4:36 PM Friday3 - October 2025
ಬ್ರೇಕಿಂಗ್ ನ್ಯೂಸ್
Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್ Bangaluru | ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾಗೆ ಮಹಾತ್ಮ ಗಾಂಧಿ ಸೇವಾ… ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಪಟ್ಟದ ಆನೆ, ಕುದುರೆ, ಒಂಟೆಗೂ ಪೂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ: ದೇಶ – ವಿದೇಶಗಳ ಪ್ರಯಾಣಿಕರಿಗೆ…

ಇತ್ತೀಚಿನ ಸುದ್ದಿ

ದಸರಾ: ಜನದಟ್ಟನೆ ತಡೆಯಲು ಮಂಗಳೂರು- ಬೆಂಗಳೂರು ಮಧ್ಯೆ ವಿಶೇಷ ರೈಲು ಓಡಾಟ

26/09/2025, 20:09

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ದಸರಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಬೆಂಗಳೂರಿನಿಂದ ಹೊಸಪೇಟೆ ಮತ್ತು ಮಂಗಳೂರಿಗೆ ಒಂದು ಟ್ರಿಪ್ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ.
ಯಶವಂತಪುರ ಮತ್ತು ಮಂಗಳೂರು ನಡುವೆ ವಿಶೇಷ ರೈಲು ಸಂಖ್ಯೆ 06257/ 06258 ಸೆ. 30ರಂದು ಯಶವಂತಪುರದಿಂದ ರಾತ್ರಿ 11.55ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 11.15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಅ. 1ರಂದು 2.35ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 11.30ಕ್ಕೆ ಯಶವಂತಪುರ ತಲುಪಲಿದೆ ಎಂದು ರೈಲ್ವೇ ಪ್ರಕಟನೆ ತಿಳಿಸಿದೆ. ಸೆ. .26ರಂದು ಮತ್ತು ಸೆ.28ರಂದು ಎಸ್‌ಎಂವಿಬಿಯಿಂದ ಸಂಜೆ 7 ಗಂಟೆಗೆ ಹೊರಡಲಿರುವ ರೈಲು ಮರುದಿನ ಬೆಳಗ್ಗೆ 4.15ಕ್ಕೆ ಹೊಸಪೇಟೆ ತಲುಪಲಿದೆ. ಹೊಸಪೇಟಿಯಿಂದ ಸೆ.27 ಮತ್ತು ಸೆ.29ರಂದು ರಾತ್ರಿ 8.45ಕ್ಕೆ ಹೊರಡಲಿರುವ ರೈಲು ಬೆಳಗ್ಗೆ 8.10ಕ್ಕೆ ಎಸ್‌ಎಂವಿಬಿ ತಲುಪಲಿದೆ.
22 ಗಂಟೆಗಳಲ್ಲಿ ಸ್ಲೀಪರ್ ಕೋಚ್ ಬುಕ್!
ಬೆಂಗಳೂರು – ಮಂಗಳೂರು ನಡುವಿನ ದಸರಾ ವಿಶೇಷ ರೈಲಿಗೆ ರೈಲು ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರಕಿದೆ. 22 ಗಂಟೆಗಳಲ್ಲಿ ಸ್ಲೀಪರ್ ಕೋಚ್‌ನ ಎಲ್ಲಾ ಸೀಟುಗಳು ಬುಕ್ ಆಗಿದೆ. ಹಬ್ಬದ ಸಮಯದಲ್ಲಿ ಬೆಂಗಳೂರು ಮತ್ತು ಮಂಗಳೂರು ವಿಶೇಷ ರೈಲಿನ ಅಗತ್ಯವಿರುವುದು ಸಾಬೀತಾಗಿದೆ ಎಂದು ರೈಲು ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು