ್ರೇಕಿಂಗ್ ನ್ಯೂಸ್
Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ನ.28ರಂದು ಪ್ರಧಾನಿ ಮೋದಿ ಭೇಟಿ: ಸಾರ್ವತ್ರಿಕ ರಜೆ ಘೋಷಿಸಲು ಶಾಸಕ ಯಶ್… ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ನಿಧನ: ಭಾರತೀಯ ಚಿತ್ರರಂಗದ ‘ಹೀ-ಮ್ಯಾನ್’ಗೆ ವಿದಾಯ ನಾನೇ 5 ವರ್ಷ ಸಿಎಂ ಎಂದು ಎದೆಬಡಿದುಕೊಳ್ಳುವ ಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು: ಬಸವರಾಜ… ಗೋಣಿಕೊಪ್ಪಲು ಸಮೀಪದ ಕೈಕೇರಿ ಬಳಿ ಹಿಟ್ ಅಂಡ್ ರನ್ ಕೇಸ್: ಅಪರಿಚಿತ ವ್ಯಕ್ತಿ… ಐಸಿಡಿಎಸ್ ಸುವರ್ಣ ಮಹೋತ್ಸವ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಆಹ್ವಾನ ನೀಡಿದ ಸಚಿವೆ ಲಕ್ಷ್ಮೀ… ಹದಗೆಟ್ಟ ರಸ್ತೆಯಲ್ಲಿ ಅವಘಡಗಳ ಸರಮಾಲೆ: ಮಾಕುಟ್ಟಾ ರಸ್ತೆ ಮದ್ಯ ಲಾರಿ ಮಗುಚ್ಚಿ ಸುಗಮ… Chikkamagaluru | ಎನ್.ಆರ್.ಪುರ: ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ; ಜನರಲ್ಲಿ ಮತ್ತೆ… ಸಿದ್ದರಾಮಯ್ಯರ ಹಣಕಾಸು ಮಂತ್ರಿ ಮಾಡಿದ್ದೇ ನಾನು: ಸಿಎಂ ವಿರುದ್ದ ಮಾಜಿ ಪಿಎಂ ದೇವೇಗೌಡ…

ಇತ್ತೀಚಿನ ಸುದ್ದಿ

ದಶಕಗಳ ಬೇಡಿಕೆಗೆ ಕೊನೆಗೂ ಅಸ್ತು: ಮಂಗಳೂರು- ಕಾರ್ಕಳ ನಡುವೆ ಕೆಎಸ್ಸಾರ್ಟಿಸಿ ಬಸ್ ಸೇವೆ ಆರಂಭ

12/12/2024, 18:40

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನಾಗರಿಕರ ದಶಕಗಳ ಬೇಡಿಕೆ ಕೊನೆಗೂ ಈಡೇರಿದೆ. ಮಂಗಳೂರು- ಕಾರ್ಕಳ ಮಧ್ಯೆ ಮೂಡುಬಿದರೆ ಮಾರ್ಗವಾಗಿ ಕೆಎಸ್ಸಾರ್ಟಿಸಿ ಬಸ್ ಸೇವೆ ಆರಂಭಗೊಂಡಿದೆ.
ಮಂಗಳೂರು-ಕಾರ್ಕಳ ನಡುವೆ ಸದ್ಯ ನಾಲ್ಕು ಬಸ್‌ಗಳು ಮಾತ್ರ ಸಂಚರಿಸಲಿವೆ. ಪ್ರತಿದಿನ ಮಂಗಳೂರು ಕಡೆಯಿಂದ ಎರಡು ಬಸ್‌ಗಳು ಮತ್ತು ಕಾರ್ಕಳ ಕಡೆಯಿಂದ ಎರಡು ಬಸ್‌ಗಳು ಸೇವೆ ನೀಡಲಿವೆ. ಒಂದು ಬಸ್‌ ದಿನಕ್ಕೆ 7 ಟ್ರಿಪ್‌ನಂತೆ ನಾಲ್ಕು ಬಸ್‌ಗಳು ಒಟ್ಟು 28 ಟ್ರಿಪ್‌ ಈ ಮಾರ್ಗದಲ್ಲಿ ನಡೆಸಲಿವೆ. ಮಂಗಳೂರಿನ ಬಿಜೈನಲ್ಲಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಯಾನ ಆರಂಭಿಸಲಿದೆ. ಕಾರ್ಕಳ ಕಡೆಯಿಂದ ಬರುವ ಬಸ್ ಕೂಡ ಬಿಜೈ ಬಸ್ ನಿಲ್ದಾಣಕ್ಕೆ ಬರಲಿದೆ.


ಮಂಗಳೂರು- ಕಾರ್ಕಳ ನಡುವೆ ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ಈ ಭಾಗದ ಜನರ ಹಲವು ದಶಕಗಳ ಬೇಡಿಕೆಯಾಗಿದೆ. ಆದರೆ ಕರಾವಳಿ ಜಿಲ್ಲೆಗಳ ಖಾಸಗಿ ಬಸ್ ನವರ ಲಾಬಿ ಮತ್ತು ಇಲ್ಲಿನ ಕೆಲವು ರಾಜಕಾರಣಿಗಳೇ ಬಸ್ ಮಾಲೀಕರಾಗಿರುವ ಹಿನ್ನೆಲೆಯಲ್ಲಿ ಜನರ ಬೇಡಿಕೆಗೆ ರಾಜ್ಯ ಸರಕಾರ ಇದುವರೆಗೆ ಸ್ಪಂದಿಸಿರಲಿಲ್ಲ. ಇದೀಗ
ಖಾಸಗಿ ಬಸ್‌ ಮಾಲೀಕರ ಭಾರಿ ಲಾಬಿಯ ಮಧ್ಯೆಯೂ ರಾಜ್ಯ ಕಾಂಗ್ರೆಸ್ ಸರಕಾರ ತಾತ್ಕಾಲಿಕ 2 ಪರ್ಮಿಟ್‌ನಡಿ 4 ಬಸ್‌ಗಳ ಓಡಾಟ ಡಿ.11ರಿಂದ ಆರಂಭಿಸಿದೆ. ಇದರಿಂದ ರಾಜ್ಯ ಸರಕಾರದ ಮಹಿಳೆಯರಿಗೆ ಉಚಿತ ಬಸ್ ಸೇವೆಯಾದ ಶಕ್ತಿ ಯೋಜನೆಯ ಪ್ರಯೋಜನವನ್ನು ಮಂಗಳೂರು, ಕೈಕಂಬ, ಎಡಪದವು, ಮೂಡುಬಿದಿರೆ, ಬೆಳುವಾಯಿ ಪ್ರದೇಶದ ಮಹಿಳೆಯರೂ ಪಡೆಯುವಂತಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು