11:52 AM Monday30 - March 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ… ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರಕಾರಿ ಶುಶ್ರೂಷಾ ಕಾಲೇಜು 2ನೇ ಘಟಿಕೋತ್ಸವ ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ… ಕೈ ನಾಯಕರ ಸಂಧಾನ ಯಶಸ್ವಿ: ದಾವಣಗೆರೆ ದಕ್ಷಿಣ ಬಂಡಾಯ ಅಭ್ಯರ್ಥಿ ಪೈಲ್ವಾನ್ ಸ್ಪರ್ಧೆಯಿಂದ… ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿಯುತ್ತಿರುವ ಮೀಸಲು ಅರಣ್ಯ; ಅಪಾಯದಲ್ಲಿ ಜೀವ ಸಂಕುಲ 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

ಇತ್ತೀಚಿನ ಸುದ್ದಿ

ಧಾರ್ಮಿಕ ಚಿಂತಕ ಅಮಾಯಕ ಜೈನ ಮುನಿಯ ಬರ್ಬರ ಹತ್ಯೆ: ಮಂಗಳೂರಿನಲ್ಲಿ ಮೌನ ಪ್ರತಿಭಟನಾ ಮೆರವಣಿಗೆ

10/07/2023, 21:40

ಮಂಗಳೂರು(reporterkarnataka.com): ಧಾರ್ಮಿಕ ಚಿಂತಕರು ಹಾಗೂ ಧಾರ್ಮಿಕ ಗ್ರಂಥ ಬರಹಗಾರರಾದ ಅಮಾಯಕ ಮುನಿಗಳ ಬರ್ಬರ ಹತ್ಯೆ ದೇಶ ಕೇಳರಿಯದ ಸತ್ಯ ಎಂದು ಮೂಡಬಿದ್ರೆ ಜೈನ ಬಸದಿಯ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಜೈನ್ ಮಿಲನ್ ಹಾಗೂ ಜೈನ ಸಮುದಾಯದ ಆಶ್ರಯದಲ್ಲಿ ಬೆಳಗಾವಿಯ ಚಿಕ್ಕೋಡಿಯಲ್ಲಿನ ಜೈನ ದಿಗಂಬರ ಜೈನ ಮುನಿ ಆಚಾರ್ಯ 108 ಕಾಮಕುಮಾರನಂದಿ ಹತ್ಯೆಯನ್ನು ಖಂಡಿಸಿ ನಡೆದ
ಮೌನ ಮೆರವಣಿಗೆ ಮುನ್ನ ಅವರು ಮಾತನಾಡಿದರು.
ನಗರದ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ಮಾಡಲಾಯಿತು.
ಅಮಾಯಕ ಮುನಿಗಳ ಹತ್ಯೆಯಾಗಿದೆ. ಪೊಲೀಸ್ ಇಲಾಖೆ ಅವರ ಬಂಧನ ಮಾಡಿದೆ. ಆದರೆ ನಾವು ಕೇಳುವುದು ಆ ಆರೋಪಿಗಳು ಹೊರ ಬರದಂತೆ ಕಠಿಣ ಶಿಕ್ಷೆ ಗುರಿ ಪಡಿಸಬೇಕು ಹಾಗೂ ನಮ್ಮ ರಾಜ್ಯದಲ್ಲಿನ ಅಸುರಕ್ಷತೆ ಮತ್ತು ಭಯದ ವಾತಾವರಣವನ್ನು ನಿರ್ಮಿಸಿ, ಸಂವಿಧಾನ ಮತ್ತು ನ್ಯಾಯದ ಮೇಲಿನ ಭರವಸೆ ಕಡಿಮೆ ಮಾಡುವಂತಾಗಿದೆ. ಆದ್ದರಿಂದ ಕಾನೂನು ಈ ತಕ್ಷಣವೇ ಅಪರಾಧಿಗಳಿಗೆ ಯಾವುದೇ ರಕ್ಷಣೆ ನೀಡದೆ ಕಠಿಣ ಶಿಕ್ಷೆ ನೀಡಬೇಕು ಎಂದು ಅಗ್ರಹಿಸಲಾಯಿತು.


ಮಿನಿ ವಿಧಾನಸೌಧ ಬಳಿ ಮಾತನಾಡಿದ ವೀರ ರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ಕಾರ್ಯದರ್ಶಿ ಅಕ್ಷತಾ ಆದರ್ಶ್,ಮಹವೀರರ ತತ್ವವನ್ನು ಅವಳಡಿಸಿಕೊಂಡತಹ ಹಾಗೂ ಮುನಿಗಳಾದ ಆಚಾರ್ಯ 108 ಶ್ರೀ ಕಾಮಕುಮಾರನಂದ ಸಾಗರ ಹತ್ಯೆ ಜೈನ ಸಮುದಾಯಕ್ಕೆ ಅನ್ಯಾಯವಾಗಿದೆ.ನಾವು ತೀವ್ರವಾಗಿ ಖಂಡಿಸುತ್ತದೆ.
ಜೈನ ಶ್ರೀ ಮುನಿಗಳು ಗಳು ವಿಹಾರಕ್ಕೆ ಹೋಗುವ ಸಮಯದಲ್ಲಿ ಸಂದಣಿ ಇರುವುದಿಲ್ಲ. ಹಾಗಾಗಿ ಇತರ ಸಂತ ಮುನಿಗಳ ಸುರಕ್ಷತೆಯನ್ನು ಕಾಪಾಡುವ ಬಗ್ಗೆ ಸರಕಾರ ಗಮನ ಹರಿಸಬೇಕೆಂದು ಅವರು ಹೇಳಿದರು.


ಜೈನ್ ಮಿಲನ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಜೈನ್ ಮಾತನಾಡಿ,
ಎಲ್ಲಾ ಬಿಟ್ಟು ದಿಗಂಬರನಾಗಿದ್ದ ಸಂತರೊಬ್ಬ ಹತ್ಯೆಯು ಇತರ ಸಂತರಿಗೆ ಭಯ ಹುಟ್ಟಿಸಿದೆ.
ಜೈನ ಸಮುದಾಯಕ್ಕೆ ಹೆಚ್ಚಿನ ಭದ್ರತೆ ನೀಡಬೇಕು. ಈ ಕುರಿತು
ವಿಶೇಷ ತಂಡ ರಚಿಸಿ ಕ್ರಮ ಕೈಗೊಳ್ಳಬೇಕು ಎಂದು ನುಡಿದರು.
ನಂತರ ವಿಧಾನಸೌಧದ ಬಳಿಯಿಂದ ಮೌನ ಪ್ರತಿಭಟನಾ ಮೆರವಣಿಗೆಯಲ್ಲಿ ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಜೈನ್ ಸಮುದಾಯದ ಚಾರು ಕೀರ್ತಿ ಭಟ್ಟಾರಕ ಪುಷ್ಪರಾಜ್ ಜೈನ್,ಸುರೇಶ್ ಬಲ್ಲಾಳ್, ಸುದರ್ಶನ್ ಜೈನ್ ಬಂಟ್ವಾಳ, ಸುದೇಶ್ ಜೈನ್ ಮಕ್ಕಿ ಮನೆ, ಶ್ವೇತ ಜೈನ್ ಮತ್ತಿತರರು. ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು